ಐಸಿಸಿ ಏಕದಿನ ವಿಶ್ವಕಪ್ 2023: ಆಫ್ಘಾನಿಸ್ತಾನ ವಿರುದ್ಧ ನ್ಯೂಜಿಲೆಂಡ್ ಗೆ 149 ರನ್ ಭರ್ಜರಿ ಜಯ
ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2023 ಟೂರ್ನಿಯ ಇಂದಿನ ಪಂದ್ಯದಲ್ಲಿ ಪ್ರಬಲ ನ್ಯೂಜಿಲೆಂಡ್ ತಂಡ ಆಫ್ಘಾನಿಸ್ತಾನವನ್ನು 149 ರನ್ ಗಳ ಅಂತರದಲ್ಲಿ ಹೀನಾಯವಾಗಿ ಮಣಿಸಿದೆ.

ಚೆನ್ನೈ: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2023 ಟೂರ್ನಿಯ ಇಂದಿನ ಪಂದ್ಯದಲ್ಲಿ ಪ್ರಬಲ ನ್ಯೂಜಿಲೆಂಡ್ ತಂಡ ಆಫ್ಘಾನಿಸ್ತಾನವನ್ನು 149 ರನ್ ಗಳ ಅಂತರದಲ್ಲಿ ಹೀನಾಯವಾಗಿ ಮಣಿಸಿದೆ.
ಚೆನ್ನೈನ ಎಂಎ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ಇಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ನಿಗಧಿತ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 288 ರನ್ ಕಲೆಹಾಕಿತು. ನ್ಯೂಜಿಲೆಂಡ್ ಪರ ವಿಲ್ ಯಂಗ್ (54 ರನ್), ಟಾಮ್ ಲಾಥಮ್ (68 ರನ್) ಮತ್ತು ಗ್ಲೆನ್ ಫಿಲಿಪ್ಸ್ (71 ರನ್)ರ ಅರ್ಧಶತಕಗಳ ನೆರವಿನಿಂದ ಆಫ್ಘಾನಿಸ್ತಾನಕ್ಕೆ 289ರನ್ ಗಳ ಸವಾಲಿನ ಗುರಿ ನೀಡಿತು.
ಈ ಗುರಿಯನ್ನು ಬೆನ್ನು ಹತ್ತಿದ ಆಫ್ಘಾನಿಸ್ತಾನ ತಂಡ ಮಿಚೆಲ್ ಸ್ಯಾಂಥ್ನರ್, ಲಾಕಿ ಫರ್ಗೂಸನ್ (ತಲಾ 3 ವಿಕೆಟ್) ಮತ್ತು ಟ್ರೆಂಟ್ ಬೌಲ್ಟ್ (2 ವಿಕೆಟ್) ಮಾರಕ ಬೌಲಿಂಗ್ ಗೆ ರನ್ ಗಳಿಸಲು ಪರದಾಡಿತು. ಆರಂಭದಿಂದಲೂ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಆಫ್ಘಾನಿಸ್ತಾನ 34.4 ಓವರ್ ನಲ್ಲಿ ಕೇವಲ 139 ರನ್ ಗಳಿಗೆ ತನ್ನಲ್ಲಾ ವಿಕೆಟ್ ಕಳೆದುಕೊಂಡು 149 ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


