IPL 2025: CSK ವಿರುದ್ಧದ ಪಂದ್ಯದಲ್ಲಿ ಯುಜ್ವೇಂದ್ರ ಚಾಹಲ್ ಹ್ಯಾಟ್ರಿಕ್ ಸಾಧನೆ; ಆರ್‌ಜೆ ಮಹ್ವಾಶ್ ಪ್ರತಿಕ್ರಿಯೆ
2023ರ ನಂತರದ ಮೊದಲ ಐಪಿಎಲ್ ಹ್ಯಾಟ್ರಿಕ್ ಮತ್ತು ಐಪಿಎಲ್ 2022ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಸ್ಪೆಲ್ ನಂತರ ಚಾಹಲ್ ಅವರ ವೃತ್ತಿಜೀವನದ ಎರಡನೇ ಹ್ಯಾಟ್ರಿಕ್ ಸಾಧನೆ ಇದಾಗಿದೆ.

ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿರುವ ಯುಜ್ವೇಂದ್ರ ಚಾಹಲ್ ಬುಧವಾರ ಅದ್ಭುತ ಪ್ರದರ್ಶನ ನೀಡಿದರು. ಚೆನ್ನೈನ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025ರ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ಪಂಜಾಬ್ ಕಿಂಗ್ಸ್ (PBKS) ಪರ ಆಡುತ್ತಿದ್ದ ಯುಜ್ವೇಂದ್ರ ಚಾಹಲ್, ಈ ಆವೃತ್ತಿಯಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸಿಎಸ್‌ಕೆ ಇನಿಂಗ್ಸ್‌ನ 19ನೇ ಓವರ್‌ನಲ್ಲಿ ನಾಲ್ಕು ವಿಕೆಟ್ ಕಬಳಿಸುವ ಮೂಲಕ 190 ರನ್‌ಗಳಿಗೆ ಸಿಎಸ್‌ಕೆಯನ್ನು ಕಟ್ಟಿಹಾಕಿದರು.
2023ರ ನಂತರದ ಮೊದಲ ಐಪಿಎಲ್ ಹ್ಯಾಟ್ರಿಕ್ ಮತ್ತು ಐಪಿಎಲ್ 2022ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಸ್ಪೆಲ್ ನಂತರ ಚಾಹಲ್ ಅವರ ವೃತ್ತಿಜೀವನದ ಎರಡನೇ ಹ್ಯಾಟ್ರಿಕ್ ಸಾಧನೆ ಇದಾಗಿದೆ.
ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಚಾಹಲ್ ಒಂದೇ ಓವರ್‌ನಲ್ಲಿ ನಾಲ್ಕು ವಿಕೆಟ್ ಪಡೆದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದರು. ಬುಧವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆಯೂ ಅದನ್ನೇ ಪುನರಾವರ್ತಿಸಿದರು.
ಈ ಸಾಧನೆಯ ನಂತರ, ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಪಿನ್ನರ್ ಜೊತೆ ಕಾಣಿಸಿಕೊಂಡಿದ್ದ ಮತ್ತು ನಂತರ ಪಂಜಾಬ್ ಕಿಂಗ್ಸ್ ತಂಡದ ಬಸ್ಸು ಹತ್ತಿದ್ದ ಆರ್‌ಜೆ ಮಹ್ವಾಶ್, ವಿಶೇಷ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. 'ಗಾಡ್ ಮೋಡ್ ಆನ್ ಕ್ಯಾ (ದೇವರ ಮೋಡ್ ಆನ್ ಆಗಿದೆಯೇ)? @yuzi_chahal23 ಯೋಧನ ಶಕ್ತಿ ಸರ್' ಎಂದು ಮಹ್ವಾಶ್ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ.
ಇನಿಂಗ್ಸ್ ನಂತರ ಮಾತನಾಡಿದ ಚಾಹಲ್, 'ತುಂಬಾ ಚೆನ್ನಾಗಿತ್ತು, ಅದು 19ನೇ ಓವರ್ ಮತ್ತು ನನ್ನ ಮುಂದೆ ಮಹಿ ಭಾಯ್ ಇದ್ದರು. ವಿಕೆಟ್ ಪಡೆಯುವುದು ನನ್ನ ಯೋಜನೆಯಾಗಿತ್ತು. ಐದು ಫೀಲ್ಡರ್‌ಗಳು ಒಳಗೆ ಇದ್ದರು ಮತ್ತು ನನ್ನ ಯೋಜನೆ ಸ್ಟಂಪ್‌ಗಳ ಮೇಲೆ ಬೌಲಿಂಗ್ ಮಾಡುವುದಾಗಿತ್ತು ಮತ್ತು ವೈಡ್ ಬೌಲಿಂಗ್ ಮಾಡುವುದು, ಸುಲಭವಾದ ಚೆಂಡುಗಳನ್ನು ಬೌಲ್ ಮಾಡುವುದಲ್ಲ ಮತ್ತು ಬ್ಯಾಟರ್‌ನ ಮನಸ್ಸಿನೊಂದಿಗೆ ಆಟವಾಡುವುದಾಗಿತ್ತು' ಎಂದು ಹೇಳಿದರು.

ಚಾಹಲ್ ತನ್ನ ಹ್ಯಾಟ್ರಿಕ್ ಸಾಧನೆಯ ನಂತರದ ವಿಶಿಷ್ಟ ರೀತಿಯ ಸಂಭ್ರಮಾಚರಣೆ ಕುರಿತು ವಿವರಿಸಿದರು.
'ಇದು ಮೀಮ್ಸ್‌ನಿಂದ ಬಂದಿದೆ ಮತ್ತು ನಾನು ಐದು ಅಥವಾ ಹ್ಯಾಟ್ರಿಕ್ ಪಡೆದರೆ ಈ ಆಚರಣೆಯನ್ನು ಮಾಡಲು ಯೋಜಿಸಿದ್ದೆ. ಇದು ಸುಲಭವಲ್ಲ, 190 ಉತ್ತಮ ಸ್ಕೋರ್, ಚೆಂಡು ಹಳೆಯದಾದಾಗ, ಅದು ತಿರುಗುತ್ತದೆ. ಆದರೆ, ಚೇಸ್ ಮಾಡಲು ಕೂಡ ಉತ್ತಮ ಮೊತ್ತ' ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



