IPL 2024: ನಾಳೆ ಬೆಂಗಳೂರಿನಲ್ಲಿ ಆರ್ ಸಿಬಿ- ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಿರ್ಣಾಯಕ ಪಂದ್ಯ!
ಹಿಂದಿನ ಪಂದ್ಯದಲ್ಲಿ ನಿರ್ಣಾಯಕ ಗೆಲುವು ಸಾಧಿಸಿದ ಡೆಲ್ಲಿ ಕಾಪಿಟಲ್ಸ್ ತಂಡ ನಾಳೆ ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಅಂತಿಮ ಲೀಗ್ ಹಂತದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಸೆಣಸಲಿದೆ. ನಿಧಾನಗತಿಯ ಓವರ್ ರೇಟ್ ನಿಂದಾಗಿ ರಿಷಭ್ ಪಂತ್ ಅಮಾನತುಗೊಂಡಿದ್ದು, ಅಕ್ಸರ್ ಪಟೇಲ್ ತಂಡವನ್ನು ಮುನ್ನಡೆಸಲಿದ್ದಾರೆ.

ಬೆಂಗಳೂರು: ಹಿಂದಿನ ಪಂದ್ಯದಲ್ಲಿ ನಿರ್ಣಾಯಕ ಗೆಲುವು ಸಾಧಿಸಿದ ಡೆಲ್ಲಿ ಕಾಪಿಟಲ್ಸ್ ತಂಡ ನಾಳೆ ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಅಂತಿಮ ಲೀಗ್ ಹಂತದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಸೆಣಸಲಿದೆ. ನಿಧಾನಗತಿಯ ಓವರ್ ರೇಟ್ ನಿಂದಾಗಿ ರಿಷಭ್ ಪಂತ್ ಅಮಾನತುಗೊಂಡಿದ್ದು, ಅಕ್ಸರ್ ಪಟೇಲ್ ತಂಡವನ್ನು ಮುನ್ನಡೆಸಲಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡೆಲ್ಲಿ ಕ್ಯಾಪಿಟಲ್ ತಂಡದ ಮುಖ್ಯ ಕೋಚ್ ರಿಕ್ಕಿ ಪಾಟಿಂಗ್, ಕಳೆದ ಕೆಲವು ಸೀಸನ್ ಗಳಿಗೆ ಉಪ ನಾಯಕರಾಗಿದ್ದ ಅಕ್ಸರ್ ಪಟೇಲ್, ಅನುಭವಿ ಐಪಿಎಲ್ ಆಟಗಾರರಾಗಿದ್ದಾರೆ. ಸಂವೇದನಾಶೀಲ ವ್ಯಕ್ತಿಯಾಗಿದ್ದು, ಆಟವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಈ ಪಂದ್ಯದ ಬಗ್ಗೆ ಅವರು ಉತ್ಸುಕರಾಗಿದ್ದಾರೆ. ಬೌಲರ್ ಗಳೊಂದಿಗೆ ಇಂದು ಸಭೆ ಮಾಡಿದ್ದೇವೆ. ಇಂದು ರಾತ್ರಿ ಎಲ್ಲಾ ಆಟಗಾರರೊಂದಿಗೆ ಪಂದ್ಯದ ಯೋಜನೆ ಕುರಿತು ಮಾತುಕತೆ ನಡೆಸಲಿದ್ದು, ನಾಳಿನ ಪಂದ್ಯವನ್ನು ಎದುರಿಸಲು ಸಿದ್ದರಿದ್ದಾರೆ ಎಂದರು.
ಡೆಲ್ಲಿ ಕ್ಯಾಪಿಟಲ್ಸ್ 12 ಪಂದ್ಯಗಳಲ್ಲಿ 12 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಆದರೆ ಆರ್ ಸಿಬಿ ನಾಲ್ಕು ಪಂದ್ಯ ಗೆದಿದ್ದು, ನಾಳಿನ ಪಂದ್ಯ ಕಠಿಣ ಅಥವಾ ಸಮಬಲದ ಹೋರಾಟದಿಂದ ಕೂಡಿರುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರಿಕ್ಕಿ ಪಾಟಿಂಗ್, ಐಪಿಎಲ್ ನಲ್ಲಿ ಎಲ್ಲಾ ಪಂದ್ಯಗಳು ಕಠಿಣ ಆಟಗಳಾಗಿವೆ. ಎರಡು ವಾರದ ಹಿಂದೆ RCB ಅತ್ಯುತ್ತಮವಾಗಿ ಆಡಿದ ನಿದರ್ಶನಗಳಿಲ್ಲ. ಅದೇ ರೀತಿಯಲ್ಲಿ ನಾಳಿನ ಪಂದ್ಯ ಆಡಬಹುದು ಎಂದರು. ಕಳೆದ ಪಂದ್ಯದಲ್ಲಿ ಆಡದ ಡೇವಿಡ್ ವಾರ್ನಿರ್ ಆರ್ ಸಿಬಿ ವಿರುದ್ಧ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



