ಇಸ್ಲಾಂ ಸೇರಲು ಮನಸ್ಸು ಮಾಡಿದ್ದರು ಹರ್ಭಜನ್ ಸಿಂಗ್: ಇಂಜಮಾಮ್ ಹೇಳಿಕೆಗೆ ಭಜ್ಜಿ ತೀವ್ರ ಕಿಡಿ
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಇಸ್ಲಾಂಗೆ ಮತಾಂತರವಾಗುವ ಹತ್ತಿರವಾಗುತ್ತಿದ್ದರು ಎಂಬ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಹೇಳಿಕೆಗೆ ಭಜ್ಜಿ ತೀವ್ರವಾಗಿ ಕಿಡಿಕಾರಿದ್ದಾರೆ.

ಮುಂಬೈ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಇಸ್ಲಾಂಗೆ ಮತಾಂತರವಾಗುವ ಹತ್ತಿರವಾಗುತ್ತಿದ್ದರು ಎಂಬ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಹೇಳಿಕೆಗೆ ಭಜ್ಜಿ ತೀವ್ರವಾಗಿ ಕಿಡಿಕಾರಿದ್ದಾರೆ.
ಸಾಮಾಜಿಕ ಜಾಲತಾಣವಾದ ಎಕ್ಸ್(ಟ್ವಿಟರ್)ನಲ್ಲಿ ಕಟು ಶಬ್ದಗಳಲ್ಲಿ ಪಾಕಿಸ್ತಾನದ ಮಾಜಿ ಆಯ್ಕೆ ಸಮಿತಿ ಮುಖ್ಯಸ್ಥ ಇಂಜಿಯನ್ನು ಹರ್ಭಜನ್ ಸಿಂಗ್ ಲೇವಡಿ ಮಾಡಿದ್ದಾರೆ.
ಇಂಜಮಾಮ್ ಉಲ್ ಹಕ್ ಅವರು ಮಾತನಾಡಿರುವ ವಿಡಿಯೋಗೆ ಎಕ್ಸ್ ಮೂಲಕವೇ ಪ್ರತಿಕ್ರಿಯೆ ನೀಡಿರುವ ಹರ್ಭಜನ್ ಸಿಂಗ್, "ಇವರು ಯಾವ ನಶೆಯಲ್ಲಿ ಮಾತನಾಡುತ್ತಿದ್ದಾರೆ ಅರ್ಥವಾಗುತ್ತಿಲ್ಲ. ನಾನೊಬ್ಬ ಹೆಮ್ಮೆಯ ಭಾರತೀಯ ಹಾಗೂ ಹೆಮ್ಮೆಯ ಸಿಖ್ ಆಗಿದ್ದೇನೆ. ಈ ಕೆಲಸವಿಲ್ಲದವರು (ಅಸಂಬದ್ಧ ಜನ) ಏನು ಬೇಕಾದರೂ ಮಾತನಾಡುತ್ತಾರೆ" ಎಂದು ಕಿಡಿಕಾರಿದ್ದಾರೆ.
ವಿಡಿಯೋದಲ್ಲಿ ಇಂಜಮಾಮ್ ಉಲ್ ಹಕ್, ಪಾಕಿಸ್ತಾನದ ಪ್ರಖ್ಯಾತ ಇಸ್ಲಾಮಿಕ್ ಮೌಲ್ವಿಯಾದ ಮೌಲಾನ ತಾರಿಖ್ ಜಮೀಲ್ ಅವರ ಬಗ್ಗೆ ಮಾತನಾಡುತ್ತಾ, "ನಾವು ಕ್ರಿಕೆಟ್ ಆಡುವ ಸಂದರ್ಭದಲ್ಲಿ ಮೌಲಾನ ತಾರಿಖ್ ಜಮೀಲ್ ನಮ್ಮ ಜತೆ ಮಾತನಾಡುತ್ತಿದ್ದರು. ಸಂಜೆ ವೇಳೆ ಆಟಗಾರರಿಗೆ ಇಸ್ಲಾಮಿನ ಪ್ರವಚನ ನೀಡುತ್ತಿದ್ದರು. ನಾವು ಆ ಸಂದರ್ಭದಲ್ಲಿ ಇರ್ಫಾನ್ ಪಠಾಣ್, ಮೊಹಮ್ಮದ್ ಕೈಫ್ ಹಾಗೂ ಜಹೀರ್ ಖಾನ್ ಅವರಿಗೆ ನಮ್ಮ ಜೊತೆ ನಮಾಜ್ ಮಾಡಲು ಆಹ್ವಾನಿಸುತ್ತಿದ್ದೆವು. ಈ ಸಂದರ್ಭದಲ್ಲಿ ಹರ್ಭಜನ್ ಸಿಂಗ್ ಸೇರಿದಂತೆ ಭಾರತದ ಇತರೇ ಆಟಗಾರರು ಬರುತ್ತಿದ್ದರು. ಅವರು ನಮಾಜ್ ಮಾಡುತ್ತಿರಲಿಲ್ಲ, ಆದರೆ, ತಾರಿಖ್ ಜಮೀಲ್ ಅವರ ಪ್ರವಚನಗಳನ್ನು ಕೇಳುತ್ತಿದ್ದರು.
ಈ ಸಂದರ್ಭದಲ್ಲಿ ಹರ್ಭಜನ್ ಸಿಂಗ್ ನನ್ನ ಬಳಿ ಬಂದು ನಾನೂ ಕೂಡಾ ಮೌಲಾನ ಅವರ ಮಾತುಗಳ ಕೇಳಬೇಕು ಅನಿಸುತ್ತಿದೆ ಎಂದು ಹೇಳಿದ್ದರು ಎಂದು ಇಂಜಮಾಮ್ ಉಲ್ ಹಕ್ ಹೇಳಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


