ಕ್ರಿಕೆಟ್

IPL 2025: KKR v/s LSG ಪಂದ್ಯ ಕೊಲ್ಕತ್ತಾದಿಂದ ಗುವಾಹಟಿಗೆ ಸ್ಥಳಾಂತರ! ಇದೇ ಕಾರಣ

ಈ ಪಂದ್ಯವನ್ನು ಗುವಾಹಟಿಯ ಬರ್ಸಾಪರಾ ಕ್ರೀಡಾಂಗಣದಲ್ಲಿ ನಡೆಸಲು ನಿರ್ಧರಿಸಲಾಗಿದೆ.

IPL 2025: KKR v/s LSG ಪಂದ್ಯ ಕೊಲ್ಕತ್ತಾದಿಂದ ಗುವಾಹಟಿಗೆ ಸ್ಥಳಾಂತರ! ಇದೇ ಕಾರಣ
ಈಡನ್ ಗಾರ್ಡನ್ ಕ್ರೀಡಾಂಗಣ
Published On :

ಕೊಲ್ಕತ್ತಾ: ಭಾರತದ ಕ್ರಿಕೆಟ್ ಕಾಶಿ ಎಂದೇ ಹೆಸರಾದ ಕೊಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಏಪ್ರಿಲ್ 6 ರಂದು ನಡೆಯಬೇಕಿದ್ದ ಕೊಲ್ಕತ್ತಾ ನೈಟ್ ರೈಡರ್ಸ್ (kkr) ಮತ್ತು ಲಕ್ನೋ ಸೂಪರ್ ಜೈಂಟ್ಸ್ (LSG) ನಡುವಿನ ಐಪಿಎಲ್ ಪಂದ್ಯವನ್ನು ಸ್ಥಳಾಂತರಿಸಲಾಗಿದೆ. ಈ ಪಂದ್ಯವನ್ನು ಗುವಾಹಟಿಯ ಬರ್ಸಾಪರಾ ಕ್ರೀಡಾಂಗಣದಲ್ಲಿ ನಡೆಸಲು ನಿರ್ಧರಿಸಲಾಗಿದೆ.

ಅಂದು ರಾಮನವವಿ ಹಬ್ಬ ಇರುವುದರಿಂದ ಎದುರಾಗುವ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಬೇರೆಡೆಗೆ ಐಪಿಎಲ್ ಪಂದ್ಯವನ್ನು ಸ್ಥಳಾಂತರ ಮಾಡುವಂತೆ ಕೊಲ್ಕತ್ತಾ ಪೊಲೀಸರು ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ​​(CAB)ಗೆ ಮನವಿ ಮಾಡಿದ್ದರು. ಇದರಿಂದ ನಗರಾದಾದ್ಯಂತ ಪೊಲೀಸ್ ಭದ್ರತೆ ಹೆಚ್ಚಿಸಬಹುದಾಗಿದೆ ಎಂದು ಹೇಳಲಾಗಿತ್ತು.

ತದನಂತರ ಏಪ್ರಿಲ್ 6 ರಂದು ನಡೆಯಬೇಕಿದ್ದ ಕೊಲ್ಕತ್ತಾ ಮತ್ತು ಲಕ್ನೋ ನಡುವಿನ ಪಂದ್ಯವನ್ನು ಗುವಾಹಟಿಗೆ ಸ್ಥಳಾಂತರಿಸಲಾಗಿದೆ.

ಕೋಲ್ಕತ್ತಾದಲ್ಲಿ ಐಪಿಎಲ್ ಪಂದ್ಯಗಳು ಹೀಗೆ ಬೇರೆಡೆಗೆ ಸ್ಥಳಾಂತರವಾಗಿರುವುದು ಇದೇ ಮೊದಲೇನಲ್ಲಾ. ಈ ಹಿಂದೆಯೂ ಪ್ರಮುಖ ಹಬ್ಬಗಳ ಸಂದರ್ಭದಲ್ಲಿ ಪಂದ್ಯವನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ಇದು ಸಾಂಸ್ಕೃತಿಕ ಹಾಗೂ ಪ್ರಮುಖ ಕ್ರೀಡಾಕೂಟದ ನಡುವೆ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಎದುರಾಗುವ ಭದ್ರತೆಯ ಸವಾಲನ್ನು ತೋರಿಸುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.