18 Calling 18: 'ಇದು ಎಲ್ಲಿ ಸಿಕ್ತು.. ಏನ್ ಹೇಳಿದ್ನೋ ನಂಗೇ ಗೊತ್ತಿಲ್ಲಾ'; ತನ್ನ ಕಾಲು ತಾನೇ ಎಳೆದುಕೊಂಡ Virat Kohli
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಐಕಾನ್ ವಿರಾಟ್ ಕೊಹ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ತಮ್ಮ ಮೊದಲ 'ಮ್ಯಾನ್ ಆಫ್ ದಿ ಮ್ಯಾಚ್' ಪ್ರಶಸ್ತಿಯನ್ನು ಗೆದ್ದ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ಬೆಂಗಳೂರು: ಐಪಿಎಲ್ ಟೂರ್ನಿ ಆರಂಭವಾಗಿ 18 ವರ್ಷಗಳು ಕಳೆದಿದ್ದು, ವಿರಾಟ್ ಕೊಹ್ಲಿ ಕೂಡ ಆರ್ ಸಿಬಿ ಜೆರ್ಸಿ ತೊಟ್ಟು 18 ವರ್ಷಗಳಾಗಿದೆ. ರನ್ ಮೆಷಿನ್ ವಿರಾಟ್ ಕೊಹ್ಲಿ ಅವರ ಹಳೆಯ ನೆನಪುಗಳ ಕುರಿತ ವಿಡಿಯೋವೊಂದು ಇದೀಗ ವ್ಯಾಪಕ ವೈರಲ್ ಆಗುತ್ತಿದ್ದು, ಸ್ವತಃ ಕೊಹ್ಲಿ ಕೂಡ ವಿಡಿಯೋ ನೋಡಿ ಅಚ್ಚರಿ ಪಟ್ಟಿದ್ದಾರೆ.
ಹೌದು.. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಐಕಾನ್ ವಿರಾಟ್ ಕೊಹ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ತಮ್ಮ ಮೊದಲ 'ಮ್ಯಾನ್ ಆಫ್ ದಿ ಮ್ಯಾಚ್' ಪ್ರಶಸ್ತಿಯನ್ನು ಗೆದ್ದ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
18 Calling 18 ಎಂಬ ಸಂದರ್ಶನದ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದು ಈ ವೇಳೆ ತಮ್ಮ ಮೊದಲ ಅರ್ಧಶತಕ, ಮೊದಲ ಶತಕ ಮತ್ತು ಮೊದಲ ಪಂದ್ಯಶ್ರೇಷ್ಠ ಪ್ರಶಸ್ತಿಗಳ ಕುರಿತು ಚರ್ಚೆ ಮಾಡಿದ್ದಾರೆ.
ಇದು ಎಲ್ಲಿ ಸಿಕ್ತು.. ಏನ್ ಹೇಳಿದ್ನೋ ನಂಗೇ ಗೊತ್ತಿಲ್ಲಾ
ಇನ್ನು 2011ರಲ್ಲಿ ಕೊಹ್ಲಿ ತಮ್ಮ ಅಮೋಘ ಪ್ರದರ್ಶನದ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಈ ಕುರಿತ ವಿಡಿಯೋವನ್ನು ಸಂದರ್ಶಕ ಕೊಹ್ಲಿಗೆ ತೋರಿಸಿದ್ದು, ಈ ವಿಡಿಯೋ ನೋಡಿ ನಾಚಿಕೆ ಪಟ್ಟ ಕೊಹ್ಲಿ ಈ ವಿಡಿಯೋ ಎಲ್ಲಿ ಸಿಕ್ತು.. ಆಗ ನಾನು ಏನು ಹೇಳಿದ್ದೆನೋ ನನಗೆ ಗೊತ್ತಿಲ್ಲ ಎಂದು ನಕ್ಕಿದ್ದಾರೆ.
ಅಂದಹಾಗೆ ಅಂದಿನ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 38 ಎಸೆತಗಳಲ್ಲಿ 56 ರನ್ ಗಳಿಸಿದ್ದರು. ಅಂದಿನ ಪಂದ್ಯದಲ್ಲಿ ಆರ್ ಸಿಬಿ ಡೆಲ್ಲಿ ನೀಡಿದ್ದ 162 ರನ್ ಗಳ ಗುರಿಯನ್ನು ಇನ್ನೂ ಮೂರು ಎಸೆತ ಬಾಕಿ ಇರುವಂತೆಯೇ ತಲುಪಿ ಭರ್ಜರಿ ಜಯ ಸಾಧಿಸಿತ್ತು. ಅಂದು ಆರ್ ಸಿಬಿ ಪರ ಭರ್ಜರಿ ಬ್ಯಾಟಿಂಗ್ ಮಾಡಿ ಗೆಲುವಿನ ರೂವಾರಿಯಾಗಿದ್ದ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ಏನು ಹೇಳಿದ್ದರು ಕೊಹ್ಲಿ?
ಅಂದು ಪಂದ್ಯ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ್ದ ವಿರಾಟ್ ಕೊಹ್ಲಿ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಕುರಿತು ಮಾತನಾಡಿದ್ದರು. 'ನಿಜ ಹೇಳಬೇಕೆಂದರೆ, ನಾನು ಹಾಗೆ ಬ್ಯಾಟಿಂಗ್ ಮಾಡಲು ಯೋಜಿಸಿರಲಿಲ್ಲ. ಆದರೆ ನಾನು ಚೆಂಡನ್ನು ಚೆನ್ನಾಗಿ ಹೊಡೆಯಲು ಪ್ರಾರಂಭಿಸಿದಾಗ, ನಾನು ಕ್ರಿಸ್ ಗೇಲ್ ರಿಂದ ಜವಾಬ್ದಾರಿ ತೆಗೆದುಕೊಂಡೆ. ಮಧ್ಯದಲ್ಲಿ ಅವರು ಸ್ವತಃ ಆಟವಾಡಲು ಸಾಧ್ಯವಾಗಿಸುವುದು ಯೋಜನೆಯಾಗಿತ್ತು. ನನಗೆ ಒಳ್ಳೆಯ ಲಯ ಸಿಕ್ಕಿದ್ದರಿಂದ ನಾನು ಉತ್ತಮ ಶಾಟ್ ಗಳನ್ನು ಹೊಡೆಯುತ್ತಿದ್ದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



