ಕ್ರಿಕೆಟ್

IPL 2025: MS ಧೋನಿ ಜೊತೆ CSK CEO ಕಾಶಿ ವಿಶ್ವನಾಥ್ ಮಾತುಕತೆ ಚರ್ಚೆಗೆ ಗ್ರಾಸ!

ಫ್ರಾಂಚೈಸಿಯ ಇಬ್ಬರು ಪ್ರತಿಷ್ಠಿತ ವ್ಯಕ್ತಿಗಳ ನಡುವಿನ ಕ್ಷಣವು ಕ್ರೀಡಾಂಗಣದಲ್ಲಿನ ಪ್ರತಿಯೊಂದು ಕ್ಯಾಮರಾಗಳ ಕಣ್ಣಿಗೆ ಬಿದ್ದಿತು.

IPL 2025: MS ಧೋನಿ ಜೊತೆ CSK CEO ಕಾಶಿ ವಿಶ್ವನಾಥ್ ಮಾತುಕತೆ ಚರ್ಚೆಗೆ ಗ್ರಾಸ!
CSK CEO ಕಾಶಿ ವಿಶ್ವನಾಥ್ , ಧೋನಿ ಮಾತುಕತೆ
Published On :

ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್‌ನ ಐಪಿಎಲ್ 2025 ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋತು ಪ್ಲೇ ಆಫ್ ರೇಸ್ ನಿಂದ ಹೊರಬಿದ್ದ ನಂತರ ಮೈದಾನದ ಹೊರಗೆ ನಡೆದ ಒಂದು ಸನ್ನಿವೇಶ ಸಂಚಲನ ಮೂಡಿಸಿತು.

ಫ್ರಾಂಚೈಸಿಯ ಇಬ್ಬರು ಪ್ರತಿಷ್ಠಿತ ವ್ಯಕ್ತಿಗಳ ನಡುವಿನ ಕ್ಷಣವು ಕ್ರೀಡಾಂಗಣದಲ್ಲಿನ ಪ್ರತಿಯೊಂದು ಕ್ಯಾಮರಾಗಳ ಕಣ್ಣಿಗೆ ಬಿದ್ದಿತು. ಎಂಎಸ್ ಧೋನಿ ಮತ್ತು ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ ಸ್ವಲ್ಪ ಹೊತ್ತು ಮಾತನಾಡಿದ್ದಾರೆ. ಇದು ಸಾಮಾಜಿಕ ಮಾಧ್ಯಮಗಳಲ್ಲಿ ಹೊಸ ಊಹಾಪೋಹಗಳಿಗೆ ಕಾರಣವಾಗಿದೆ.

ಇಬ್ಬರು ಪರಸ್ಪರ ನಗುವಿನೊಂದಿಗೆ ಸಂಭಾಷಣೆ ನಡೆಸಿದ್ದಾರೆ. ಧೋನಿಯ ಮುಂದಿನ ಐಪಿಎಲ್ ಭವಿಷ್ಯ ನೇತಾಡುತ್ತಿರುವಾಗಲೇ ಈ ಮಾತುಕತೆಯ ವಿಡಿಯೋ ಕುರಿತು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

IPL 2026 ಟೂರ್ನಿಯಲ್ಲಿ ಧೋನಿ ಆಡುತ್ತಾರೆಯೇ?"ಎಂಬುದು ಖಚಿತವಾಗಿ ತಿಳಿದಿಲ್ಲ. ಆದರೆ ದೇಹ ಭಾಷೆ, ನಗು, ತಲೆಯಾಡಿಸುವಿಕೆ ಹಾಗೂ ಕಣ್ಣಿನ ಸಂದೇಶವನ್ನು ತಜ್ಞರು ಮತ್ತು ಧೋನಿ ಅಭಿಮಾನಿಗಳು ಅರಿವಿನ ಪ್ರಯತ್ನ ನಡೆಸಿದ್ದಾರೆ. ಈ ಮಾತುಕತೆಯನ್ನು ವಿಶೇಷವಾಗಿ ನೋಡಿತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.