ಏಷ್ಯಾ ಕಪ್ 2023: ಶ್ರೀಲಂಕಾ ವಿರುದ್ಧ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ; ಶ್ರೇಯಸ್ ಅನುಪಸ್ಥಿತಿ!
ಏಷ್ಯಾಕಪ್ 2023ರ ಸೂಪರ್ ನಾಲ್ಕು ಹಂತದ ಪಂದ್ಯಗಳು ನಡೆಯುತ್ತಿದ್ದು ನಿನ್ನೆ ಪಾಕಿಸ್ತಾನ ವಿರುದ್ಧ ಭಾರತ 228 ರನ್ ಗಳ ಭರ್ಜರಿ ಗೆಲುವು ಸಾಧಿಸಿದ್ದು ಇಂದು ಲಂಕಾ ವಿರುದ್ಧ ಪಂದ್ಯವನ್ನಾಡುತ್ತಿದೆ.

ಕೊಲಂಬೊ(ಶ್ರೀಲಂಕಾ): ಏಷ್ಯಾಕಪ್ 2023ರ ಸೂಪರ್ ನಾಲ್ಕು ಹಂತದ ಪಂದ್ಯಗಳು ನಡೆಯುತ್ತಿದ್ದು ನಿನ್ನೆ ಪಾಕಿಸ್ತಾನ ವಿರುದ್ಧ ಭಾರತ 228 ರನ್ ಗಳ ಭರ್ಜರಿ ಗೆಲುವು ಸಾಧಿಸಿದ್ದು ಇಂದು ಲಂಕಾ ವಿರುದ್ಧ ಪಂದ್ಯವನ್ನಾಡುತ್ತಿದೆ.
ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಭಾರತ ಇಂದು ಲಂಕಾ ವಿರುದ್ಧ ಸೆಣೆಸುತ್ತಿದೆ. ಇದೀಗ ಪಂದ್ಯದ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಇನ್ನು ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಿನ ಇಂದಿನ ಪಂದ್ಯದಿಂದ ಶ್ರೇಯಸ್ ಅಯ್ಯರ್ ಅವರನ್ನು ಹೊರಗಿಟ್ಟಿದೆ. ಶ್ರೇಯಸ್ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಈ ನಿರ್ಧಾರ ಕೈಗೊಂಡಿದೆ.
ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಬಿಸಿಸಿಐ, "ಶ್ರೇಯಸ್ ಅಯ್ಯರ್ ಉತ್ತಮವಾಗಿದ್ದಾರೆ. ಆದರೆ ಬೆನ್ನು ನೋವಿನಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಬಿಸಿಸಿಐ ವೈದ್ಯಕೀಯ ತಂಡವು ಅವರಿಗೆ ವಿಶ್ರಾಂತಿಗೆ ಸಲಹೆ ನೀಡಿದೆ. ಹೀಗಾಗಿ ತಂಡದೊಂದಿಗೆ ಇಂದು ಕ್ರೀಡಾಂಗಣಕ್ಕೆ ಅವರು ಪ್ರಯಾಣಿಸಿಲ್ಲ ಎಂದು ಹೇಳಿದೆ.
ಭಾನುವಾರ ನಡೆದ ಏಷ್ಯಾ ಕಪ್ ಸೂಪರ್ ನಾಲ್ಕರಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯ ಆರಂಭಕ್ಕೂ ಕೆಲವೇ ಕ್ಷಣಗಳ ಮುನ್ನ ಅಯ್ಯರ್ ಬೆನ್ನು ಸೆಳೆತದಿಂದ ಬಳಲುತ್ತಿದ್ದರು. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಾಸ್ ಸಮಯದಲ್ಲಿ ಅವರ ಅನುಪಸ್ಥಿತಿಯನ್ನು ದೃಢಪಡಿಸಿದರು. "ಒಂದು ಬಲವಂತದ ಬದಲಾವಣೆ, ಶ್ರೇಯಸ್ ಅಯ್ಯರ್ ಅವರಿಗೆ ಬೆನ್ನು ಸೆಳೆತ ಉಂಟಾಗಿದೆ, ಆದ್ದರಿಂದ KL ರಾಹುಲ್ ಅವರಿಗೆ ಅವಕಾಶ ನೀಡಲಾಗಿದೆ ಎಂದು ಹೇಳಿದ್ದರು.
ಅಯ್ಯರ್ ಅನುಪಸ್ಥಿತಿಯಲ್ಲಿ ಆಡುವ ಹನ್ನೊಂದರ ಬಳಕದಲ್ಲಿ ಸ್ಥಾನ ಪಡೆದ ಕೆಎಲ್ ರಾಹುಲ್ ಅದ್ಭುತ ಶತಕದ ಮೂಲಕ ಕಮ್ ಬ್ಯಾಕ್ ಮಾಡಿದರು. ಸೋಮವಾರ ಕೊಲಂಬೋದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 228 ರನ್‌ಗಳ ಜಯ ಸಾಧಿಸಲು ಭಾರತಕ್ಕೆ ನೆರವಾಯಿತು. ಪಂದ್ಯದಲ್ಲಿ, ವಿರಾಟ್ 94 ಎಸೆತಗಳಲ್ಲಿ ಅಜೇಯ 122 ರನ್ ಗಳಿಸಿದರೆ, ಸುದೀರ್ಘ ವಿರಾಮದ ನಂತರ ಪುನರಾಗಮನ ಮಾಡಿದ ಕೆಎಲ್ ರಾಹುಲ್ 106 ರಲ್ಲಿ ಅಜೇಯ 111 ರನ್ ಗಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


