ಕ್ರಿಕೆಟ್

IPL 2024: ಪಂಜಾಬ್ ವಿರುದ್ಧ RCB ಗೆ 4 ವಿಕೆಟ್ ಗೆಲುವು

ಬೆಂಗಳೂರಿನಲ್ಲಿ ನಡೆದ ಐಪಿಎಲ್ 2024 ಟೂರ್ನಿಯ 6 ನೇ ಪಂದ್ಯದಲ್ಲಿ ಆರ್ ಸಿಬಿ (RCB) ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 4 ವಿಕೆಟ್ ಗಳ ಗೆಲುವು ದಾಖಲಿಸಿದೆ.

IPL 2024: ಪಂಜಾಬ್ ವಿರುದ್ಧ RCB ಗೆ 4 ವಿಕೆಟ್ ಗೆಲುವು
ಆರ್ ಸಿಬಿ — online desk
Published On :

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಐಪಿಎಲ್ 2024 ಟೂರ್ನಿಯ 6 ನೇ ಪಂದ್ಯದಲ್ಲಿ ಆರ್ ಸಿಬಿ (RCB) ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 4 ವಿಕೆಟ್ ಗಳ ಗೆಲುವು ದಾಖಲಿಸಿದೆ. ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ರಾಯಲ್ ಚಾಲೆಂಜರ್ಸ್ ತಂಡ ಪಂಜಾಬ್ ತಂಡವನ್ನು ನಿಗದಿತ 20 ಓವರ್ ಗಳಿಗೆ 176 ರನ್ ಗಳಿಗೆ ನಿರ್ಬಂಧಿಸಿತು.

ಮೊಹಮ್ಮದ್ ಸಿರಾಜ್ 26 ರನ್ ನೀಡಿ 2 ವಿಕೆಟ್ ಗಳಿಸಿದರೆ, ಯಶ್ ದಯಾಲ್ 23 ರನ್ ನೀಡಿ 1 ವಿಕೆಟ್ ಅಲ್ಜಾರಿ ಜೋಸೆಫ್ 43 ರನ್ ನೀಡಿ 1 ವಿಕೆಟ್ ಗಳಿಸಿ ದುಬಾರಿ ಬೌಲರ್ ಆದರು. ಗ್ಲೆನ್ ಮ್ಯಾಕ್ಸ್ ವೆಲ್ 29 ರನ್ ನೀಡಿ 2 ವಿಕೆಟ್ ಗಳಿಸಿದರು.

ಪಂಜಾಬ್ ನೀಡಿದ್ದ 177 ರನ್ ಗಳ ಚೇಸಿಂಗ್ ನಲ್ಲಿ ಆರ್ ಸಿಬಿ ತಂಡದ ಪರ ವಿರಾಟ್ ಕೊಹ್ಲಿ 49 ಎಸೆತಗಳಲ್ಲಿ 77 ರನ್ ಗಳಿಸಿ ಅಬ್ಬರದ ಆಟ ಆಡಿದ ಪರಿಣಾಮ ತಂಡಕ್ಕೆ ರನ್ ಚೇಸಿಂಗ್ ನಲ್ಲಿ ಅತ್ಯುತ್ತಮ ಆರಂಭ ಲಭ್ಯವಾಯಿತು.

ಆದರೆ ಕೊಹ್ಲಿಗೆ ದೀರ್ಘ ಕಾಲ ಉತ್ತಮ ಜೊತೆಯಾಟ ಲಭ್ಯವಾಗದ ಕಾರಣ ತಂಡಕ್ಕೆ ಸೋಲಿನ ಭೀತಿ ಉಂಟಾಗಿತ್ತು. 6 ನೇ ವಿಕೆಟ್ ಗೆ ಜೊತೆಯಾದ ದಿನೇಶ್ ಕಾರ್ತಿಕ್ (10 ಎಸೆತಗಳಲ್ಲಿ 28 ರನ್) ಮಹಿಪಾಲ್ ಲೋಮ್ರರ್ (8 ಎಸೆತಗಳಲ್ಲಿ 17 ರನ್) ಗಳಿಸಿದರು. ಆರ್ ಸಿಬಿ ತಂಡ 6 ವಿಕೆಟ್ ಗಳ ನಷ್ಟಕ್ಕೆ 178 ರನ್ ಗಳಿಸಿ 4 ವಿಕೆಟ್ ಗಳಿಂದ ಪಂಜಾಬ್ ತಂಡವನ್ನು ಮಣಿಸಿದೆ.

ಪಂಜಾಬ್ ಪರ ಕಗಿಸೊ ರಬಾಡ 2 ವಿಕೆಟ್ ಹರ್ಪ್ರೀತ್ ಬ್ರಾರ್ 2 ವಿಕೆಟ್ ಪಡೆದರೆ, ಹರ್ಷಲ್ ಪಟೇಲ್, ಸ್ಯಾಮ್ ಕರ್ರಾನ್ ತಲಾ 1 ವಿಕೆಟ್ ಪಡೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.