2ನೇ ಟಿ20: ಕಿವೀಸ್ ವಿರುದ್ಧ ದಾಖಲೆ ಬರೆದ ಭಾರತದ ಯಜುವೇಂದ್ರ ಚಹಲ್
ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಮಾರಕ ಬೌಲಿಂಗ್ ಮೂಲಕ ವಿಕೆಟ್ ಪಡೆದ ಭಾರತ ಸ್ಪಿನ್ ಮಾಂತ್ರಿಕ ಯಜುವೇಂದ್ರ ಚಹಲ್ ದಾಖಲೆ ಬರೆದಿದ್ದಾರೆ.

ಲಖನೌ: ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಮಾರಕ ಬೌಲಿಂಗ್ ಮೂಲಕ ವಿಕೆಟ್ ಪಡೆದ ಭಾರತ ಸ್ಪಿನ್ ಮಾಂತ್ರಿಕ ಯಜುವೇಂದ್ರ ಚಹಲ್ ದಾಖಲೆ ಬರೆದಿದ್ದಾರೆ.
ಹೌದು.. ಲಖನೌನ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನ ಕ್ರಿಕೆಟ್ ಮೈದಾನದಲ್ಲಿ 2ನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ಆರಂಭಿಕ ಆಟಗಾರ ಫಿನ್ ಅಲೆನ್ ರನ್ನು ಕ್ಲೀನ್ ಬೋಲ್ಡ್ ಮಾಡಿದ ಚಹಲ್ ತಮ್ಮ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ವೃತ್ತಿ ಜೀವನದ 91ನೇ ವಿಕೆಟ್ ಪಡೆದರು. ಆ ಮೂಲಕ ಭಾರತದ ಪರ ಚುಟುಕು ಕ್ರಿಕೆಟ್ ನಲ್ಲಿ ಅತೀ ಹೆಚ್ಚು ವಿಕೆಟ್ ಗಳಿಸಿದ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಈ ಹಿಂದೆ ಈ ಪಟ್ಟಿಯಲ್ಲಿ ಚಹಲ್ ಭುವನೇಶ್ವರ್ ಕುಮಾರ್ ರೊಂದಿಗೆ ಜಂಟಿ ಅಗ್ರ ಸ್ಥಾನದಲ್ಲಿದ್ದರು. ಆದರೆ ಇದೀಗ ಭುವಿಯನ್ನು 2ನೇ ಸ್ಥಾನಕ್ಕೆ ತಳ್ಳಿ ಅಗ್ರ ಸ್ಥಾನಕ್ಕೇರಿದ್ದಾರೆ. ಭುವಿ ಟಿ20ಯಲ್ಲಿ 90 ವಿಕೆಟ್ ಪಡೆದಿದ್ದು, 72 ವಿಕೆಟ್ ಪಡೆದಿರುವ ಆರ್ ಅಶ್ವಿನ್ ಮೂರನೇ ಸ್ಥಾನ, 70 ವಿಕೆಟ್ ಪಡೆದಿರುವ ಜಸ್ ಪ್ರೀತ್ ಬುಮ್ರಾ 4ನೇ ಸ್ಥಾನದಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


