ಕ್ರಿಕೆಟ್

'ನಾನು ಕ್ಯಾಪ್ಟನ್ ಆಗಿ ಅಧಿಕಾರ ವಹಿಸಿಕೊಂಡಾಗ...': ವೃತ್ತಿಜೀವನದ ಬಗ್ಗೆ ರೋಹಿತ್ ಶರ್ಮಾ ಭಾವನಾತ್ಮಕ ಮಾತು

T20 ವಿಶ್ವಕಪ್ 2024ಕ್ಕೆ ಭಾರತೀಯ ಕ್ರಿಕೆಟ್ ತಂಡವು ಸಜ್ಜಾಗುತ್ತಿದ್ದಂತೆ, ರೋಹಿತ್ ಶರ್ಮಾ ಮತ್ತೊಮ್ಮೆ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ವಿರಾಟ್ ಕೊಹ್ಲಿ ನಾಯಕತ್ವದಿಂದ ನಿರ್ಗಮಿಸಿದ ನಂತರ ಟೀಂ ಇಂಡಿಯಾದ ನಾಯಕರಾದ ರೋಹಿತ್, ಎಲ್ಲ ಸ್ವರೂಪದ ಕ್ರಿಕೆಟ್‌ನಲ್ಲಿ ತಂಡವನ್ನು ಉತ್ತಮವಾಗಿ ಮುನ್ನಡೆಸಿದ್ದಾರೆ. ಇದೀಗ 37 ವರ್ಷದ ರೋಹಿತ್ ಶರ್ಮಾ, ತಮ್ಮ ಕ್ರಿಕೆಟ್ ಪ್ರಯಾಣದ ಬಗ್ಗೆ ಮಾತನಾಡಿದ್ದಾರೆ.

'ನಾನು ಕ್ಯಾಪ್ಟನ್ ಆಗಿ ಅಧಿಕಾರ ವಹಿಸಿಕೊಂಡಾಗ...': ವೃತ್ತಿಜೀವನದ ಬಗ್ಗೆ ರೋಹಿತ್ ಶರ್ಮಾ ಭಾವನಾತ್ಮಕ ಮಾತು
Published On :

T20 ವಿಶ್ವಕಪ್ 2024ಕ್ಕೆ ಭಾರತೀಯ ಕ್ರಿಕೆಟ್ ತಂಡವು ಸಜ್ಜಾಗುತ್ತಿದ್ದಂತೆ, ರೋಹಿತ್ ಶರ್ಮಾ ಮತ್ತೊಮ್ಮೆ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ವಿರಾಟ್ ಕೊಹ್ಲಿ ನಾಯಕತ್ವದಿಂದ ನಿರ್ಗಮಿಸಿದ ನಂತರ ಟೀಂ ಇಂಡಿಯಾದ ನಾಯಕರಾದ ರೋಹಿತ್, ಎಲ್ಲ ಸ್ವರೂಪದ ಕ್ರಿಕೆಟ್‌ನಲ್ಲಿ ತಂಡವನ್ನು ಉತ್ತಮವಾಗಿ ಮುನ್ನಡೆಸಿದ್ದಾರೆ. ಇದೀಗ 37 ವರ್ಷದ ರೋಹಿತ್ ಶರ್ಮಾ, ತಮ್ಮ ಕ್ರಿಕೆಟ್ ಪ್ರಯಾಣದ ಬಗ್ಗೆ ಮಾತನಾಡಿದ್ದಾರೆ.

'17 ವರ್ಷಗಳ ಕ್ರಿಕೆಟ್ ಪ್ರಯಾಣ ಅದ್ಭುತವಾಗಿದೆ. ನಾನು ಇನ್ನೂ ಕೆಲವು ವರ್ಷಗಳು ಆಡಲು ಮತ್ತು ವಿಶ್ವ ಕ್ರಿಕೆಟ್‌ನಲ್ಲಿ ಪ್ರಭಾವ ಬೀರಲು ಆಶಿಸುತ್ತೇನೆ' ಎಂದು ಅವರು ದುಬೈ ಐ 103.8 ನಲ್ಲಿ ಹೇಳಿದ್ದಾರೆ.

