ಕ್ರಿಕೆಟ್

ನೋವಿನಿಂದ ಒದ್ದಾಡುತ್ತಿದ್ದ ಮ್ಯಾಕ್ಸ್‌ವೆಲ್ ಮೇಲೆ ಕಾಂತಾರದ ಗುಳಿಗ ದೈವ?: ವಿಡಿಯೋ ವೈರಲ್

ಇತ್ತೀಚೆಗೆ ನಡೆದ ಅಫ್ಘಾನಿಸ್ತಾನದೊಂದಿಗಿನ ಪಂದ್ಯವೇ ಆಸ್ಟ್ರೇಲಿಯಾ ತಂಡದ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಇಡೀ ವಿಶ್ವವೇ ತಿರುಗಿ ನೋಡುವಂತಹ ಪ್ರದರ್ಶನ ನೀಡಿದ್ದಾರೆ. ಕ್ರಿಕೆಟ್ ದಿಗ್ಗಜರೇ ಮ್ಯಾಕ್ಸ್‌ವೆಲ್ ಆಟಕ್ಕೆ ಬೆಚ್ಚಿಬಿದ್ದಿದ್ದಾರೆ.

ನೋವಿನಿಂದ ಒದ್ದಾಡುತ್ತಿದ್ದ ಮ್ಯಾಕ್ಸ್‌ವೆಲ್ ಮೇಲೆ ಕಾಂತಾರದ ಗುಳಿಗ ದೈವ?: ವಿಡಿಯೋ ವೈರಲ್
ಟ್ರೆಂಡ್ ಆಗುತ್ತಿರುವ ಫೋಟೋ
Published On :

ಇತ್ತೀಚೆಗೆ ನಡೆದ ಅಫ್ಘಾನಿಸ್ತಾನದೊಂದಿಗಿನ ಪಂದ್ಯವೇ ಆಸ್ಟ್ರೇಲಿಯಾ ತಂಡದ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಇಡೀ ವಿಶ್ವವೇ ತಿರುಗಿ ನೋಡುವಂತಹ ಪ್ರದರ್ಶನ ನೀಡಿದ್ದಾರೆ. ಕ್ರಿಕೆಟ್ ದಿಗ್ಗಜರೇ ಮ್ಯಾಕ್ಸ್‌ವೆಲ್ ಆಟಕ್ಕೆ ಬೆಚ್ಚಿಬಿದ್ದಿದ್ದಾರೆ.

ರೆ, ಆಸ್ಟ್ರೇಲಿಯಾ ಸಂಕಷ್ಟಕ್ಕೆ ಸಿಕ್ಕಿಕೊಂಡಾಗ ಮ್ಯಾಕ್ಸ್‌ವೆಲ್ ಫೀಲ್ಡ್‌ಗೆ ಇಳಿದಿದ್ದರು. ಒಂದು ಹಂತದಲ್ಲಿ ಚೆನ್ನಾಗಿ ಆಡುತ್ತಿರುವಾಗಲೇ ಮ್ಯಾಕ್ಸ್‌ವೆಲ್‌ಗೆ ಸ್ನಾಯು ಸೆಳೆತ ಉಂಟಾಗಿತ್ತು. ಮೈದಾನದಲ್ಲಿ ಬಿದ್ದು ಒದ್ದಾಡುತ್ತಿದ್ದರು.

ಇಲ್ಲಿಗೆ ಆಸ್ಟ್ರೇಲಿಯಾದ ಆಟ ಮುಗಿದೇ ಹೋಯ್ತು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ, ಕೆಲವು ಸಮಯದ ಬಳಿಕ ಮ್ಯಾಕ್ಸ್‌ವೆಲ್ ಎದ್ದು ಕೂತಿದ್ದರು. ಆ ಬಳಿಕ ಮ್ಯಾಕ್ಸ್‌ವೆಲ್‌ಗೆ ಅದೆಂಥಾ ಶಕ್ತಿ ಬಂತೋ ಗೊತ್ತಿಲ್ಲ. ನಿಂತಲ್ಲೇ ಬ್ಯಾಟ್ ಬೀಸುತ್ತಿದ್ದರು. ಬಾಲ್ ಬೌಂಡರಿ ಸೇರುತ್ತಿದ್ದವು.

ಸಂಕಷ್ಟದ ಸಂದರ್ಭದಲ್ಲಿಯೂ ಡಬಲ್ ಸೆಂಚುರಿ ಬಾರಿಸಿ ಮ್ಯಾಕ್ಸ್‌ವೆಲ್ ತಂಡವನ್ನು ಸೆಮಿಫೈನಲ್ ಹಂತಕ್ಕೆ ತಲುಪಿಸಿದರು. ಇದು ಕ್ರಿಕೆಟ್ ಪ್ರೇಮಿಗಳಿಗೆ ರೋಚಕ ಅಂತ ಅನಿಸಿತ್ತು. ಆದ್ರೀಗ ಸಿನಿಮಾ ಪ್ರೇಮಿಗಳಿಗೂ ಮ್ಯಾಕ್ಸ್‌ವೆಲ್ ಆಟ ರೋಚಕ ಅನಿಸುವುದಕ್ಕೆ ಶುರುವಾಗಿದೆ.

ಕಾಂತಾರ ಸಿನಿಮಾ ಬಿಡುಗಡೆಯಾದ ಮೇಲೆ ಕರಾವಳಿ ಸಂಸ್ಕೃತಿ ಇಡೀ ಜಗತ್ತಿಗೇ ತಲುಪಿದೆ. ಕಾಂತಾರದಲ್ಲಿ ತೋರಿಸಲಾದ ಗುಳಿಗ ದೈವ ಆವೇಷ-ಅಬ್ಬರ ಹೊರ ಜಗತ್ತಿನಲ್ಲಿ ಹೆಚ್ಚು ಪ್ರಚಲಿತವಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.