ಪಾಕಿಸ್ತಾನದಲ್ಲಿ ಟ್ರೋಫಿ ಟೂರ್ ಆರಂಭಿಸಿದ ICC; ಬಿಸಿಸಿಐ ಆಕ್ಷೇಪ ಹಿನ್ನೆಲೆ PoK ಪ್ರವೇಶಕ್ಕೆ ಬ್ರೇಕ್!
ಪಿಒಕೆ ಪ್ರದೇಶಗಳಾದ ಖೈಬರ್ ಪಖ್ತುನ್ವಾಲಾ ಪ್ರದೇಶದ ಅಬೋಟಾಬಾದ್ ಹೊರತುಪಡಿಸಿ, ಕರಾಚಿ, ರಾವಲ್ ಪಿಂಡಿ ಹಾಗೂ ಇಸ್ಲಾಮಾಬಾದ್ ಪ್ರದೇಶಗಳಲ್ಲಿ ನಡೆಯುತ್ತಿದೆ.

ಇಸ್ಲಾಮಾಬಾದ್: ಚಾಂಪಿಯನ್ಸ್ ಟ್ರೋಫಿಗಾಗಿ ಐಸಿಸಿ ಪಾಕಿಸ್ತಾನದಲ್ಲಿ ಟ್ರೋಫಿ ಟೂರ್ ನ್ನು ಆರಂಭಿಸಿದೆ.
ಇನ್ನು ಪಿಒಕೆ ನಲ್ಲಿಯೂ ಒಂದಷ್ಟು ಪಂದ್ಯಗಳನ್ನಾಡಿಸುವ ಪಾಕ್ ಕ್ರಿಕೆಟ್ ಮಂಡಳಿಯ ಯತ್ನಕ್ಕೆ ಐಸಿಸಿ ಬ್ರೇಕ್ ಹಾಕಿದ್ದು, ಬಿಸಿಸಿಐ ಆಕ್ಷೇಪದ ಹಿನ್ನೆಲೆಯಲ್ಲಿ ಭಾರತಕ್ಕೆ ಸೇರಿದ ಪಾಕ್ ಆಕ್ರಮಿತ ಪ್ರದೇಶವನ್ನು ಟೂರ್ ನಿಂದ ಹೊರಗಿಡಲಾಗಿದೆ.
ಪಿಒಕೆ ಪ್ರದೇಶಗಳಾದ ಖೈಬರ್ ಪಖ್ತುನ್ವಾಲಾ ಪ್ರದೇಶದ ಅಬೋಟಾಬಾದ್ ಹೊರತುಪಡಿಸಿ, ಕರಾಚಿ, ರಾವಲ್ ಪಿಂಡಿ ಹಾಗೂ ಇಸ್ಲಾಮಾಬಾದ್ ಪ್ರದೇಶಗಳಲ್ಲಿ ಟ್ರೋಫಿ ಟೂರ್ ನಡೆಯುತ್ತಿದೆ.
ಟ್ರೋಫಿ ಟೂರ್ ಪಾಕ್ ನ ರಾಜಧಾನಿ ಇಸ್ಲಾಮಾಬಾದ್ ನಲ್ಲಿ ಆರಂಭಗೊಂಡು ನ.17 ರಂದು ತಕ್ಷಿಲಾ ಮತ್ತು ಖಾನ್ಪುರ್ ಅಬೋಟಾಬಾದ್ (ನವೆಂಬರ್ 18), ಮುರ್ರೆ (ನವೆಂಬರ್ 19) ಮತ್ತು ನಥಿಯಾ ಗಲಿ (ನವೆಂಬರ್ 20) ಕರಾಚಿಯಲ್ಲಿ (ನವೆಂಬರ್ 22-25) ನಡೆಯಲಿದೆ.
ಈ ನಗರಗಳಲ್ಲಿ ಹೆಚ್ಚಿನವು ಪ್ರವಾಸಿ ಆಕರ್ಷಣೆಗಳಾಗಿವೆ, ಇದಕ್ಕೂ ಮೊದಲು, ನವೆಂಬರ್ 14 ರಂದು, ಪಿಸಿಬಿ ಭಾರತ ಮತ್ತು ಪಾಕಿಸ್ತಾನದ ನಡುವಿನ ವಿವಾದಿತ ಪ್ರದೇಶವಾದ ಪಿಒಕೆ ಪ್ರದೇಶದಲ್ಲಿ ಬರುವ ಸ್ಕರ್ಡು, ಹುಂಜಾ ಮತ್ತು ಮುಜಫರಾಬಾದ್ನಂತಹ ನಗರಗಳನ್ನು ಒಳಗೊಂಡ ಟ್ರೋಫಿ ಟೂರ್ ನ್ನು ಘೋಷಿಸಿತ್ತು.
ಆದಾಗ್ಯೂ, ಶನಿವಾರ ಬಹಿರಂಗಪಡಿಸಿದಂತೆ ಆ ನಗರಗಳನ್ನು ಪ್ರವಾಸದಿಂದ ತೆಗೆದುಹಾಕಲು ಜಾಗತಿಕ ಕ್ರಿಕೆಟ್ ಸಂಸ್ಥೆ ತ್ವರಿತ ಕ್ರಮ ಕೈಗೊಂಡಿದೆ.
ಪಾಕಿಸ್ತಾನದಲ್ಲಿ ಟ್ರೋಫಿ ಪ್ರವಾಸದ ನಂತರ, ಅಫ್ಘಾನಿಸ್ತಾನ (ನವೆಂಬರ್ 26-28), ನಂತರ ಬಾಂಗ್ಲಾದೇಶ (ಡಿಸೆಂಬರ್ 10-13), ದಕ್ಷಿಣ ಆಫ್ರಿಕಾ (ಡಿಸೆಂಬರ್ 15-22), ಆಸ್ಟ್ರೇಲಿಯಾ (ಡಿಸೆಂಬರ್ 25-ಜನವರಿ 5), ನ್ಯೂಜಿಲೆಂಡ್ (ಜನವರಿ 6-11), ಇಂಗ್ಲೆಂಡ್ (ಜನವರಿ 12-14) ಮತ್ತು ಭಾರತ (ಜನವರಿ 15-26)ಗಳಲ್ಲಿ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