ನಾಯಕತ್ವದ ಜವಾಬ್ದಾರಿಯ ಬಗ್ಗೆ ಮಾತನಾಡುತ್ತಾ, 'ನಿಮ್ಮ ದೇಶದ ತಂಡದ ನಾಯಕತ್ವ ವಹಿಸುವುದು ನಿಮಗೆ ಸಿಗಬಹುದಾದ ದೊಡ್ಡ ಗೌರವವಾಗಿದೆ ಮತ್ತು ನನಗೆ, ನಾನು ಒಂದು ದಿನ ಟೀಂ ಇಂಡಿಯಾದ ನಾಯಕನಾಗುವ ದಿನ ಬರುತ್ತದೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ. ಹೌದು, ಜನರು ಹೇಳುತ್ತಾರೆ 'ಒಳ್ಳೆಯವರಿಗೆ ಒಳ್ಳೆಯದೇ ಸಂಭವಿಸುತ್ತದೆ' ಎಂದಿದ್ದಾರೆ.

ರೋಹಿತ್ ಭಾರತೀಯ ಕ್ರಿಕೆಟ್ ತಂಡದಲ್ಲಿ ದೀರ್ಘಕಾಲದಿಂದ ಇದ್ದಾರೆ. ಆದರೆ, ರಾಷ್ಟ್ರೀಯ ತಂಡವನ್ನು ಮುನ್ನಡೆಸುವ ಅವಕಾಶ 2022ರಿಂದ ಅವರಿಗೆ ಸಿಕ್ಕಿದೆ. ಹಿಟ್‌ಮ್ಯಾನ್ ಎಂದೇ ಖ್ಯಾತಿ ಗಳಿಸಿರುವ ರೋಹಿತ್, ಇಂಡಿಯನ್ ಪ್ರೀಮಿಯರ್ ಲೀಗ್ ವೃತ್ತಿಜೀವನದಲ್ಲಿ ನಾಯಕನಾಗಿ ಸಾಕಷ್ಟು ಸಾಧಿಸಿದ್ದರೂ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರು ಇನ್ನೂ ಅಂತಹ ಮೈಲಿಗಲ್ಲುಗಳನ್ನು ಸಾಧಿಸಿಲ್ಲ. ಆದರೆ, ತಂಡವನ್ನು ಸದಾ ಮುಂದಕ್ಕೆ ಕೊಂಡೊಯ್ಯುವ ದೃಷ್ಟಿ ಅವರ ಪಾಲಿಗೆ ಹಾಗೆಯೇ ಉಳಿದಿದೆ.

'ನಾನು ಟೀಂ ಇಂಡಿಯಾದ ನಾಯಕನಾಗಿ ಅಧಿಕಾರ ವಹಿಸಿಕೊಂಡಾಗ, ತಂಡವಾಗಿ ಪ್ರತಿಯೊಬ್ಬರೂ ಒಂದೇ ದಿಕ್ಕಿನಲ್ಲಿ ಓಡಬೇಕೆಂದು ನಾನು ಬಯಸುತ್ತೇನೆ. ಇದು ವೈಯಕ್ತಿಕ ಮೈಲಿಗಲ್ಲುಗಳು ಮತ್ತು ವೈಯಕ್ತಿಕ ಅಂಕಿಅಂಶಗಳು ಮತ್ತು ಗುರಿಗಳ ಬಗ್ಗೆ ಅಲ್ಲ. ತಂಡವಾಗಿ 11 ಮಂದಿ ಹೇಗೆ ಆಡುತ್ತೇವೆ ಮತ್ತು ಟ್ರೋಫಿ ಗೆಲ್ಲುವ ಗುರಿಯನ್ನು ಮಾತ್ರ ಒಳಗೊಂಡಿರುತ್ತದೆ' ಎಂದು ರೋಹಿತ್ ಪ್ರತಿಪಾದಿಸಿದರು.

ರೋಹಿತ್ ಅವರು ಜೀವನದಲ್ಲಿ ಎದುರಿಸಿದ ಸವಾಲುಗಳ ಬಗ್ಗೆ ಮಾತನಾಡುತ್ತಾ, 'ನಾನು ನನ್ನ ಜೀವನದಲ್ಲಿ ಹೆಚ್ಚು ಇಳಿತಗಳನ್ನೇ ಕಂಡಿದ್ದೇನೆ. ನಾನು ಇಂದು ಉತ್ತಮ ಮನುಷ್ಯ ಅಥವಾ ವ್ಯಕ್ತಿಯಾಗಿರುವುದು ನಾನು ಹಿಂದೆ ಕಂಡ ಏರಿಳಿತಗಳಿಂದಾಗಿಯೇ' ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.