CSK ನಾಯಕತ್ವದಿಂದ ಧೋನಿ ನಿವೃತ್ತಿ; ಋತುರಾಜ್ ಗಾಯಕ್ವಾಡ್ ತಂಡದ ನೂತನ ಕ್ಯಾಪ್ಟನ್!
ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವದಿಂದ ನಿವೃತ್ತರಾಗಿದ್ದು, ಋತುರಾಜ್ ಗಾಯಕ್ವಾಡ್ ಟಾಟಾ ಐಪಿಎಲ್ 2024 ರ ಸೀಸನ್ ನಿಂದ ತಂಡಕ್ಕೆ ಹೊಸ ನಾಯಕರಾಗಿ ಆಯ್ಕೆಯಾಗಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವದಿಂದ ನಿವೃತ್ತರಾಗಿದ್ದು, ಋತುರಾಜ್ ಗಾಯಕ್ವಾಡ್ ಟಾಟಾ ಐಪಿಎಲ್ 2024 ರ ಸೀಸನ್ ನಿಂದ ತಂಡಕ್ಕೆ ಹೊಸ ನಾಯಕರಾಗಿ ಆಯ್ಕೆಯಾಗಿದ್ದಾರೆ. ಸಿಎಸ್ ಕೆ ತಂಡದ ಪ್ರಮುಖ ಬ್ಯಾಟ್ಸ್ ಮನ್ ಆಗಿರುವ ಗಾಯಕ್ವಾಡ್ 52 ಐಪಿಎಲ್ ಪಂದ್ಯಗಳನ್ನಾಡಿದ್ದಾರೆ. ಗಾಯಕ್ವಾಡ್ ಅವರು ಹ್ಯಾಂಗ್‌ಝೌನಲ್ಲಿ ನಾಯಕರಾಗಿ ಭಾರತಕ್ಕೆ ಏಷ್ಯನ್ ಗೇಮ್ಸ್ 2023 ಚಿನ್ನದ ಪದಕವನ್ನು ಗೆದ್ದಿದ್ದಾರೆ.
ನಾಯಕತ್ವ ಬಿಟ್ಟುಕೊಟ್ಟಿರುವ ಎಂಎಸ್ ಧೋನಿ ಐಪಿಎಲ್‌ನಿಂದ ನಿವೃತ್ತಿಯಾಗಿಲ್ಲ ಮತ್ತು ಇನ್ನೂ ತಂಡದ ಸದಸ್ಯರಾಗಿ ಲಭ್ಯವಿದ್ದಾರೆ. ಐಪಿಎಲ್ ಅಧಿಕೃತ ಹ್ಯಾಂಡಲ್‌ನಿಂದ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಮಾರ್ಚ್ 21, ಗುರುವಾರದಂದು ಈ ಘೋಷಣೆ ಮಾಡಲಾಗಿದೆ.
ಕಳೆದ ಬಾರಿ, 2022 ರಲ್ಲಿ ಧೋನಿ ನಾಯಕತ್ವ ಬಿಟ್ಟುಕೊಟ್ಟಾಗ ಆ ಸ್ಥಾನವನ್ನು ರವೀಂದ್ರ ಜಡೇಜಾ ತುಂಬಿದ್ದರು. ಆದರೆ ಸೀಸನ್ ನ ಮಧ್ಯ ಭಾಗದಲ್ಲಿ ಧೋನಿ ಮತ್ತೆ ತಂಡವನ್ನು ಮುನ್ನಡೆಸಿದ್ದರು 2023 ರಲ್ಲಿ ತಂಡ 5 ನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮುವುದರಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


