Ranji Trophy: ಎಲ್ಲಾ 10 ವಿಕೆಟ್ ಪಡೆದ ಮೂರನೇ ಬೌಲರ್ ಹರಿಯಾಣದ ಅನ್ಶುಲ್ ಕಾಂಬೋಜ್!
23 ವರ್ಷದ ಕಾಂಬೋಜ್, ರೋಹ್ಟಕ್ನ ಹೊರವಲಯದಲ್ಲಿರುವ ಚೌಧರಿ ಬನ್ಸಿ ಲಾಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಕೇರಳ ವಿರುದ್ಧದ ಆತಿಥೇಯ ತಂಡದ ಸಿ ಗುಂಪಿನ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.

ಲಹ್ಲಿ: ಹರಿಯಾಣದ ವೇಗಿ ಅನ್ಶುಲ್ ಕಾಂಬೋಜ್ ಶುಕ್ರವಾರ ರಣಜಿ ಟ್ರೋಫಿಯ ಇತಿಹಾಸದಲ್ಲಿ ಹೊಸ ದಾಖಲೆ ಮಾಡಿದ್ದಾರೆ. ಇನ್ನಿಂಗ್ಸ್ನಲ್ಲಿ ಎಲ್ಲಾ 10 ವಿಕೆಟ್ಗಳನ್ನು ಪಡೆದ ಮೂರನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 30.1 ಓವರ್ ಬೌಲಿಂಗ್ ನಡೆಸಿದ ಅನ್ಶುಲ್ ಕಾಂಬೋಜ್ 9 ಮೇಡನ್ ಸಹಿತ ಕೇವಲ 49 ರನ್ ರೇಟ್ ನಲ್ಲಿ 10 ವಿಕೆಟ್ ಪಡೆದರು.
23 ವರ್ಷದ ಕಾಂಬೋಜ್, ರೋಹ್ಟಕ್ನ ಹೊರವಲಯದಲ್ಲಿರುವ ಚೌಧರಿ ಬನ್ಸಿ ಲಾಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಕೇರಳ ವಿರುದ್ಧದ ಆತಿಥೇಯ ತಂಡದ ಸಿ ಗುಂಪಿನ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಬಂಗಾಳದ ಪ್ರೇಮಾಂಗ್ಶು ಚಟರ್ಜಿ (10/20) ಮತ್ತು ರಾಜಸ್ಥಾನದ ಪ್ರದೀಪ್ ಸುಂದರಂ (10/78) ಉಳಿದಇಬ್ಬರು ಬೌಲರ್ ಗಳಾಗಿದ್ದಾರೆ. ಒಟ್ಟಾರೆಯಾಗಿ, ಕಾಂಬೋಜ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 10 ವಿಕೆಟ್ ಪಡೆದ ಆರನೇ ಭಾರತೀಯರಾಗಿದ್ದಾರೆ. ಅನಿಲ್ ಕುಂಬ್ಳೆ, ಸುಭಾಷ್ ಗುಪ್ತೆ ಮತ್ತು ದೇಬಶಿಶ್ ಮೊಹಾಂತಿ ಈ ಪಟ್ಟಿಯಲ್ಲಿರುವ ಇತರರು. 23ರ ಹರೆಯದ ಅನ್ಶುಲ್ 2ನೇ ದಿನದಾಟದ ವೇಳೆಗೆ 8 ವಿಕೆಟ್ ಕಿತ್ತಿದ್ದರು. ಮೂರನೇ ದಿನವಾದ ಇಂದು(ಶುಕ್ರವಾರ) 2 ವಿಕೆಟ್ ಉರುಳಿಸುವುದರೊಂದಿಗೆ 10 ವಿಕೆಟ್ ಗೊಂಚಲು ತಮ್ಮದಾಗಿಸಿಕೊಂಡರು.
