IPL 2025: ಹಾವು ಏಣಿ ಆಟ; RCB 2ನೇ ಸ್ಥಾನಕ್ಕೆ; ಟೇಬಲ್ ಟಾಪರ್ PBKS ಬಂದಿದ್ದೆಲ್ಲಿಗೆ?
ಈ ಪೈಕಿ 4ನೇ ಸ್ಥಾನದಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 4 ಅಂಕ ಮತ್ತು +1.149 ನೆಟ್ ರನ್ ರೇಟ್ ನೊಂದಿಗೆ 2ನೇ ಸ್ಥಾನಕ್ಕೆ ಜಿಗಿದಿದೆ.

ಮುಂಬೈ: ಹಾಲಿ ಐಪಿಎಲ್ ಟೂರ್ನಿಯ ಅಂಕಪಟ್ಟಿಯಲ್ಲಿ ಹಾವು-ಏಣಿ ಆಟ ಮುಂದುವರೆದಿದ್ದು, ರಾಜಸ್ತಾನ ರಾಯಲ್ಸ್ ವಿರುದ್ಧ ಪ್ರಬಲ ಪಂಜಾಬ್ ತಂಡ ಸೋಲು ಕಾಣುವ ಮೂಲಕ ಮತ್ತೆ ಟೇಬಲ್ ಪರಿಷ್ಕರಣೆಯಾಗಿದೆ.
ಹೌದು.. ಇಂದು ನಡೆದ 2 ಪ್ರಮುಖ ಪಂದ್ಯಗಳಲ್ಲಿ ಡೆಲ್ಲಿ ವಿರುದ್ಧ ಚೆನ್ನೈ ಸೋತರೆ, ಇತ್ತ ರಾಜಸ್ತಾನ ರಾಯಲ್ಸ್ ವಿರುದ್ಧ ಪ್ರಬಲ ಪಂಜಾಬ್ ತಂಡ ಸೋಲು ಕಂಡಿದೆ.
ಈ 2 ಪಂದ್ಯಗಳ ಬಳಿಕ ಐಪಿಎಲ್ ಅಂಕ ಪಟ್ಟಿಯಲ್ಲಿ ಪ್ರಮುಖ ಬದಲಾವಣೆಗಳಾಗಿದ್ದು, ಅಗ್ರಸ್ಥಾನದಲ್ಲಿದ್ದ ಪಂಜಾಬ್ ಕಿಂಗ್ಸ್ ಇಂದಿನ ಹೀನಾಯ ಸೋಲಿನ ಬಳಿಕ 3 ಸ್ಥಾನ ಕುಸಿದು 4ನೇ ಸ್ಥಾನಕ್ಕೆ ಕುಸಿದಿದೆ.
ಅಂತೆಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡ ಇಂದಿನ ಸೋಲಿನೊಂದಿಗೆ 9ನೇ ಸ್ಥಾನಕ್ಕೆ ಜಾರಿದೆ.
2 ಸ್ಥಾನ ಮೇಲೆರಿದ ಆರ್ ಸಿಬಿ, ಅಗ್ರ ಸ್ಥಾನಕ್ಕೇರಿದ ಡೆಲ್ಲಿ
ಇನ್ನು ಪಂಜಾಬ್ ತಂಡ 50 ರನ್ ಗಳ ಅಂತರದಲ್ಲಿ ಸೋಲು ಕಂಡ ಹಿನ್ನಲೆಯಲ್ಲಿ ಆ ತಂಡದ ನೆಟ್ ರನ್ ರೇಟ್ ಗಣನೀಯವಾಗಿ ಕುಸಿದಿದ್ದು, ಪಂಜಾಬ್ ಈಗ 4 ಅಂಕ ಮತ್ತು +0.074ನೆಟ್ ರನ್ ರೇಟ್ ನೊಂದಿಗೆ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಅಂತೆಯೇ 4 ಅಂಕ ಮತ್ತು +0.807 ನೆಟ್ ರನ್ ರೇಟ್ ಹೊಂದಿರುವ ಗುಜರಾತ್ ಟೈಟನ್ಸ್ 3ನೇ ಸ್ಥಾನದಲ್ಲಿದೆ.
ಈ ಪೈಕಿ 4ನೇ ಸ್ಥಾನದಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 4 ಅಂಕ ಮತ್ತು +1.149 ನೆಟ್ ರನ್ ರೇಟ್ ನೊಂದಿಗೆ 2ನೇ ಸ್ಥಾನಕ್ಕೆ ಜಿಗಿದಿದೆ. 6 ಅಂಕ ಮತ್ತು +1.257 ನೆಟ್ ರನ್ ರೇಟ್ ಹೊಂದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಇದೀಗ ಅಗ್ರ ಸ್ಥಾನಕ್ಕೇರಿದೆ.
ಮುಂಬೈ 8 ಸಿಎಸ್ ಕೆ 9ನೇ ಸ್ಥಾನ
ಉಳಿದಂತೆ ಕೋಲ್ಕತಾ ನೈಟ್ ರೈಡರ್ಸ್ 5ನೇ ಸ್ಥಾನ, 6ನೇ ಸ್ಥಾನದಲ್ಲಿ ಲಕ್ನೋ ಸೂಪರ್ ಜೈಂಟ್ಸ್, ರಾಜಸ್ತಾನ 7, ಮುಂಬೈ 8, ಸಿಎಸ್ ಕೆ 9 ಮತ್ತು ಸನ್ ರೈಸರ್ಸ್ ಹೈದರಾಬಾದ್ 10ನೇ ಸ್ಥಾನದಲ್ಲಿವೆ.
ನಾಳಿನ ಹೈದರಾಬಾದ್ ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಗುಜರಾತ್ ತಂಡವನ್ನು ಸನ್ ರೈಸರ್ಸ್ ಹೈದರಾಬಾದ್ ಎದುರಿಸಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




