IPL 2024: ಟ್ರಾವಿಸ್ ಹೆಡ್, ಕಮ್ಮಿನ್ಸ್ ಅಬ್ಬರ, RCB ವಿರುದ್ಧ ಹೈದ್ರಾಬಾದ್ ಗೆ 25 ರನ್ ಭರ್ಜರಿ ಜಯ
ಆಸ್ಟ್ರೇಲಿಯಾದ ಬ್ಯಾಟರ್ ಟ್ರಾವಿಸ್ ಹೆಡ್ ಅವರ ಭರ್ಜರಿ ಶತಕ ಹಾಗೂ ನಾಯಕ ಪ್ಯಾಟ್ ಕಮ್ಮಿನ್ಸ್ ಮೂರು ವಿಕೆಟ್ ಕಬಳಿಸುವ ಮೂಲಕ ಸೋಮವಾರ ಇಲ್ಲಿ ನಡೆದ ಐಪಿಎಲ್ 2024 ಟೂರ್ನಿಯ 30 ನೇ ಪಂದ್ಯದಲ್ಲಿ ಅತ್ಯಧಿಕ ಮೊತ್ತವನ್ನು ದಾಖಲಿಸಿದ ಸನ್‌ರೈಸರ್ಸ್ ಹೈದರಾಬಾದ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 25 ರನ್‌ಗಳಿಂದ ಸೋಲಿಸಿತು.

ಬೆಂಗಳೂರು: ಆಸ್ಟ್ರೇಲಿಯಾದ ಬ್ಯಾಟರ್ ಟ್ರಾವಿಸ್ ಹೆಡ್ ಅವರ ಭರ್ಜರಿ ಶತಕ ಹಾಗೂ ನಾಯಕ ಪ್ಯಾಟ್ ಕಮ್ಮಿನ್ಸ್ ಮೂರು ವಿಕೆಟ್ ಕಬಳಿಸುವ ಮೂಲಕ ಸೋಮವಾರ ಇಲ್ಲಿ ನಡೆದ ಐಪಿಎಲ್ 2024 ಟೂರ್ನಿಯ 30 ನೇ ಪಂದ್ಯದಲ್ಲಿ ಅತ್ಯಧಿಕ ಮೊತ್ತವನ್ನು ದಾಖಲಿಸಿದ ಸನ್‌ರೈಸರ್ಸ್ ಹೈದರಾಬಾದ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 25 ರನ್‌ಗಳಿಂದ ಸೋಲಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ ದಾಖಲೆಯ 262 ರನ್ ಗಳಿಸಿತು. ಇದು T20 ಕ್ರಿಕೆಟ್‌ನ ಎಲ್ಲಾ ಪ್ರಕಾರಗಳಲ್ಲಿ ಎರಡನೇ ಅತ್ಯಧಿಕ ರನ್ ಗಳ ದಾಖಲೆಯಾಗಿದೆ.
ಆರಂಭಿಕ ಆಟಗಾರರಾದ ಟ್ರಾವಿಸ್ ಹೆಡ್ 8 ಸಿಕ್ಸರ್, 9 ಬೌಂಡರಿಗಳೊಂದಿಗೆ 41 ಎಸೆತಗಳಲ್ಲಿ ಭರ್ಜರಿ 102 ರನ್ ಗಳಿಸುವುದರೊಂದಿಗೆ ಕ್ರಿಕೆಟ್ ಅಭಿಮಾನಿಗಳ ಮನರಂಜಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಅಭಿಷೇಕ್ ಶರ್ಮಾ 34, ಹೆನ್ರಿಕ್ ಕ್ಲಾಸೆನ್ 67, ಐಡೆನ್ ಮಾರ್ಕ್ರಾಮ್ ಅಜೇಯ 32, ಅಬ್ದುಲ್ ಶಮದ್ ಅಜೇಯ 37 ರನ್ ಗಳಿಸುವುದರೊಂದಿಗೆ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ಗಳಲ್ಲಿ 287 ರನ್ ಗಳಿಸಿ, ಆರ್ ಸಿಬಿಗೆ 288 ರನ್ ಗಳ ಗೆಲುವಿನ ಗುರಿ ನೀಡಿತು.
ಸನ್ ರೈಸರ್ಸ್ ಹೈದರಾಬಾದ್ ನೀಡಿದ 288 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಆರ್ ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ, 42, ನಾಯಕ ಫಾಪ್ ಡು ಫ್ಲೆಸಿಸ್ 62, ದಿನೇಶ್ ಕಾರ್ತಿಕ್ ಭರ್ಜರಿ 83, ಮಹಿಪಾಲ್ 19, ಅಂಜು ರಾವತ್ 25 ರನ್ ಗಳಿಸುವುದರೊಂದಿಗೆ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 262 ರನ್ ಗಳಿಸಲಷ್ಟೇ ಶಕ್ತವಾಯಿತು. ಪರಿಣಾಮವಾಗಿ ಹೈದ್ರಾಬಾದ್ ಗೆ 25 ರನ್ ಗಳಿಂದ ಭರ್ಜರಿ ಗೆಲುವು ಸಾಧಿಸಿತು. ಹೈದರಾಬಾದ್ ಪರ ಆಕರ್ಷಕ ಶತಕ ಸಿಡಿಸಿದ ಟ್ರಾವಿಸ್ ಹೆಡ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



