ಕ್ರಿಕೆಟ್

3ನೇ ಟೆಸ್ಟ್: ಜೈಸ್ವಾಲ್ ಭರ್ಜರಿ ಶತಕ, ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 322 ರನ್ ಬಲಿಷ್ಠ ಮುನ್ನಡೆ

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸದೃಡ ಸ್ಥಾನದಲ್ಲಿದೆ. ಮೂರನೇ ದಿನದಾಟದಂತ್ಯದ ವೇಳೆಗೆ ಭಾರತ ತಂಡದ ಮುನ್ನಡೆ 322 ರನ್‌ ಮುನ್ನಡೆ ಸಾಧಿಸಿದೆ.

3ನೇ ಟೆಸ್ಟ್: ಜೈಸ್ವಾಲ್ ಭರ್ಜರಿ ಶತಕ, ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 322 ರನ್ ಬಲಿಷ್ಠ ಮುನ್ನಡೆ
ಯಶಸ್ವಿ ಜೈಸ್ವಾಲ್
Published On :

ರಾಜ್‌ಕೋಟ್‌: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸದೃಡ ಸ್ಥಾನದಲ್ಲಿದೆ. ಮೂರನೇ ದಿನದಾಟದಂತ್ಯದ ವೇಳೆಗೆ ಭಾರತ ತಂಡದ ಮುನ್ನಡೆ 322 ರನ್‌ ಮುನ್ನಡೆ ಸಾಧಿಸಿದೆ.

ಯಶಸ್ವಿ ಜೈಸ್ವಾಲ್ (104 ರನ್) ಅದ್ಭುತ ಶತಕ ಮತ್ತು ಶುಭಮನ್ ಗಿಲ್ ಅವರ ಅರ್ಧಶತಕದಿಂದಾಗಿ ಟೀಂ ಇಂಡಿಯಾ ಬೃಹತ್ ಮೊತ್ತ ಪೇರಿಸಿದ್ದು ಟೀಂ ಇಂಡಿಯಾ ಸ್ಕೋರ್ 196/2 ಆಗಿದೆ.

ದಿನದ ಆಟದ ಅಂತ್ಯದ ಮೊದಲು ಯಶಸ್ವಿ ಜೈಸ್ವಾಲ್ ಅವರ ಬೆನ್ನಿನಲ್ಲಿ ಸಮಸ್ಯೆ ಇದ್ದ ಕಾರಣ ನಿವೃತ್ತರಾದರು. ಅವರ ನಂತರ, ರಜತ್ ಪಾಟಿದಾರ್ ಬ್ಯಾಟಿಂಗ್‌ಗೆ ಬಂದರು ಆದರೆ 10 ಎಸೆತಗಳಲ್ಲಿ ಖಾತೆ ತೆರೆಯದೆ ಔಟಾದರು. ಇಂತಹ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾ ಕುಲದೀಪ್ ಯಾದವ್ ಅವರನ್ನು ಕಳುಹಿಸಿದ್ದು 3 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದರೆ ಶುಭಮನ್ ಗಿಲ್ 65 ರನ್ ಗಳಿಸಿ ಅಜೇಯರಾಗಿದ್ದಾರೆ.

ಇದಕ್ಕೂ ಮುನ್ನ ಭಾರತ ತಂಡ ಇಂಗ್ಲೆಂಡ್ ತಂಡವನ್ನು 319 ರನ್‌ಗಳಿಗೆ ಆಲೌಟ್ ಮಾಡಿತ್ತು. ರವಿಚಂದ್ರನ್ ಅಶ್ವಿನ್ ಅನುಪಸ್ಥಿತಿಯ ನಡುವೆಯೂ ಭಾರತ ತಂಡ ಇಂಗ್ಲೆಂಡ್ ಅನ್ನು 319 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ 126 ರನ್‌ಗಳ ಮುನ್ನಡೆ ಸಾಧಿಸಿತು. ಭಾರತ ತಂಡದ ಪರವಾಗಿ ಕುಲದೀಪ್ ಯಾದವ್ ಅಗ್ರ ಕ್ರಮಾಂಕದಲ್ಲಿ 2 ದೊಡ್ಡ ವಿಕೆಟ್ ಪಡೆಯುವ ಮೂಲಕ ಇಂಗ್ಲೆಂಡ್ ಕುಸಿತಕ್ಕೆ ನಾಂದಿ ಹಾಡಿದರು. ನಂತರ ಮೊಹಮ್ಮದ್ ಸಿರಾಜ್ (4) ಹಾಗೂ ರವೀಂದ್ರ ಜಡೇಜಾ (2) ವಿಕೆಟ್ ಪಡೆದರು.

ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಶನಿವಾರ ಇಂಗ್ಲೆಂಡ್ ವಿರುದ್ಧ ಎರಡನೇ ಇನ್ನಿಂಗ್ಸ್‌ನಲ್ಲಿ ಅದ್ಭುತ ಶತಕ ಗಳಿಸಿದ್ದಾರೆ. ಶತಕ ಗಳಿಸಿದ ನಂತರ, ಜೈಸ್ವಾಲ್ ಗಾಯದ ಕಾರಣದಿಂದ ನಿವೃತ್ತರಾದರು. ಅವರು 104 ರನ್ ಗಳಿಸಿದರು. ಯಶಸ್ವಿ ಜೈಸ್ವಾಲ್ 122 ಎಸೆತಗಳಲ್ಲಿ ಶತಕ ಪೂರೈಸಿದರು. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ ಒಂಬತ್ತು ಬೌಂಡರಿ ಮತ್ತು ಐದು ಸಿಕ್ಸರ್‌ಗಳನ್ನು ಹೊಡೆದರು. ವಿರಾಟ್ ಕೊಹ್ಲಿ ನಂತರ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ 400ಕ್ಕೂ ಹೆಚ್ಚು ರನ್ ಗಳಿಸಿದ ಭಾರತದ ಎರಡನೇ ಬ್ಯಾಟ್ಸ್‌ಮನ್ ಆಗಿ ಜೈಸ್ವಾಲ್ ಹೊರಹೊಮ್ಮಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.