ಕ್ರಿಕೆಟ್

IPL 2025: 0.14 ಸೆಕೆಂಡ್ ನಲ್ಲೇ ಸ್ಟಂಪೌಟ್, MS Dhoni ವೇಗಕ್ಕೆ Phil Salt ಬೇಸ್ತು! Video

ಆರ್ ಸಿಬಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿತು. ಆರ್ ಸಿಬಿ ಪರ ಫಿಲಿಪ್ ಸಾಲ್ಟ್ ಅದ್ಭುತ ಓಪನಿಂಗ್ ಮಾಡಿದರು. ಕೇವಲ 16 ಎಸೆತಗಳಲ್ಲಿ 1 ಸಿಕ್ಸರ್, 5 ಬೌಂಡರಿ ಸಹಿತ 32 ರನ್ ಕಲೆ ಹಾಕಿ ಆರ್ ಸಿಬಿಗೆ ಭರ್ಜರಿ ಆರಂಭ ನೀಡಿದರು.

IPL 2025: 0.14 ಸೆಕೆಂಡ್ ನಲ್ಲೇ ಸ್ಟಂಪೌಟ್, MS Dhoni ವೇಗಕ್ಕೆ Phil Salt ಬೇಸ್ತು! Video
ಎಂಎಸ್ ಧೋನಿ ಮಿಂಚಿನ ಸ್ಟಂಪೌಟ್
Published On :

ಚೆನ್ನೈ: ಐಪಿಎಲ್ ಟೂರ್ನಿಯ ಇಂದಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಹೇಂದ್ರ ಸಿಂಗ್ ಧೋನಿ ಅದ್ಭುತ ಸ್ಟಂಪೌಟ್ ಮಾಡಿದ್ದಾರೆ.

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಆರ್ ಸಿಬಿಯ ಫಿಲಿಪ್ ಸಾಲ್ಟ್ ರನ್ನು ಮಿಂಚಿನ ವೇಗದ ಸ್ಟಂಪೌಟ್ ಮಾಡಿದ್ದಾರೆ. ಕೇವಲ 0.14 ಸೆಕೆಂಡ್ ನಲ್ಲೇ ಸ್ಟಪೌಂಟ್ ಮಾಡಿ ಮತ್ತೆ ಧೋನಿ ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಿದ್ದಾರೆ.

ಇಂದಿನ ಪಂದ್ಯದಲ್ಲಿ ಆರ್ ಸಿಬಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿತು. ಆರ್ ಸಿಬಿ ಪರ ಫಿಲಿಪ್ ಸಾಲ್ಟ್ ಅದ್ಭುತ ಓಪನಿಂಗ್ ಮಾಡಿದರು. ಕೇವಲ 16 ಎಸೆತಗಳಲ್ಲಿ 1 ಸಿಕ್ಸರ್, 5 ಬೌಂಡರಿ ಸಹಿತ 32 ರನ್ ಕಲೆ ಹಾಕಿ ಆರ್ ಸಿಬಿಗೆ ಭರ್ಜರಿ ಆರಂಭ ನೀಡಿದರು. ಆದರೆ ಈ ಹಂತದಲ್ಲಿ ನೂರ್ ಅಹ್ಮದ್ ಬೌಲಿಂಗ್ ನಲ್ಲಿ ಎಂಎಸ್ ಧೋನಿ ಮಾಡಿದ ಅದ್ಭುತ ಸ್ಟಪಿಂಗ್ ಗೆ ಸಾಲ್ಟ್ ಬಲಿಯಾದರು.

ಧೋನಿ ಕೇವಲ 0.14 ಸೆಕೆಂಡ್ ನಲ್ಲೇ ಸ್ಟಂಪೌಟ್ ಮಾಡಿದ್ದು ಇದು ಈ ವರೆಗೂ ನಡೆದ ಪಂದ್ಯಗಳ ಪೈಕಿ 2ನೇ ವೇಗದ ಸ್ಟಂಪೌಟ್ ಆಗಿದೆ. ನೂರ್ ಅಹ್ಮದ್ ಎಸೆದ 5ನೇ ಓವರ್‌ನ ಕೊನೆಯ ಎಸೆತದಲ್ಲಿ ಸಾಲ್ಟ್‌ರ ವಿಕೆಟ್ ಪತನವಾಯಿತು.

ಈ ಹಿಂದೆ ಧೋನಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು 0.12 ಸೆಕೆಂಡ್​ನಲ್ಲಿ ಸ್ಟಂಪೌಟ್ ಮಾಡಿದ್ದರು. ಇದು ಈ ಟೂರ್ನಿಯ ವೇಗದ ಸ್ಚಂಪೌಟ್ ಆಗಿದೆ. 43ನೇ ವಯಸ್ಸಿನಲ್ಲೂ ಧೋನಿ ಅದ್ಭುತ ವಿಕೆಟ್ ಕೀಪಿಂಗ್ ಮಾಡುತ್ತಿದ್ದು ಅವರ ವಯಸ್ಸಿಗೂ ಅವರ ಆಟಕ್ಕೂ ಸಂಬಂಧವೇ ಇಲ್ಲದಂತೆ ಅದ್ಭುತ ಪ್ರದರ್ಶನದ ಮೂಲಕ ಅಭಿಮಾನಿಗಳ ಮನ ಗೆಲ್ಲುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.