ICC ಪ್ರತಿಷ್ಠಿತ ಸರ್ ಗಾರ್ಫೀಲ್ಡ್ ಸೋಬರ್ಸ್ ಪ್ರಶಸ್ತಿ ಗೆದ್ದ Jasprit Bumrah; ಭಾರತದ 5ನೇ ಆಟಗಾರ!
ಐಸಿಸಿ ಟೆಸ್ಟ್ ಬೌಲರ್‌ಗಳ ಶ್ರೇಯಾಂಕದಲ್ಲಿ ಬುಮ್ರಾ ಅವರ ಕೌಶಲ್ಯವು ಪ್ರತಿಫಲಿಸುತ್ತದೆ. ಇದರಲ್ಲಿ ಅವರು 900 ಅಂಕಗಳನ್ನು ದಾಟಿದ್ದಲದೆ ವರ್ಷವನ್ನು 907 ಅಂಕಗಳೊಂದಿಗೆ ಕೊನೆಗೊಳಿಸಿದರು.

ನವದೆಹಲಿ: ಟೀಂ ಇಂಡಿಯಾದ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಅವರನ್ನು ಐಸಿಸಿ ವರ್ಷದ ಅತ್ಯುತ್ತಮ ಪುರುಷ ಕ್ರಿಕೆಟಿಗನಿಗೆ ನೀಡುವ ಸರ್ ಗಾರ್ಫೀಲ್ಡ್ ಸೋಬರ್ಸ್ ಪ್ರಶಸ್ತಿಗೆ ಆಯ್ಕೆ ಮಾಡಿದೆ. 2024ರಲ್ಲಿ ಬುಮ್ರಾ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಕೌಶಲ್ಯ, ಸ್ಥಿರತೆ ಮತ್ತು ನಿಖರ ಪ್ರದರ್ಶನ ನೀಡಿದ್ದರು. 31 ವರ್ಷದ ಬುಮ್ರಾ ಸೋಮವಾರ ಐಸಿಸಿ ವರ್ಷದ ಪುರುಷ ಕ್ರಿಕೆಟಿಗ ಎಂದು ಹೆಸರಿಸಲ್ಪಟ್ಟಿದ್ದು ವರ್ಷದ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದರು.
ಬುಮ್ರಾ ಅವರಿಗಿಂತ ಮೊದಲು, ಭಾರತದಿಂದ ರಾಹುಲ್ ದ್ರಾವಿಡ್ (2004), ಸಚಿನ್ ತೆಂಡೂಲ್ಕರ್ (2010), ರವಿಚಂದ್ರನ್ ಅಶ್ವಿನ್ (2016) ಮತ್ತು ವಿರಾಟ್ ಕೊಹ್ಲಿ (2017 ಮತ್ತು 2018) ವಿಶ್ವದ ಅಗ್ರ ಆಟಗಾರರಾಗಿದ್ದು ಈ ಪ್ರಶಸ್ತಿಯನ್ನು ಪಡೆದಿದ್ದರು.
ಐಸಿಸಿ ಟೆಸ್ಟ್ ಬೌಲರ್‌ಗಳ ಶ್ರೇಯಾಂಕದಲ್ಲಿ ಬುಮ್ರಾ ಅವರ ಕೌಶಲ್ಯವು ಪ್ರತಿಫಲಿಸುತ್ತದೆ. ಇದರಲ್ಲಿ ಅವರು 900 ಅಂಕಗಳನ್ನು ದಾಟಿದ್ದಲದೆ ವರ್ಷವನ್ನು 907 ಅಂಕಗಳೊಂದಿಗೆ ಕೊನೆಗೊಳಿಸಿದರು. ಇದು ಶ್ರೇಯಾಂಕದ ಇತಿಹಾಸದಲ್ಲಿ ಯಾವುದೇ ಭಾರತೀಯ ಬೌಲರ್‌ಗಿಂತ ಅತ್ಯಧಿಕವಾಗಿದೆ ಎಂದು ಐಸಿಸಿ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



