IPL 2024: ಮರುಭೂಮಿಯಲ್ಲಿ ಮಳೆಯ ಸಿಂಚನದಂತೆ, ಸತತ ಸೋಲಿನ ಬಳಿಕನ SRH ವಿರುದ್ಧ RCB ಗೆ ಗೆಲುವು!
ಐಪಿಎಲ್ 2024ರ ಟೂರ್ನಿ ಆರ್ ಸಿಬಿಗಂತು ಮಹತ್ವದ್ದಾಗಿಲ್ಲ. ಆರ್ ಸಿಬಿ ಆಡಿದ 8 ಪಂದ್ಯಗಳಲ್ಲಿ ಕೇವಲ 1 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು. ಆದರೆ ಇಂದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ 35 ರನ್ ಗಳಿಂದ ಗೆದ್ದು ಬೀಗಿದೆ.

ಹೈದರಾಬಾದ್: ಐಪಿಎಲ್ 2024ರ ಟೂರ್ನಿ ಆರ್ ಸಿಬಿಗಂತು ಮಹತ್ವದ್ದಾಗಿಲ್ಲ. ಆರ್ ಸಿಬಿ ಆಡಿದ 8 ಪಂದ್ಯಗಳಲ್ಲಿ ಕೇವಲ 1 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು. ಆದರೆ ಇಂದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ 35 ರನ್ ಗಳಿಂದ ಗೆದ್ದು ಬೀಗಿದೆ.
ಹೈದರಾಬಾದ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ ಸಿಬಿ ಭರ್ಜರಿ ಪ್ರದರ್ಶನ ನೀಡಿತು. ಬೆಂಗಳೂರು ಪರ ಆಡಿದ ವಿರಾಟ್ ಕೊಹ್ಲಿ 51 ಹಾಗೂ ರಜತ್ ಪಾಟಿದಾರ್ 50 ಅದ್ಭುತ ಅರ್ಧ ಶತಕದ ನೆರವಿನಿಂದ ಆರ್ ಸಿಬಿ ನಿಗದಿತ ಓವರ್ 7 ವಿಕೆಟ್ ನಷ್ಟಕ್ಕೆ 206 ರನ್ ಪೇರಿಸಿತ್ತು. ಆರ್ ಸಿಬಿ ಪರ ಫಾಫ್ ಡುಪ್ಲೆಸಿಸ್ 25, ಕ್ಯಾಮರೂನ್ ಗ್ರೀನ್ 37 ರನ್ ಗಳಿಸಿದ್ದಾರೆ. ಹೈದರಾಬಾದ್ ಪರ ಜಯದೇವ್ ಉನಾದ್ಕಟ್ 3, ನಟರಾಜನ್ 2 ವಿಕೆಟ್ ಪಡೆದಿದ್ದಾರೆ.
ಆರ್ ಸಿಬಿ ನೀಡಿದ 207 ರನ್ ಗಳ ಬೃಹತ್ ಮೊತ್ತ ಬೆನ್ನಟ್ಟಿದ ಹೈದರಾಬಾದ್ ತಂಡಕ್ಕೆ ಆರಂಭಿಕ ಆಘಾತ ಎದುರಾಗಿತ್ತು. ಸ್ಫೋಟಕ ಬ್ಯಾಟರ್ ಟ್ರಾವಿಸ್ ಹೆಡ್ ರನ್ನು ಔಟ್ ಮಾಡುವ ಮೂಲಕ ಜ್ಯಾಕ್ಸ್ ಹೈದರಾಬಾದ್ ಗೆ ಮೊದಲ ಆಘಾತ ನೀಡಿದರು. ನಂತರ ಮಾರ್ಕ್ರಾಮ್ 7, ನಿತೀಶ್ ರೆಡ್ಡಿ 13 ರನ್ ಗಳಿಸಿ ಔಟಾದರು. ಈ ವೇಳೆ ಶಹಬಾದ್ ಅಹ್ಮದ್ ಏಕಾಂಗಿ ಹೋರಾಟ ನಡೆಸಿದ್ದು ಅಜೇಯ 40 ರನ್ ಬಾರಿಸಿದರು. ಆದರೆ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.
ಇನ್ನುಳಿದಂತೆ ಪ್ಯಾಟ್ ಕಮಿನ್ಸ್ 31, ಭುವನೇಶ್ವರ್ ಕುಮಾರ್ 13 ಹಾಗೂ ಜಯದೇವ್ ಉನಾದ್ಕಟ್ ಅಜೇಯ 8 ರನ್ ಗಳಿಸಿದರು. ಅಂತಿಮವಾಗಿ ಹೈದರಾಬಾದ್ ತಂಡ ನಿಗದಿತ ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಲಷ್ಟೇ ಶಕ್ತವಾವಾಗಿದ್ದು 35 ರನ್ ಗಳಿಂದ ಆರ್ ಸಿಬಿಗೆ ಶರಣಾಯಿತು.
ಟೂರ್ನಿಯಲ್ಲಿ ಆರ್ ಸಿಬಿ ತಂಡ 9 ಪಂದ್ಯಗಳಲ್ಲಿ 2 ಪಂದ್ಯಗಳನ್ನು ಗೆಲ್ಲುವ ಮೂಲಕ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



