ICC Womens T20 World Cup ಇತಿಹಾಸದಲ್ಲೇ ಭಾರತ ಮಹಿಳಾ ತಂಡಕ್ಕೆ ಅತಿದೊಡ್ಡ ಜಯ, ಅರುಂಧತಿ ರೆಡ್ಡಿ Elite Group ಸೇರ್ಪಡೆ
ಇಂದು ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ್ದ 173 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತುವಲ್ಲಿ ಶ್ರೀಲಂಕಾ ಮಹಿಳಾ ತಂಡ ವಿಫಲವಾಯಿತು. 19.5 ಓವರ್ ನಲ್ಲಿ ಶ್ರೀಲಂಕಾ ತಂಡ ಕೇವಲ 90 ರನ್ ಗಳಿಗೇ ಆಲೌಟ್ ಆಗುವ ಮೂಲಕ 82 ರನ್ ಅಂತರದ ಹೀನಾಯ ಸೋಲು ದಾಖಲಿಸಿತು.

ದುಬೈ: ಐಸಿಸಿ ಮಹಿಳಾ ಟಿ20 ವಿಶ್ವಕಪ್ ನಲ್ಲಿ ಭಾರತ ವನಿತೆಯರ ತಂಡ ಶ್ರೀಲಂಕಾ ವಿರುದ್ಧ 82 ರನ್ ಗಳ ಭರ್ಜರಿ ಜಯ ದಾಖಲಿಸಿದ್ದು, ಇದು ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲೇ ಭಾರತಕ್ಕೆ ಸಿಕ್ಕ ಅತೀ ದೊಡ್ಡ ಗೆಲುಲವಾಗಿದೆ.
ಹೌದು.. ಇಂದು ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ್ದ 173 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತುವಲ್ಲಿ ಶ್ರೀಲಂಕಾ ಮಹಿಳಾ ತಂಡ ವಿಫಲವಾಯಿತು. 19.5 ಓವರ್ ನಲ್ಲಿ ಶ್ರೀಲಂಕಾ ತಂಡ ಕೇವಲ 90 ರನ್ ಗಳಿಗೇ ಆಲೌಟ್ ಆಗುವ ಮೂಲಕ 82 ರನ್ ಅಂತರದ ಹೀನಾಯ ಸೋಲು ದಾಖಲಿಸಿತು.
ಇದು ಮಹಿಳಾ ಟಿ20 ವಿಶ್ವಕಪ್ ಟೂರ್ನಿ ಇತಿಹಾಸದಲ್ಲೇ ಭಾರತ ಮಹಿಳಾ ತಂಡಕ್ಕೆ ಸಿಕ್ಕ ಅತೀ ದೊಡ್ಡ ಗೆಲುವಾಗಿದ್ದು, ಇದಕ್ಕೂ ಮೊದಲು 2014ರಲ್ಲಿ ಭಾರತ ತಂಡ ಬಾಂಗ್ಲಾದೇಶ ವಿರುದ್ಧ 79ರನ್ ಗಳ ಅಂತರದಲ್ಲಿ ಗೆದ್ದಿತ್ತು. ಇದು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಈವರೆಗಿನ ಅತೀ ದೊಡ್ಡ ಜಯವಾಗಿತ್ತು. ಇಂದು ಈ ದಾಖಲೆಯನ್ನು ಭಾರತ ತಂಡ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಮುರಿದಿದೆ.
Biggest victory margins for IND-W in Women’s T20 WC
82 runs vs SL-W, Dubai, 2024
79 runs vs BAN-W, Sylhet, 2014
72 runs vs BAN-W, Bengaluru, 2016
71 runs vs SL-W, Basseterre, 2010
52 runs vs IRE-W, Guyana, 2018
Elite Group ಅರುಂಧತಿ ರೆಡ್ಡಿ ಸೇರ್ಪಡೆ
ಇನ್ನು ಇಂದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 3 ವಿಕೆಟ್ ಪಡೆದ ಭಾರತದ ಅರುಂಧತಿ ರೆಡ್ಡಿ ಅಪರೂಪದ ಸಾಧನೆಗೆ ಭಾಜನರಾಗಿದ್ದು, ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸತತ 2 ಬಾರಿ 3 ವಿಕೆಟ್ ಸಾಧನೆ ಮಾಡಿದ ಭಾರತದ 4ನೇ ಆಟಗಾರ್ತಿ ಎಂಬ ಕೀರ್ತಿಗೆ ಭಾಜನರಾದರು. ಇದಕ್ಕೂ ಮೊದಲು ಭಾರತದ ಏಕ್ತಾ ಬಿಶ್ತ್, ಅನುಜಾ ಪಾಟೀಲ್, ಪೂನಂ ಯಾದವ್ ಈ ಸಾಧನೆ ಮಾಡಿದ್ದರು.
Consecutive 3-wicket hauls for IND-W in Women’s T20 WC
2 - Ekta Bisht (2012-2016)
2 - Anuja Patil (2016-2018)
2 - Poonam Yadav (2020)
2* - Arundhati Reddy (2024)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



