IPL 2025: ಡೆಲ್ಲಿ ವಿರುದ್ಧದ ಪಂದ್ಯ, ಬ್ಯಾಟಿಂಗ್ ಮಾಡುವಾಗ ಅರ್ಧದಲ್ಲೇ ಮೈದಾನದಿಂದ ಹೊರ ನಡೆದ ಸಂಜು ಸ್ಯಾಮ್ಸನ್! ಇದೇ ಕಾರಣ
ರಾಜಸ್ಥಾನ ನೀಡಿದ 189 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ರಾಜಸ್ಥಾನ್ ಪರ ಓಪನರ್ ಆಗಿ ಕ್ರೀಸ್ಗೆ ಆಗಮಿಸಿದ ಸಂಜು ಸ್ಯಾಮ್ಸನ್ ಹಾಗೂ ಯಶಸ್ವಿ ಜೈಸ್ವಾಲ್ ಭರ್ಜರಿ ಆರಂಭ ಪಡೆದಿದ್ದರು.

ನವದೆಹಲಿ: ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅರ್ಧದಲ್ಲೇ ಮೈದಾನದಿಂದ ಹೊರಗೆ ಹೋದರು.
ರಾಜಸ್ಥಾನ ನೀಡಿದ 189 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ರಾಜಸ್ಥಾನ್ ಪರ ಓಪನರ್ ಆಗಿ ಕ್ರೀಸ್ಗೆ ಆಗಮಿಸಿದ ಸಂಜು ಸ್ಯಾಮ್ಸನ್ ಹಾಗೂ ಯಶಸ್ವಿ ಜೈಸ್ವಾಲ್ ಭರ್ಜರಿ ಆರಂಭ ಪಡೆದಿದ್ದರು. ಕೇವಲ 19 ಎಸೆತಗಳನ್ನು ಎದುರಿಸಿದ ಸಂಜು ಸ್ಯಾಮ್ಸನ್, 2 ಬೌಂಡರಿ ಹಾಗೂ 3 ಅಮೋಘವಾದ ಸಿಕ್ಸರ್ಗಳಿಂದ 31 ರನ್ಗಳನ್ನು ಗಳಿಸಿದ್ದರು.
ಆದರೆ ಸಂಜು ಬ್ಯಾಟಿಂಗ್ ಮಾಡುವಾಗ ಗಾಯಕ್ಕೆ ತುತ್ತಾಗಿದ್ದಾರೆ. ಪಕ್ಕೆಲುಬಿನ ಗಾಯದಿಂದ ಬ್ಯಾಟಿಂಗ್ ಮಾಡಲು ಆಗಿಲ್ಲ. ಹೀಗಾಗಿ ಬ್ಯಾಟಿಂಗ್ ಅನ್ನು ಅರ್ಧಕ್ಕೆ ಬಿಟ್ಟು, ಅಂಪೈರ್ನಿಂದ ಮನವಿ ಪಡೆದು ಮೈದಾನದಿಂದ ಹೊರ ನಡೆದಿದ್ದಾರೆ.
ಮೊದಲ ವಿಕೆಟ್‌ಗೆ ಯಶಸ್ವಿ ಜೈಸ್ವಾಲ್ ಅವರೊಂದಿಗೆ 5.3 ಓವರ್‌ಗಳಲ್ಲಿ 61 ರನ್ ಗಳಿಸಿದಾಗ ಸ್ಯಾಮ್ಸನ್ ಗಾಯಗೊಂಡರು. ನಂತರ ಅವರ ಬದಲಿಗೆ ರಿಯಾನ್ ಪರಾಗ್ ಬಂದು ಬ್ಯಾಟಿಂಗ್ ಮುಂದುವರೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



