WPL 2025: ಪಂದ್ಯ ಟೈ; ಸೂಪರ್ ಓವರ್ ನಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಸೋತ RCB
ಮಹಿಳಾ ಪ್ರೀಮಿಯರ್ ಲೀಗ್ (WPL)ನಲ್ಲಿ ಉತ್ತರ ಪ್ರದೇಶ ವಾರಿಯರ್ಸ್ ಮತ್ತು ಆರ್ ಸಿಬಿ ನಡುವಿನ ಪಂದ್ಯ ಟೈ ಆಗಿದ್ದು ನಂತರ ನಡೆದ ಸೂಪರ್ ಓವರ್ ನಲ್ಲಿ ಉತ್ತರ ಪ್ರದೇಶ ವಾರಿಯರ್ಸ್ ಗೆಲುವು ಸಾಧಿಸಿದೆ.

ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್ (WPL)ನಲ್ಲಿ ಉತ್ತರ ಪ್ರದೇಶ ವಾರಿಯರ್ಸ್ ಮತ್ತು ಆರ್ ಸಿಬಿ ನಡುವಿನ ಪಂದ್ಯ ಟೈ ಆಗಿದ್ದು ನಂತರ ನಡೆದ ಸೂಪರ್ ಓವರ್ ನಲ್ಲಿ ಉತ್ತರ ಪ್ರದೇಶ ವಾರಿಯರ್ಸ್ ಗೆಲುವು ಸಾಧಿಸಿದೆ.
ಸೂಪರ್ ಓವರ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಯುಪಿ 8 ರನ್ ಗಳಿಸಿತ್ತು. ನಂತರ ಬ್ಯಾಟಿಂಗ್ ಮಾಡಿದ ಆರ್ ಸಿಬಿ 4 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ನಿಗದಿತ ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 180 ರನ್ ಪೇರಿಸಿತ್ತು. ಈ ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಸ್ ನಿಗದಿತ ಓವರ್ ನಲ್ಲಿ 180 ರನ್ ಪೇರಿಸಿದ್ದು ಪಂದ್ಯ ಟೈ ಆಯಿತು.
ಯುಪಿ ಪರ ಕಿರಣ್ ನವ್ಗಿರೆ 24, ದೀಪ್ತಿ ಶರ್ಮಾ 25, ಶ್ವೇತಾ ಶೆರಾವತ್ 31 ರನ್ ಗಳಿಸಿದ್ದರೆ ಸೋಫಿ ಎಕ್ಲೆಸ್ಟನ್ 33 ರನ್ ಗಳಿಸಿ ತಂಡವನ್ನು ಗೆಲುವತ್ತ ಕೊಂಡೊಯ್ದರು. ಆದರೆ ಕೊನೆಯ ಎಸೆತದಲ್ಲಿ 1 ರನ್ ಬೇಕಿದ್ದು 1 ವಿಕೆಟ್ ಮಾತ್ರ ಉಳಿದಿತ್ತು. ಈ ವೇಳೆ ಕೀಪರ್ ರನೌಟ್ ಮಾಡುವ ಮೂಲಕ ಸೋಫಿಯನ್ನು ಔಟ್ ಮಾಡಿದ್ದು ಪಂದ್ಯ ಟೈ ಆಯಿತು. ನಂತರ ಸೂಪರ್ ಓವರ್ ನಡೆಯಿತು. ಆರ್ ಸಿಬಿ ಪರ ಬೌಲಿಂಗ್ ನಲ್ಲಿ ಸ್ನೇಹ್ ರಾಣಾ 3, ರೇಣುಕಾ ಸಿಂಗ್, ಕಿಮ್ ಗಾರ್ತ್ ತಲಾ 2 ವಿಕೆಟ್ ಪಡೆದರು.
ಆರ್ ಸಿಬಿ ಪರ ಡ್ಯಾನಿ ವೈಟ್-ಹಾಡ್ಜ್ ಮತ್ತು ಎಲ್ಲಿಸ್ ಪೆರ್ರಿ ಅರ್ಧಶತಕ ಸಿಡಿಸಿದ್ದು ತಂಡ ಬೃಹತ್ ಮೊತ್ತ ಕಲೆಹಾಕಿದೆ. ಆರಂಭಿಕರಾಗಿ ಕಣಕ್ಕಿಳಿದ ಸ್ಮೃತಿ ಮಂದಾನ 6 ರನ್ ಗಳಿಗೆ ಔಟಾಗಿ ನಿರಾಸೆ ಮೂಡಿಸಿದರು. ಆದರೆ ಡ್ಯಾನಿ ವೈಟ್-ಹಾಡ್ಜ್ ಮತ್ತು ಎಲ್ಲಿಸ್ ಪೆರ್ರಿ 94 ರನ್ ಗಳ ಜೊತೆಯಾಟವಾಡಿದರು. ಡ್ಯಾನಿ 57 ರನ್ ಗಳಿಸಿ ಔಟಾದರು. ಆದರೆ ಎಲ್ಲಿಸ್ ಪೆರ್ರಿ 55 ಎಸೆತಗಳಲ್ಲಿ 3 ಸಿಕ್ಸರ್ 9 ಬೌಂಡರಿ ಸೇರಿದಂತೆ ಅಜೇಯ 90 ರನ್ ಕಲೆಹಾಕಿದರು. ಉತ್ತರ ಪ್ರದೇಶ ವಾರಿಯರ್ಸ್ ಪರ ಬೌಲಿಂಗ್ ನಲ್ಲಿ ಹೆನ್ರಿ, ದೀಪ್ತಿ ಶರ್ಮಾ ಮತ್ತು ತಹ್ಲಿಯಾ ಮೆಕ್‌ಗ್ರಾತ್ ತಲಾ ಒಂದು ವಿಕೆಟ್ ಪಡೆದಿದ್ದಾರೆ.

Champions Trophy 2025: ಬಾಂಗ್ಲಾ ವಿರುದ್ಧ ಗೆದ್ದ ಕಿವೀಸ್ ಪಡೆ; ಸೆಮೀಸ್ ಗೆ ಭಾರತ- ನ್ಯೂಜಿಲ್ಯಾಂಡ್ ಎಂಟ್ರಿ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


