IPL 2025: ತವರಿನಲ್ಲಿ RCB ಗೆಲುವಿಗೆ 'ಆ ಒಂದು ನಿರ್ಧಾರ'ವೇ ಕಾರಣ; ಜಿತೇಶ್ ಶರ್ಮಾ ನಡೆಗೆ ಫ್ಯಾನ್ಸ್ ಫಿದಾ!
ಕೊನೆಯ 2 ಓವರ್ ನಲ್ಲಿ ಆರ್ ಆರ್ ಗೆಲುವಿಗೆ 17 ರನ್ ಬೇಕಿತ್ತು. ಜಾಶ್ ಹೇಜಲ್ವುಡ್ 19ನೇ ಓವರ್ನಲ್ಲಿ ಕೇವಲ 1 ರನ್ ನೀಡಿ 2 ವಿಕೆಟ್ ಪಡೆದರು.

ಟಿ20 ಕ್ರಿಕೆಟ್ನಲ್ಲಿ ಪ್ರತಿಯೊಂದು ಬಾಲ್ ಕೂಡ ಮುಖ್ಯವಾಗಿರುತ್ತದೆ. ಗುರುವಾರ ಬೆಂಗಳೂರಿನ ಎಂ ಚಿನ್ನಸ್ವಾಮಿಯಲ್ಲಿ ರಾಜಸ್ಥಾನ್ ರಾಯಲ್ಸ್ (RR) ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿಕೆಟ್ ಕೀಪರ್ -ಬ್ಯಾಟರ್ ಜಿತೇಶ್ ಶರ್ಮಾ ಅವರ ಆ ಒಂದು ನಿರ್ಧಾರ ತಂಡದ ಗತಿಯನ್ನೇ ಬದಲಿಸಿತು. ಪಂದ್ಯ ರಾಜಸ್ಥಾನ್ ರಾಯಲ್ಸ್ ಕಡೆ ತಿರುಗಿದೆ ಎಂಬು ಭಾವಿಸುವಷ್ಟರಲ್ಲಿ ಆರ್ಸಿಬಿ ಕೀಪರ್ ತೆಗೆದುಕೊಂಡ ರಿವ್ಯೂ ಪಂದ್ಯದ ಫಲಿತಾಂಶವನ್ನೇ ತಲೆಕೆಳಗಾಗಿ ಮಾಡಿತು. ಸೆಟ್ ಆಗಿದ್ದ ಆರ್ಆರ್ ತಂಡದ ಧ್ರುವ್ ಜುರೆಲ್ ವಿಕೆಟ್ ಪಡೆದಿದ್ದು, ತವರಿನಲ್ಲಿ ಆರ್ಸಿಬಿ ಗೆಲುವು ಸಾಧಿಸಲು ನೆರವಾಯಿತು.
ಜಿತೇಶ್ ಶರ್ಮಾ ಬ್ಯಾಟಿಂಗ್ನಲ್ಲಿ ಸಣ್ಣ ಪಾತ್ರ ವಹಿಸಿರಬಹುದು. ಆದರೆ, ಅವರು ಸ್ಟಂಪ್ಗಳ ಹಿಂದೆ ಖಂಡಿತವಾಗಿಯೂ ಉತ್ತಮವಾಗಿ ಕಾಣಿಸಿಕೊಂಡಿದ್ದಾರೆ. ಕೊನೆಯ ಓವರ್ನಲ್ಲಿ, ಜಾಶ್ ಹೇಜಲ್ವುಡ್ ಅವರ ಎಸೆತದಲ್ಲಿ ಧ್ರುವ್ ಜುರೇಲ್ ಅವರು ಬ್ಯಾಟಿಂಗ್ ಮಾಡುತ್ತಾರೆ. ಕೀಪಿಂಗ್ ಮಾಡುತ್ತಿದ್ದ ಜಿತೇಶ್ ಶರ್ಮಾ ಆ ಬಾಲ್ ಅನ್ನು ಕ್ಯಾಚ್ ಹಿಡಿಯುತ್ತಾರೆ. ಬೌಲರ್ ಕೂಡ ಔಟ್ ಎಂದು ಅಪೀಲ್ ಮಾಡದೇ ಇದ್ದಾಗ ಅವರು ನಾಯಕ ರಜತ್ ಪಾಟೀದಾರ್ ಅವರನ್ನು ಡಿಆರ್ಎಸ್ ತೆಗೆದುಕೊಳ್ಳುವಂತೆ ಒತ್ತಾಯಿಸಿದರು.
ಪಾಟೀದಾರ್ ಆಗ ರಿವ್ಯೂ ತೆಗೆದುಕೊಳ್ಳುತ್ತಾರೆ. ಆಗ ಧ್ರುವ್ ಜುರೇಲ್ ಅವರ ಬ್ಯಾಟ್ಗೆ ಬಾಲ್ ತಗುಲಿರುವುದು ತಿಳಿಯುತ್ತದೆ. ಆಗ ಮೂರನೇ ಅಂಪೈರ್ ಔಟ್ ಎಂದು ತೀರ್ಮಾನಿಸುತ್ತಾರೆ. 34 ಎಸೆತಗಳಲ್ಲಿ 47 ರನ್ ಗಳಿಸಿದ್ದ ಜುರೇಲ್ ಅವರ ವಿಕೆಟ್ ಪತನ ಪಂದ್ಯಕ್ಕೆ ಬೇರೆ ತಿರುವನ್ನೇ ನೀಡುತ್ತದೆ. ಅದೇ ಓವರ್ನಲ್ಲಿಯೇ ಹೇಡಲ್ವುಡ್ ಅವರು ಜೋಫ್ರಾ ಆರ್ಚರ್ ಅವರ ವಿಕೆಟ್ ಪಡೆದರು. ಆಗ ಪಂದ್ಯದ ಗತಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ತಿರುಗಿತು.
ಕೊನೆಯ ಓವರ್ನಲ್ಲಿ ಜಿತೇಶ್ ಶರ್ಮಾ ಅವರೇ ವನಿಂದು ಹಸರಂಗ ಅವರನ್ನು ಮಿಂಚಿನ ರನ್ ಔಟ್ ಮಾಡುತ್ತಾರೆ. ಕೊನೆಯ 2 ಓವರ್ ನಲ್ಲಿ ಆರ್ ಆರ್ ಗೆಲುವಿಗೆ 17 ರನ್ ಬೇಕಿತ್ತು. ಜಾಶ್ ಹೇಜಲ್ವುಡ್ 19ನೇ ಓವರ್ನಲ್ಲಿ ಕೇವಲ 1 ರನ್ ನೀಡಿ 2 ವಿಕೆಟ್ ಪಡೆದರು. ಕೊನೆಯ ಎರಡು ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡ ಆರ್ಆರ್ 11 ರನ್ಗಳಿಂದ ಸೋಲು ಕಂಡಿತು.
ಮೊದಲ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಿದ ಜಿತೇಶ್, 10 ಎಸೆತಗಳಲ್ಲಿ 20 ರನ್ ಗಳಿಸಿ ತಂಡಕ್ಕೆ ನೆರವಾದರು. ವಿಕೆಟ್-ಕೀಪರ್ ಬ್ಯಾಟ್ಸ್ಮನ್ 147.56 ಸ್ಟ್ರೈಕ್ ರೇಟ್ನಲ್ಲಿ 7 ಇನ್ನಿಂಗ್ಸ್ಗಳಲ್ಲಿ 121 ರನ್ ಗಳಿಸಿದ್ದಾರೆ. ಜಿತೇಶ್ ಶರ್ಮಾ ಅವರನ್ನು ಅಭಿಮಾನಿಗಳು ಕೊಂಡಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


