ಕ್ರಿಕೆಟ್

IPL 2025: DC ವಿರುದ್ಧ ಸೋತು ಅದೇ ತಂಡದ ದಾಖಲೆ ಮುರಿದ RCB! ಕಳಪೆ ಆದರೂ ಅಚ್ಚರಿ!

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಲುವ ಮೂಲಕ ಆರ್ ಸಿಬಿ ಹೀನಾಯ ದಾಖಲೆಗೆ ಪಾತ್ರವಾಗಿದ್ದು, ಒಂದೇ ಮೈದಾನದಲ್ಲಿ ಅತೀ ಹೆಚ್ಚು ಪಂದ್ಯಗಳನ್ನು ಸೋತಿರುವ ತಂಡ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.

IPL 2025: DC ವಿರುದ್ಧ ಸೋತು ಅದೇ ತಂಡದ ದಾಖಲೆ ಮುರಿದ RCB! ಕಳಪೆ ಆದರೂ ಅಚ್ಚರಿ!
ಡೆಲ್ಲಿ ವಿರುದ್ದ ಆರ್ ಸಿಬಿಗೆ ಸೋಲು
Published On :

ಬೆಂಗಳೂರು: ಹಾಲಿ ಐಪಿಎಲ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯ ಸೋಲುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೀನಾಯ ದಾಖಲೆಗೆ ಪಾತ್ರವಾಗಿದೆ.

ಹೌದು.. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್ ಸಿಬಿ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ 6 ವಿಕೆಟ್ ಅಂತರದ ಭರ್ಜರಿ ಜಯ ದಾಖಲಿಸಿತು.

ಆರ್ ಸಿಬಿ ನೀಡಿದ 164 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಡೆಲ್ಲಿ ತಂಡ ಕನ್ನಡಿಗ ಕೆಎಲ್ ರಾಹುಲ್ (ಅಜೇಯ 93) ಭರ್ಜರಿ ಬ್ಯಾಟಿಂಗ್ ನೆರವಿನಿಂದ ಗೆದ್ದು ಬೀಗಿತು. ಡೆಲ್ಲಿ ಕೇವಲ 17.5 ಓವರ್ ನಲ್ಲಿ 4 ವಿಕೆಟ್ ಕಳೆದುಕೊಂಡು 169 ರನ್ ಗಳಿಸಿ 6 ವಿಕೆಟ್ ಅಂತರದಲ್ಲಿ ಜಯ ದಾಖಲಿಸಿತು.

DC ವಿರುದ್ಧ ಸೋತು ಅದೇ ತಂಡದ ದಾಖಲೆ ಮುರಿದ RCB

ಇನ್ನು ಇಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಲುವ ಮೂಲಕ ಆರ್ ಸಿಬಿ ಹೀನಾಯ ದಾಖಲೆಗೆ ಪಾತ್ರವಾಗಿದ್ದು, ಒಂದೇ ಮೈದಾನದಲ್ಲಿ ಅತೀ ಹೆಚ್ಚು ಪಂದ್ಯಗಳನ್ನು ಸೋತಿರುವ ತಂಡ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.

ಈವರೆಗೂ ಆರ್ ಸಿಬಿ ಬೆಂಗಳೂರಿನಲ್ಲಿ ಆಡಿರುವ ಪಂದ್ಯಗಳ ಪೈಕಿ 45 ಪಂದ್ಯಗಳನ್ನು ಸೋತಿದ್ದು, ಇದು ತಂಡವೊಂದು ಒಂದೇ ಮೈದಾನದಲ್ಲಿ ಸೋತ ಗರಿಷ್ಠ ಸಂಖ್ಯೆಯಾಗಿದೆ.

ಡೆಲ್ಲಿ ದಾಖಲೆ ಪತನ

ಇನ್ನು ಈ ಹಿಂದೆ ಈ ದಾಖಲೆ ಡೆಲ್ಲಿ ಹೆಸರಿಲ್ಲಿತ್ತು. ಡೆಲ್ಲಿ ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ 44 ಪಂದ್ಯಗಳನ್ನು ಸೋತಿತ್ತು. ಆ ಮೂಲಕ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು. ಆದರೆ ಈ ಹಿಂದೆ ಇದೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ಸೋಲುವ ಮೂಲಕ ಡೆಲ್ಲಿಯೊಂದಿಗೆ ಜಂಟಿ ಅಗ್ರಸ್ಥಾನದಲ್ಲಿತ್ತು. ಆದರೆ ಇಂದಿನ ಡೆಲ್ಲಿ ವಿರುದ್ಧ ಪಂದ್ಯವನ್ನೂ ಸೋಲುವ ಮೂಲಕ ಡೆಲ್ಲಿಯನ್ನು 2ನೇ ಸ್ಥಾನಕ್ಕೆ ತಳ್ಳಿದೆ.

ಉಳಿದಂತೆ ಒಂದೇ ಮೈದಾನದಲ್ಲಿ ಅತೀ ಹೆಚ್ಚು ಪಂದ್ಯಗಳನ್ನು ಸೋತಿರುವ ತಂಡಗಳ ಪಟ್ಟಿಯಲ್ಲಿ ಕೆಕೆಆರ್ 3ನೇ ಸ್ಥಾನದಲ್ಲಿದ್ದು, ಕೋಲ್ಕತಾದಲ್ಲಿ ಈ ತಂಡ 38 ಪಂದ್ಯ ಸೋತಿದೆ. ಮುಂಬೈನಲ್ಲಿ 34 ಪಂದ್ಯಗಳನ್ನು ಸೋತಿರುವ ಮುಂಬೈ ಇಂಡಿಯನ್ಸ್ 4 ಮತ್ತು ಮೊಹಾಲಿಯಲ್ಲಿ 30 ಪಂದ್ಯ ಸೋತಿರುವ ಪಂಜಾಬ್ 5ನೇ ಸ್ಥಾನದಲ್ಲಿವೆ.

Most defeats at a venue in the IPL

  • 45 - RCB (Bengaluru, W/L: 0.977)

  • 44 - DC (Delhi, W/L: 0.840)

  • 38 - KKR (Kolkata, W/L: 1.394)

  • 34 - MI (Mumbai WS, W/L: 1.55)

  • 30 - PBKS (Mohali, W/L: 1.033

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.