IPL 2024: ಸ್ಫೋಟಕ ಬ್ಯಾಟಿಂಗ್, ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಗುಜರಾತ್ಗೆ 7 ವಿಕೆಟ್ ಸುಲಭ ಗೆಲುವು
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂಜು ನಡೆದ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಗುಜರಾತ್ ಟೈಟಾನ್ಸ್ 7 ವಿಕೆಟ್ಗಳ ಗೆಲುವು ದಾಖಲಿಸಿದೆ.

ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂಜು ನಡೆದ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಗುಜರಾತ್ ಟೈಟಾನ್ಸ್ 7 ವಿಕೆಟ್ಗಳ ಗೆಲುವು ದಾಖಲಿಸಿದ್ದು, ನಡೆಯುತ್ತಿರುವ 2024ರ ಐಪಿಎಲ್ ಆವೃತ್ತಿಯಲ್ಲಿ ಎರಡನೇ ಗೆಲುವು ಇದಾಗಿದೆ.
GT 20 ಓವರ್ಗಳಲ್ಲಿ ಸನ್ರೈಸರ್ಸ್ ಹೈದರಾಬಾದ್ (SRH) ತಂಡವನ್ನು 162 ರನ್ ಗಳಿಗೆ ಸೀಮಿತಗೊಳಿಸುವಲ್ಲಿ ಯಶಸ್ವಿಯಾಯಿತು. ಮೋಹಿತ್ ಶರ್ಮಾ ಅವರ ಮೂರು ವಿಕೆಟ್ಗಳ ಗೋಚಲಿನ ನೆರವಿನಿಂದ ಗುಜರಾತ್ ಟೈಟಾನ್ಸ್ ಪಂದ್ಯದ ಮೇಲೆ ನಿಯಂತ್ರಣ ಸಾಧಿಸಿತು.
SRH ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಟ್ರಾವಿಸ್ ಹೆಡ್ ಮತ್ತು ಮಯಾಂಕ್ ಅಗರವಾಲ್ ತಮ್ಮ ಇನ್ನಿಂಗ್ಸ್ ಆರಂಭಿಸಿದರು. ಅವರು ಮೊದಲ ವಿಕೆಟ್ಗೆ 34 ರನ್ಗಳ ಜೊತೆಯಾಟವನ್ನು ನಡೆಸಿದರು. ಈ ಜೊತೆಯಾಟವನ್ನು ಅಜ್ಮತುಲ್ಲಾ ಒಮರ್ಜಾಯ್ ಮುರಿದರು. 17 ಎಸೆತಗಳಲ್ಲಿ 16 ರನ್ ಗಳಿಸಿದ್ದು ಮಾಯಾಂಕ್ ಅಗರವಾಲ್ ರನ್ನು ಔಟ್ ಮಾಡಿದರು. ನಂತರ ಬಂದ ಬ್ಯಾಟರ್ ಗಳು ಬೃಹತ್ ಮೊತ್ತ ಪೇರಿಸುವಲ್ಲಿ ವಿಫಲರಾದರು.
ಪರಿಣಾಮ ಹೈದರಾಬಾದ್ ತಂಡ 162 ರನ್ ಗಳಿಗೆ ಸೀಮಿತವಾಯಿತು. ಹೈದರಾಬಾದ್ ನೀಡಿದ 163 ರನ್ ಗಳ ಗುರಿ ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ಪರ ವೃದ್ಧಿಮಾನ್ ಸಹಾ 25, ಶುಭಮ್ನನ್ ಗಿಲ್ 36 ರನ್ ಗಳಿಸಿದರೆ ನಂತರ ಬಂದ ಸಾಯಿ ಸುದರ್ಶನ್ 45 ರನ್ ಬಾರಿಸಿ ಔಟಾದರು. ಡೇವಿಡ್ ಮಿಲ್ಲರ್ ಅಜೇಯ 44 ಹಾಗೂ ವಿಜಯ್ ಶಂಕರ್ ಅಜೇಯ 14 ರನ್ ಬಾರಿಸಿ ತಂಡ ಗೆಲುವಿನ ದಡ ಸೇರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



