ಕ್ರಿಕೆಟ್

IPL 2024: ಟಾಸ್ ವೇಳೆ ಹಾರ್ದಿಕ್ ಪಾಂಡ್ಯಾ ಗುರಿಯಾಗಿಸಿ ಬೂ.. ಬೂ.. ಎಂದ ಪ್ರೇಕ್ಷಕರು, ಖಡಕ್ ತಿರುಗೇಟು ಕೊಟ್ಟ ಸಂಜಯ್ ಮಂಜ್ರೇಕರ್

ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯರತ್ತ ಮತ್ತೆ ಪ್ರೇಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದು, ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದ ಟಾಸ್ ವೇಳೆ ಬೂ ಬೂ ಎಂದು ಕೂಗುವ ಮೂಲಕ ಪಾಂಡ್ಯಾರನ್ನು ಅವಮಾನಿಸುವ ಪ್ರಯತ್ನ ಮಾಡಿದ್ದಾರೆ.

IPL 2024: ಟಾಸ್ ವೇಳೆ ಹಾರ್ದಿಕ್ ಪಾಂಡ್ಯಾ ಗುರಿಯಾಗಿಸಿ ಬೂ.. ಬೂ.. ಎಂದ ಪ್ರೇಕ್ಷಕರು, ಖಡಕ್ ತಿರುಗೇಟು ಕೊಟ್ಟ ಸಂಜಯ್ ಮಂಜ್ರೇಕರ್
ಹಾರ್ದಿಕ್ ಪಾಂಡ್ಯ
Published On :

ಮುಂಬೈ: ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯರತ್ತ ಮತ್ತೆ ಪ್ರೇಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದು, ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದ ಟಾಸ್ ವೇಳೆ ಬೂ ಬೂ ಎಂದು ಕೂಗುವ ಮೂಲಕ ಪಾಂಡ್ಯಾರನ್ನು ಅವಮಾನಿಸುವ ಪ್ರಯತ್ನ ಮಾಡಿದ್ದಾರೆ.

ಹೌದು.. ಮುಂಬೈ ಇಂಡಿಯನ್ಸ್ ತಂಡದ ಫ್ರಾಂಚೈಸಿಗಳು ರೋಹಿತ್ ಶರ್ಮಾರನ್ನು ನಾಯಕತ್ವ ಸ್ಥಾನದಿಂದ ಕೆಳಗಿಳಿಸಿ ಅವರ ಸ್ಥಾನಕ್ಕೆ ಹಾರ್ದಿಕ್ ಪಾಂಡ್ಯಾರನ್ನು ತಂದಾಗಿನಿಂದಲೂ ಪಾಂಡ್ಯಾ ವಿರುದ್ಧ ಪ್ರೇಕ್ಷಕರ ಆಕ್ರೋಶ ಮುಂದುವೆರೆಯುತ್ತಲೇ ಇದೆ.

ಈ ಹಿಂದೆ ಮಾಲ್ ಗೆ ಭೇಟಿ ನೀಡಿದ್ದ ವೇಳೆ ಹಾರ್ದಿಕ್ ಪಾಂಡ್ಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಮುಂಬೈ ಇಂಡಿಯನ್ಸ್ ಅಭಿಮಾನಿಗಳು ಇದೀಗ ತಮ್ಮದೇ ಸ್ವಂತ ಕ್ರೀಡಾಂಗಣದಲ್ಲಿ ಅಂದರೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ತಂಡದ ನಾಯಕ ಹಾರ್ದಿಕ್ ಪಾಂಡ್ಯಾರನ್ನು ಅವಮಾನಿಸುವ ಮೂಲಕ ತಂಡದ ಫ್ರಾಂಚೈಸಿಗಳನ್ನು ಮುಜುಗರಕ್ಕೀಡು ಮಾಡಿದ್ದಾರೆ.

ರಾಜಸ್ಥಾನ ತಂಡದ ವಿರುದ್ಧದ ಪಂದ್ಯದಲ್ಲಿ ಟಾಸ್ ವೇಳೆ ನಿರೂಪಕ ಸಂಜಯ್ ಮಂಜ್ರೇಕರ್ ಟಾಸ್ ಕುರಿತ ವಿವರಣೆ ನೀಡುತ್ತಿದ್ದರು. ಈ ವೇಳೆ ಹಾರ್ದಿಕ್ ಟಾಸ್ ಕುರಿತು ಮಾತನಾಡುವಾಗ ಪ್ರೇಕ್ಷಕರು ಬೂ..ಬೂ ಎಂದು ಕೂಗುವ ಮೂಲಕ ಅಪಮಾನ ಮಾಡಿದ್ದಾರೆ.

ಪ್ರೇಕ್ಷಕರ ನಡೆಗೆ ಮಂಜ್ರೇಕರ್ ಕಿಡಿ

ಇನ್ನು ಪ್ರೇಕ್ಷಕರ ಈ ನಡೆಯನ್ನು ಲೈವ್ ನಲ್ಲಿಯೇ ನಿರೂಪಕ ಸಂಜಯ್ ಮಂಜ್ರೇಕರ್ ಕಿಡಿಕಾರಿದರು. ದಯವಿಟ್ಟು ಸೂಕ್ತರೀತಿಯಲ್ಲಿ ವರ್ತಿಸಿ.. ಆಟಗಾರರಿಗೆ ಗೌರವ ನೀಡಿ ಎಂಬರ್ಥದಲ್ಲಿ 'ಬಿಹೇವ್'..(behave) ಎಂದು ಕಿಡಿಕಾರಿದರು.

ಮೊಟೆರಾದಲ್ಲೂ ಹಾರ್ದಿಕ್ ಗೆ ಅಪಮಾನ

ಇನ್ನು ಈ ಹಿಂದೆ ಅಹಮದಾಬಾದಿನ ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲೂ ಹಾರ್ದಿಕ್ ಇಂತಹುದೇ ಅಪಮಾನ ಎದುರಿಸಿದ್ದರು. ಕ್ರೀಡಾಂಗಣದಲ್ಲಿ ಸೇರಿದ್ದ ಸುಮಾರು ಒಂದು ಲಕ್ಷ ಪ್ರೇಕ್ಷಕರ ಗ್ಯಾಲರಿಗಳಿಂದ ಹಾರ್ದಿಕ್‌ ಅವರನ್ನು ಬೂ..ಬೂ.. ಎಂದು ಗೇಲಿ ಮಾಡಿದರು. ಈ ಪಂದ್ಯದಲ್ಲಿ ಮುಂಬೈ ತಂಡವು ಗುಜರಾತ್ ಟೈಟನ್ಸ್‌ ವಿರುದ್ಧ ಸೋತಿತು. ಎರಡೂ ತಂಡಗಳ ಅಭಿಮಾನಿಗಳಿಂದಲೂ ಹಾರ್ದಿಕ್ ಟೀಕೆಗೆ ಗುರಿಯಾಗಿದ್ದರು. ತಂಡ ಸೋತಿದ್ದಕ್ಕೆ ಹಾರ್ದಿಕ್ ಮತ್ತು ತಿಲಕ್ ವರ್ಮಾ ಅವರ ಆಟದ ವೈಖರಿಯೇ ಕಾರಣ ಎಂದೂ ಅಭಿಮಾನಿಗಳು ಟೀಕಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.