IPL 2025: ಐಪಿಎಲ್ ಇತಿಹಾಸದಲ್ಲೇ 2ನೇ ಗರಿಷ್ಠ ಮೊತ್ತ ದಾಖಲು, ತನ್ನದೇ ದಾಖಲೆ ಮುರಿದ SRH
ಐಪಿಎಲ್ 2025 ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ಇಶಾನ್ ಕಿಶನ್ ಸ್ಫೋಟಕ ಶತಕ, ಟ್ರಾವಿಸ್ ಹೆಡ್ ಅರ್ಧಶತಕದ ನೆರವಿನಿಂದ 20 ಓವರ್ಗಳಲ್ಲಿ 286 ರನ್ಗಳ ಬೃಹತ್ ರನ್ ಕಲೆ ಹಾಕಿತು.

ಹೈದರಾಬಾದ್: 2025ರ ಐಪಿಎಲ್ ಟೂರ್ನಿ ಭರ್ಜರಿ ಆರಂಭ ಕಂಡಿದ್ದು, ನಿನ್ನೆ ಆರ್ ಸಿಬಿ ಭರ್ಜರಿ ಜಯ ಗಳಿಸಿದರೆ, ಇಂದು ಸನ್ ರೈಸರ್ಸ್ ಹೈದರಾಬಾದ್ ತಂಡ ತನ್ನ ಸ್ಫೋಟಕ ಬ್ಯಾಟಿಂಗ್ ಮೂಲಕ ದಾಖಲೆಯನ್ನೇ ನಿರ್ಮಿಸಿದೆ.
ಹೌದು.. ಐಪಿಎಲ್ 2025 ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ಇಶಾನ್ ಕಿಶನ್ ಸ್ಫೋಟಕ ಶತಕ, ಟ್ರಾವಿಸ್ ಹೆಡ್ ಅರ್ಧಶತಕದ ನೆರವಿನಿಂದ 20 ಓವರ್ಗಳಲ್ಲಿ 286 ರನ್ಗಳ ಬೃಹತ್ ರನ್ ಕಲೆ ಹಾಕಿತು.
ಇಶಾನ್ ಕಿಶನ್ ಕೇವಲ 47 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 11 ಬೌಂಡರಿಗಳ ನೆರವಿನಿಂದ ಅಜೇಯ 106 ರನ್ ಪೇರಿಸಿದರು. ಅತ್ತ ಟ್ರಾವಿಸ್ ಹೆಡ್ ಕೂಡ 31 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 9 ಬೌಂಡರಿಗಳ ನೆರವಿನಿಂದ 67 ರನ್ ಪೇರಿಸಿದರು. ಈ ಜೋಡಿಯ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಹೈದರಾಬಾದ್ ತಂಡ ನಿಗಧಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 286 ರನ್ ಪೇರಿಸಿತು.
ಐಪಿಎಲ್ ಇತಿಹಾಸದ 2ನೇ ಗರಿಷ್ಠ ಮೊತ್ತ
ಆ ಮೂಲಕ ಸನ್ ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ ಇತಿಹಾಸದ 2ನೇ ಗರಿಷ್ಠ ಮೊತ್ತ ದಾಖಲಿಸಿದೆ. ಇದು ಐಪಿಎಲ್ನಲ್ಲಿ ದಾಖಲಾದ ಎರಡನೇ ಅತಿ ದೊಡ್ಡ ಸ್ಕೋರ್ ಆಗಿದ್ದು, ಈ ಹಿಂದೆ ಹೈದರಾಬಾದ್ ತಂಡವು ಆರ್ಸಿಬಿ ವಿರುದ್ಧ 3 ವಿಕೆಟ್ಗೆ 287 ರನ್ ಗಳಿಸಿತ್ತು. ಇದು ಐಪಿಎಲ್ ಇತಿಹಾಸದ ಮೊದಲ ಗರಿಷ್ಠ ಮೊತ್ತವಾಗಿದೆ.
Highest team totals in the IPL
287/3 - SRH vs RCB, Bengaluru, 2024
286/6 - SRH vs RR, Hyderabad, today*
277/3 - SRH vs MI, Hyderabad, 2024
272/7 - KKR vs DC, Visakhapatnam, 2024
266/7 - SRH vs DC, Delhi, 2024
263/5 - RCB vs PWI, Bengaluru, 2013
ಟಿ20 ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಬಾರಿ 250+ ಸ್ಕೋರ್, SRH ದಾಖಲೆ
ಅಂತೆಯೇ ಟಿ20 ಮಾದರಿ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಬಾರಿ 250ಕ್ಕೂ ಅಧಿಕ ರನ್ ಗಳಿಸಿದ ತಂಡಗಳ ಪಟ್ಟಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಅಗ್ರ ಸ್ಥಾನಕ್ಕೇರಿದ್ದು, ಇಂದಿನ ಪಂದ್ಯವೂ ಸೇರಿದಂತೆ ಹೈದರಾಬಾದ್ ತಂಡ ಬರೊಬ್ಬರಿ 4 ಬಾರಿ 250ಕ್ಕೂ ಅಧಿಕ ಸ್ಕೋರ್ ಕಲೆಹಾಕಿದೆ. ಉಳಿದಂತೆ ಇಂಗ್ಲೆಂಡ್ ಕೌಂಟಿ ಕ್ರಿಕೆಟ್ ಟೂರ್ನಿಯಲ್ಲಿ ಸರ್ರೆ ತಂಡ 3 ಬಾರಿ ಈ ಸಾಧನೆ ಮಾಡಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಭಾರತ ತಂಡ 3 ಬಾರಿ ಈ ಸಾಧನೆ ಮಾಡಿದ ಕೀರ್ತಿ ಹೊಂದಿದೆ.
Most 250+ totals in T20 cricket
4 - SRH*
3 - Surrey
3 - India
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




