ಕ್ರಿಕೆಟ್

IPL ಟೂರ್ನಿಗೂ ಬಿಸಿಲಾಘಾತ: ಮೈದಾನದಲ್ಲೇ ಕುಸಿದ GT ವೇಗಿ Ishant Sharma!

ಗುಜರಾತ್ ನ ಅಹ್ಮದಾಬಾದ್ ಕ್ರೀಡಾಂಗಣದಲ್ಲಿ ಇಂದು ನಡೆಯುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವಿನ ಪಂದ್ಯದಲ್ಲಿ ಈ ಘಟನೆ ನಡೆದಿದ್ದು, ಟಾಸ್ ಗೆದ್ದ ಗುಜರಾತ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

IPL ಟೂರ್ನಿಗೂ ಬಿಸಿಲಾಘಾತ: ಮೈದಾನದಲ್ಲೇ ಕುಸಿದ GT ವೇಗಿ Ishant Sharma!
ಇಶಾಂತ್ ಶರ್ಮಾ ಅಸ್ವಸ್ಥ
Published On :

ಅಹ್ಮದಾಬಾದ್: ಉತ್ತರ ಭಾರತದಲ್ಲಿ ವ್ಯಾಪಕವಾಗಿರುವ ಬೇಸಿಗೆ ಧಗೆ ಐಪಿಎಲ್ ಟೂರ್ನಿ ಮೇಲೂ ಪರಿಣಾಮ ಬೀರಿದ್ದು, ಪಂದ್ಯದ ನಡುವೆಯೇ ಭಾರತ ತಂಡದ ಸ್ಟಾರ್ ವೇಗಿ ಕುಸಿದು ಬಿದ್ದ ಘಟನೆ ವರದಿಯಾಗಿದೆಯ

ಗುಜರಾತ್ ನ ಅಹ್ಮದಾಬಾದ್ ಕ್ರೀಡಾಂಗಣದಲ್ಲಿ ಇಂದು ನಡೆಯುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವಿನ ಪಂದ್ಯದಲ್ಲಿ ಈ ಘಟನೆ ನಡೆದಿದ್ದು, ಟಾಸ್ ಗೆದ್ದ ಗುಜರಾತ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗಧಿತ 20 ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 203 ರನ್ ಕಲೆಹಾಕಿತು.

ಡೆಲ್ಲಿ ಪರ ಕರುಣ್ ನಾಯರ್ 31 ರನ್, ಕೆಎಲ್ ರಾಹುಲ್ 28 ರನ್, ನಾಯಕ ಅಕ್ಸರ್ ಪಟೇಲ್ 39 ರನ್, ಸ್ಟಬ್ಸ್ 31 ರನ್ ಮತ್ತು ಆಶುತೋಷ್ ಶರ್ಮಾ 31 ರನ್ ಕಲೆಹಾಕಿದರು. ಗುಜರಾತ್ ಪರ ಪ್ರಸಿದ್ಧ ಕೃಷ್ಣ 4 ವಿಕೆಟ್ ಪಡೆದರೆ, ಸಿರಾಜ್, ಅರ್ಶದ್ ಖಾನ್, ಇಶಾಂತ್ ಶರ್ಮಾ ಮತ್ತು ಸಾಯಿ ಕಿಶೋರ್ ತಲಾ 1 ವಿಕೆಟ್ ಪಡೆದರು.

ಪಂದ್ಯದ ನಡುವೆಯೇ ಮೈದಾನ ತೊರೆದ ಇಶಾಂತ್ ಶರ್ಮಾ

ಇನ್ನು ಈ ಪಂದ್ಯದಲ್ಲಿ ಡೆಲ್ಲಿ ವಿರುದ್ಧ 3 ಓವರ್ ಎಸೆದ ಇಶಾಂತ್ ಶರ್ಮಾ 6.30ರ ಸರಾಸರಿಯಲ್ಲಿ 19 ರನ್ ನೀಡಿ 1 ವಿಕೆಟ್ ಪಡೆದರು. ಡೆಲ್ಲಿ ಬ್ಯಾಟಿಂಗ್ ವೇಳೆ ಮೈದಾನದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಇಶಾಂತ್ ಶರ್ಮಾ ಬಿಸಿಲ ಧಗೆಯಿಂದಾಗಿ ಅನಾರೋಗ್ಯಕ್ಕೆ ತುತ್ತಾದರು.

ಕೂಡಲೇ ಫಿಸಿಯೋ ಮೈದಾನಕ್ಕೆ ಆಗಮಿಸಿ ಅವರನ್ನು ಮೈದಾನದಿಂದ ಹೊರಗೆ ಕರೆದೊಯ್ದು ಡ್ರೆಸಿಂಗ್ ರೂಮಿನಲ್ಲಿ ಕೂರಿಸಿ ಚಿಕಿತ್ಸೆ ಮಾಡಿದರು. ಇಶಾಂತ್ ಶರ್ಮಾ ಡಗೌಟ್ ನಲ್ಲಿ ಕುಳಿತು ತಲೆ ಮೇಲೆ ಬಟ್ಟೆ ಹಾಕಿಕೊಂಡು ಕುಳಿತಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಇನ್ನು ಈ ಪಂದ್ಯದಲ್ಲಿ ಇಶಾಂತ್ ಶರ್ಮಾ ಮಾತ್ರವಲ್ಲ.. ಗುಜರಾತ್ ತಂಡದ ನಾಯಕ ಅಕ್ಸರ್ ಪಟೇಲ್, ಪ್ರಮುಖ ಬೌಲರ್ ಪ್ರಸಿದ್ಧ ಕೃಷ್ಣ ಕೂಡ ದಣಿದಿದ್ದರು. ಇಬ್ಬರೂ ಆಟಗಾರರಿಗೆ ಆಗಾಗ ಆರೋಗ್ಯದಲ್ಲಿ ವ್ಯತ್ಯಯವಾಗಿದ್ದು ಕಂಡುಬಂತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.