ಇವರ ಈ ಘಾತಕ ಬೌಲಿಂಗ್ ದಾಳಿಗೆ ನಲುಗಿದ ಕೇರಳ ತಂಡ 291 ಕ್ಕೆ ಆಲೌಟ್ ಆಯಿತು. ಹರ್ಯಾಣ ಪರ ಒಂದೇ ಇನ್ನಿಂಗ್ಸ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಯೂ ಕಾಂಬೋಜ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಜೋಗಿಂದರ್ ಶರ್ಮಾ ಹೆಸರಿನಲ್ಲಿತ್ತು. ಅವರು 2004-05ರ ಸೀಸನ್ನಲ್ಲಿ ವಿದರ್ಭ ವಿರುದ್ದ ಎಂಟು ವಿಕೆಟ್ ಕಿತ್ತಿದ್ದರು. ಆಕರ್ಷಕ ದೇಶೀಯ ಋತುವಿನ ನಂತರ 2024 ರ ಐಪಿಎಲ್ಗೆ ಮುಂಬೈ ಇಂಡಿಯನ್ಸ್ನಿಂದ ಆಯ್ಕೆಯಾದ ಕಾಂಬೋಜ್, ಇತ್ತೀಚೆಗೆ ಓಮನ್ನಲ್ಲಿ ನಡೆದ ಎಸಿಸಿ ಎಮರ್ಜಿಂಗ್ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಭಾರತ ಎ ತಂಡವನ್ನು ಪ್ರತಿನಿಧಿಸಿದ್ದರು.
ರಣಜಿ ಟ್ರೋಫಿ ಇತಿಹಾಸದಲ್ಲಿ ಅತ್ಯುತ್ತಮ ಬೌಲಿಂಗ್ ಪಟ್ಟಿ
10/20 ಪ್ರೇಮಾಂಗ್ಶು ಚಟರ್ಜಿ ಬಂಗಾಳ ವಿರುದ್ಧ ಅಸ್ಸಾಂ (1956-57)
10/49 ಅಂಶುಲ್ ಕಾಂಬೋಜ್ ಹರಿಯಾಣ v ಕೇರಳ (2024-25)
10/78 ಪ್ರದೀಪ್ ಸುಂದರಂ ರಾಜಸ್ಥಾನ v ವಿದರ್ಭ (1985-86).
ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 10 ವಿಕೆಟ್ ಪಡೆದ ಭಾರತೀಯ ಬೌಲರ್ಗಳ ಪಟ್ಟಿ:
10/20 ಪ್ರೇಮಾಂಗ್ಶು ಚಟರ್ಜಿ ಬಂಗಾಳ ವಿರುದ್ಧ ಅಸ್ಸಾಂ (1956-57) - ರಣಜಿ ಟ್ರೋಫಿ
10/46 ಡೆಬಾಸಿಸ್ ಮೊಹಾಂತಿ ಪೂರ್ವ ವಲಯ v ದಕ್ಷಿಣ ವಲಯ (2000-01) - ದುಲೀಪ್ ಟ್ರೋಫಿ
10/49 ಅಂಶುಲ್ ಕಾಂಬೋಜ್ ಹರಿಯಾಣ v ಕೇರಳ (2024-25)
10/74 10-74 - ಅನಿಲ್ ಕುಂಬ್ಳೆ ಭಾರತ v ಪಾಕಿಸ್ತಾನ (1999) -- ಕೋಟ್ಲಾ -- ಟೆಸ್ಟ್ ಪಂದ್ಯ
10/78 ಪ್ರದೀಪ್ ಸುಂದರಂ ರಾಜಸ್ಥಾನ ವಿರುದ್ಧ ವಿದರ್ಭ (1985-86) - ರಣಜಿ ಟ್ರೋಫಿ
10/78 ಸುಭಾಷ್ ಗುಪ್ತೆ ಬಾಂಬೆ v ಪಾಕಿಸ್ತಾನ ಕಂಬೈನ್ಡ್ ಸರ್ವಿಸಸ್ (1954-55).
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


