ಕ್ರಿಕೆಟ್

IPL 2025: ಒಂದೇ ಓವರ್ ನಲ್ಲಿ 6,6,6,6,6,6; ಮೊಯಿನ್ ಅಲಿ ದಂಡಿಸಿದ ರಿಯಾನ್ ಪರಾಗ್! ಅದ್ಬುತ ವಿಡಿಯೋ

ರಿಯಾನ್ ಪರಾಗ್ ಮೈದಾನದ ಎಲ್ಲಾ ಕಡೆಗಳಿಗೆ ಸಿಕ್ಸರ್ ಎತ್ತುವ ಮೂಲಕ ಪರಾಕ್ರಮ ಮೆರೆದರು. ಸತತ ಆರು ಸಿಕ್ಸರ್‌ ಹೊಡೆದು ಪ್ರೇಕ್ಷಕರಿಗೆ ರಸದೌತಣ ಉಣಬಡಿಸಿದರು.

IPL 2025: ಒಂದೇ ಓವರ್ ನಲ್ಲಿ 6,6,6,6,6,6; ಮೊಯಿನ್ ಅಲಿ ದಂಡಿಸಿದ ರಿಯಾನ್ ಪರಾಗ್! ಅದ್ಬುತ ವಿಡಿಯೋ
ರಿಯಾನ್ ಪರಾಗ್
Published On :

ಕೋಲ್ಕತ್ತಾ: ಭಾರತದ ಕ್ರಿಕೆಟ್ ಕಾಶಿ ಎಂದೇ ಹೆಸರಾದ ಕೊಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಇಂದು ನಡೆಯುತ್ತಿರುವ ಕೆಕೆಆರ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಒಂದೇ ಓವರ್ ನಲ್ಲಿ ಬ್ಯಾಕ್ ಟು ಬ್ಯಾಕ್ 6 ಸಿಕ್ಸರ್ ಸಿಡಿಸಿದ್ದಾರೆ. ಈ ಮೂಲಕ ಪ್ರೇಕ್ಷಕರು ಹುಚ್ಚೆದು ಕುಣಿಯುವಂತೆ ಮಾಡಿದರು.

ಹೌದು, ಇಂಗ್ಲೆಂಡ್ ನ ಮಾಜಿ ಸ್ವಿನ್ನರ್ ಮೊಯಿನ್ ಅಲಿ ಅವರ 13ನೇ ಓವರ್ ನಲ್ಲಿ ಶಿಮ್ರಾನ್ ಹೆಟ್ಮೆಯರ್ ಮೊದಲ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡು ಪರಾಗ್ ಸ್ಟ್ರೈಕ್ ನೀಡಿದರು.

ನಂತರ ಕ್ರೀಸ್ ಗೆ ಬಂದ ರಿಯಾನ್ ಪರಾಗ್ ಮೈದಾನದ ಎಲ್ಲಾ ಕಡೆಗಳಿಗೆ ಸಿಕ್ಸರ್ ಎತ್ತುವ ಮೂಲಕ ಪರಾಕ್ರಮ ಮೆರೆದರು. ಬಳಿಕ ವರುಣ್ ಅವರ ಬೌಲಿಂಗ್ ನಲ್ಲಿ ಮೊದಲ ಎಸೆತವನ್ನು ಸಿಕ್ಸರ್ ಎತ್ತುವ ಮೂಲಕ ಸತತ ಆರು ಸಿಕ್ಸರ್‌ ಹೊಡೆದು ಪ್ರೇಕ್ಷಕರಿಗೆ ರಸದೌತಣ ಉಣಬಡಿಸಿದರು.

ತಮ್ಮ ಮೊದಲ ಸಿಕ್ಸರ್ ನಲ್ಲಿ ಈ ಟೂರ್ನಿಯಲ್ಲಿ ಮೊದಲ ಅರ್ಧ ಶತಕ ಗಳಿಸಿದ ರಿಯಾನ್, ಒಟ್ಟಾರೆಯಾಗಿ ಐಪಿಎಲ್ ಇತಿಹಾಸದಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.