ಕ್ರಿಕೆಟ್

WPL 2025: Gujarat Giants ವಿರುದ್ಧ RCB ಗೆ ಭರ್ಜರಿ ಮೊದಲ ಗೆಲುವು; ದಾಖಲೆ!

203 ರನ್ ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಆರ್ ಸಿಬಿ ತಂಡದ ಪರ ರಿಚಾ ಘೋಷ್ (64) ಹಾಗೂ ಪೆರಿ (57) ಅಬ್ಬರದ ಬ್ಯಾಟಿಂಗ್ ಗೆ ಗುಜರಾತ್ ಬೌಲರ್ ಗಳು ತತ್ತರಿಸಿದರು.

WPL 2025: Gujarat Giants ವಿರುದ್ಧ RCB ಗೆ ಭರ್ಜರಿ ಮೊದಲ ಗೆಲುವು; ದಾಖಲೆ!
ಆರ್ ಸಿಬಿ — online desk
Published On :

ವಡೋದರ: ಡಬ್ಲ್ಯುಪಿಎಲ್ 2025 ರ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಆರ್ ಸಿಬಿಗೆ ಭರ್ಜರಿ ಜಯ ದೊರೆತಿದೆ. ಹಾಲಿ ಚಾಂಪಿಯನ್ಸ್ ಗಳಾದ ರಾಯಲ್ ಚಾಲೆಂಜರ್ಸ್ ತಂಡ ರನ್ ಚೇಸಿಂಗ್ ನಲ್ಲಿ ದಾಖಲೆ ನಿರ್ಮಿಸಿದೆ.

203 ರನ್ ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಆರ್ ಸಿಬಿ ತಂಡದ ಪರ ರಿಚಾ ಘೋಷ್ (64) ಹಾಗೂ ಪೆರಿ (57) ಅಬ್ಬರದ ಬ್ಯಾಟಿಂಗ್ ಗೆ ಗುಜರಾತ್ ಬೌಲರ್ ಗಳು ತತ್ತರಿಸಿದರು. ಆರ್ ಸಿಬಿ 6 ವಿಕೆಟ್ ಗಳೊಂದಿಗೆ ಮೊದಲ ಗೆಲುವು ದಾಖಲಿಸಿದೆ.

ವಡೋದರಾದ ಕೋಟಂಬಿ ಕ್ರಿಕೆಟ್ ಮೈದಾನದಲ್ಲಿ ಟಾಸ್ ಗೆದ್ದ ಆರ್ ಸಿಬಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತು, ಗುಜರಾತ್ ತಂಡದ ಪರ ಆಶ್ಲೆ ಗಾರ್ಡ್ನರ್ ಅವರ ಸ್ಫೋಟಕ ಬ್ಯಾಟಿಂಗ್ (79 ರನ್) ಗಳ ನೆರವಿನಿಂದಾಗಿ ತಂಡಕ್ಕೆ ಬೃಹತ್ ಮೊತ್ತ ಗಳಿಸಲು ಸಾಧ್ಯವಾಯಿತು. 20 ಓವರ್ ಗಳಲ್ಲಿ ಗುಜರಾತ್ ತಂಡ 5 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತು.

ಗುಜರಾತ್ ತಂಡದ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಆರ್ ಸಿಬಿ 18.3 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿ ಗೆಲುವು ಸಾಧಿಸಿತು.

ಆರಂಭಿಕ ಆಟಗಾರರಾದ ಸ್ಮೃತಿ ಮಂಧಾನ (9) ಡೇನಿಯಲ್ ವ್ಯಾಟ್ (4) ರನ್ ಗಳಿಸಿ ನಿರೀಕ್ಷೆ ಹುಸಿಗೊಳಿಸಿದರು. ಪರಿಣಾಮ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಆ ಬಳಿಕ ಎಲಿಸ್ ಪೆರಿ ಮತ್ತು ರಾಘವಿ 86 ರನ್ ಗಳ ಜೊತೆಯಾಟ ಆಡಿದ್ದು ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿತ್ತು. ಬಳಿಕ ರಿಚಾ ಘೋಷ್ 27 ಎಸೆತಗಳಲ್ಲಿ 64 ರನ್ ಗಳಿಸಿದ್ದು ತಂಡದ ಗೆಲುವಿಗೆ ಸಹಕಾರಿಯಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.