ಕ್ರಿಕೆಟ್

ಭಾರತದ ಗೆಲುವಿನ ನಿರೀಕ್ಷೆಗೆ ಪೆಟ್ಟು: ಬೌಂಡರಿ ಲೈನ್ ಬಳಿ Mohammed Siraj ಎಡವಟ್ಟು; Video!

19 ರನ್ ಗಳಿಸಿದ್ದಾಗ ಹ್ಯಾರಿ ಬ್ರೂಕ್‌ ನೀಡಿದ ಕ್ಯಾಚ್ ಅನ್ನು ಮೊಹಮ್ಮದ್ ಸಿರಾಜ್ ಕೈಚೆಲ್ಲಿದ್ದು ಇದು ಭಾರತ ತಂಡ ಗೆಲ್ಲುವ ಭರವಸೆಯನ್ನು ಕಸಿದುಕೊಂಡಿತು.

ಭಾರತದ ಗೆಲುವಿನ ನಿರೀಕ್ಷೆಗೆ ಪೆಟ್ಟು: ಬೌಂಡರಿ ಲೈನ್ ಬಳಿ Mohammed Siraj ಎಡವಟ್ಟು; Video!
ಮೊಹಮ್ಮದ್ ಸಿರಾಜ್
Published On :

ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯ 5ನೇ ಮತ್ತು ಕೊನೆಯ ಪಂದ್ಯ ರೋಚಕ ತಿರುವು ಪಡೆದುಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ, ನಾಲ್ಕನೇ ದಿನವಾದ ಭಾನುವಾರ ಭಾರತದ ಆಟಗಾರ ಮೊಹಮ್ಮದ್ ಸಿರಾಜ್ (Mohammed Siraj) ಇಂಗ್ಲೆಂಡ್‌ನ ಅಪಾಯಕಾರಿ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್‌ಗೆ ಜೀವದಾನ ನೀಡುವ ಮೂಲಕ ಭಾರತ ತಂಡಕ್ಕೆ ದುಬಾರಿಯಾದರು. 19 ರನ್ ಗಳಿಸಿದ್ದಾಗ ಹ್ಯಾರಿ ಬ್ರೂಕ್‌ ನೀಡಿದ ಕ್ಯಾಚ್ ಅನ್ನು ಮೊಹಮ್ಮದ್ ಸಿರಾಜ್ ಕೈಚೆಲ್ಲಿದ್ದು ಇದು ಭಾರತ ತಂಡ ಗೆಲ್ಲುವ ಭರವಸೆಯನ್ನು ಕಸಿದುಕೊಂಡಿತು.

ವಾಸ್ತವವಾಗಿ, ಭಾರತೀಯ ಬೌಲರ್ ಪ್ರಸಿದ್ಧ್ ಕೃಷ್ಣ 35ನೇ ಓವರ್ ಬೌಲಿಂಗ್ ಮಾಡಿದರು. ಈ ಓವರ್‌ನ ಮೊದಲ ಎಸೆತದಲ್ಲಿ, ಮೊಹಮ್ಮದ್ ಸಿರಾಜ್ ಹ್ಯಾರಿ ಬ್ರೂಕ್‌ಗೆ (19 ರನ್) ಜೀವದಾನ ನೀಡಿದರು. ಹ್ಯಾರಿ ಬ್ರೂಕ್ ಪುಲ್ ಶಾಟ್ ಆಡಿದರು.

ಚೆಂಡು ಡೀಪ್ ಫೈನಲ್ ಲೆಗ್‌ಗೆ ಹೋಯಿತು. ಬೌಂಡರಿ ಗೆರೆ ಬಳಿ ಮೊಹಮ್ಮದ್ ಸಿರಾಜ್ ಕ್ಯಾಚ್ ಪಡೆದರು. ಆದರೆ ಈ ಸಮಯದಲ್ಲಿ ಅವರು ಬೌಂಡರಿ ಲೈನ್‌ ಬಗ್ಗೆ ಗಮನ ಕೊಟ್ಟಿರಲಿಲ್ಲ. ಪರಿಣಾಮವಾಗಿ, ಅವರ ಕಾಲು ಬೌಂಡರಿ ಗೆರೆಗೆ ತಾಗಿತು. ನಂತರ ನಿಯಂತ್ರಣ ತಪ್ಪಿ ಬೌಂಡರಿ ಒಳಗೆ ಹೋದರು. ಹೀಗಾಗಿ ಹ್ಯಾರಿ ಬ್ರೂಕ್ ನಾಟ್ ಔಟ್ ಎಂದು ಘೋಷಿಸಲ್ಪಟ್ಟಿದ್ದು ಮಾತ್ರವಲ್ಲದೆ ಆರು ರನ್ ಸಹ ನೀಡಲಾಯಿತು. ನಂತರ ಸ್ಫೋಟಕ ಬ್ಯಾಟಿಂಗ್ ಮಾಡಿದ ಬ್ರೂಕ್ ಶತಕ ಸಹ ದಾಖಲಿಸಿದರು.

ಸದ್ಯ ಇಂಗ್ಲೆಂಡ್ 3 ವಿಕೆಟ್ ನಷ್ಟಕ್ಕೆ 267 ರನ್ ಪೇರಿಸಿದ್ದು ಗೆಲುವಿಗೆ ಇನ್ನು 107 ರನ್ ಬಾಕಿ ಇದೆ. ಇಂದು ನಾಲ್ಕನೇ ದಿನವಾಗಿರುವುದರಿಂದ ನಾಳೆಯೂ ಇಂಗ್ಲೆಂಡ್ ತಂಡಕ್ಕೆ ಬ್ಯಾಟಿಂಗ್ ಮಾಡಲು ಹೆಚ್ಚಿನ ಅವಕಾಶವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.