ಕ್ರಿಕೆಟ್

ಟಿ20 ಏಷ್ಯಾ ಕಪ್ 2024: ಭಾರತೀಯ ಬೌಲರ್‌ಗಳ ಅತ್ಯುತ್ತಮ ಬೌಲಿಂಗ್ ದಾಳಿ; 108 ರನ್ ಗೆ ಪಾಕ್ ಪತನ

ಮಹಿಳೆಯರ ಏಷ್ಯಾ ಕಪ್ 2024ರ ಟೂರ್ನಿಯ ಎರಡನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿವೆ. ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ಭಾರತೀಯ ಬೌಲರ್ ಗಳ ದಾಳಿಗೆ ತತ್ತರಿಸಿದ್ದು 108 ರನ್ ಗಳಿಗೆ ಆಲೌಟ್ ಆಯಿತು.

ಟಿ20 ಏಷ್ಯಾ ಕಪ್ 2024: ಭಾರತೀಯ ಬೌಲರ್‌ಗಳ ಅತ್ಯುತ್ತಮ ಬೌಲಿಂಗ್ ದಾಳಿ; 108 ರನ್ ಗೆ ಪಾಕ್ ಪತನ
ಭಾರತೀಯ ಮಹಿಳಾ ತಂಡ
Published On :

ಡಂಬುಲ್ಲಾ: ಮಹಿಳೆಯರ ಏಷ್ಯಾ ಕಪ್ 2024ರ ಟೂರ್ನಿಯ ಎರಡನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿವೆ. ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ಭಾರತೀಯ ಬೌಲರ್ ಗಳ ದಾಳಿಗೆ ತತ್ತರಿಸಿದ್ದು 108 ರನ್ ಗಳಿಗೆ ಆಲೌಟ್ ಆಯಿತು.

ಶ್ರೀಲಂಕಾದ ಡಂಬುಲ್ಲಾದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಿತು. ಆರಂಭಿಕರಾಗಿ ಕಣಕ್ಕಿಳಿದ ಗುಲ್ ಫಿರೋಜಾ 5 ರನ್ ಗಳಿಸಿ ಔಟಾದರೆ ಮೌನೀಬಾ ಅಲಿ 11 ರನ್ ಬಾರಿಸಿ ಔಟಾದರು. ನಂತರ ಬಂದ ಸಿರ್ದಾ ಅಮಿನ್ 25, ಟುಬಾ ಹಸನ್ 22 ಮತ್ತು ಫಾತಿಮಾ ಸನಾ ಅಜೇಯ 22 ರನ್ ಬಿಟ್ಟರೆ ಮತ್ಯಾರು ಎರಡಂಕಿ ದಾಟಲಿಲ್ಲ.

ಭಾರತದ ಪರ ಬೌಲಿಂಗ್ ನಲ್ಲಿ ದೀಪ್ತಿ ಶರ್ಮಾ 3, ರೇಣುಕಾ ಶರ್ಮಾ, ಪೂಜಾ ವಸ್ತ್ರಾಕರ್ ಮತ್ತು ಶ್ರೇಯಾಂಕ ಪಾಟೀಲ್ ತಲಾ 2 ವಿಕೆಟ್ ಪಡೆದಿದ್ದಾರೆ.

ಇನ್ನು ಪಾಕಿಸ್ತಾನ ನೀಡಿದ 109 ರನ್ ಗುರಿ ಬೆನ್ನಟ್ಟಿದ ಭಾರತ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದೆ. 5 ಓವರ್ ಗಳ ಮುಕ್ತಾಯಕ್ಕೆ 42 ರನ್ ಬಾರಿಸಿದೆ. ಭಾರತದ ಶಫಾಲಿ ವರ್ಮಾ ಅಜೇಯ 29 ಮತ್ತು ಸ್ಮೃತಿ ಮಂದಾನ ಅಜೇಯ 13 ರನ್ ಬಾರಿಸಿ ಆಡುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.