ಕೊಹ್ಲಿ-ಗಂಭೀರ್ ಆನ್ ಫೀಲ್ಡ್ ಜಗಳ... ಇಷ್ಟಕ್ಕೂ ಕಾರಣವೇನು? ಸಂಘರ್ಷದ ಮೂಲ ಪುರುಷ ನವೀನ್ ಉಲ್ ಹಕ್' ಹೇಳಿದ್ದೇನು?
ಐಪಿಎಲ್ ಟೂರ್ನಿಯ ನಿನ್ನೆ ನಡೆದ ಆರ್ ಸಿಬಿ vs ಲಕ್ನೋ ನಡುವಿನ ಪಂದ್ಯ ಕ್ರಿಕೆಟ್ ಹೊರತಾಗಿ ಸಂಘರ್ಷದ ಕಾರಣದಿಂದಾಗಿ ಸಾಕಷ್ಟು ಸುದ್ದಿಗೆ ಗ್ರಾಸವಾಗಿದ್ದು, ಪ್ರಮುಖವಾಗದಿ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವಿನ ಜಗಳ ಕ್ರಿಕೆಟ್ ಜಗತ್ತನ್ನೇ ಅಚ್ಚರಿಗೊಳಿಸಿದೆ.

ಲಖನೌ: ಐಪಿಎಲ್ ಟೂರ್ನಿಯ ನಿನ್ನೆ ನಡೆದ ಆರ್ ಸಿಬಿ vs ಲಕ್ನೋ ನಡುವಿನ ಪಂದ್ಯ ಕ್ರಿಕೆಟ್ ಹೊರತಾಗಿ ಸಂಘರ್ಷದ ಕಾರಣದಿಂದಾಗಿ ಸಾಕಷ್ಟು ಸುದ್ದಿಗೆ ಗ್ರಾಸವಾಗಿದ್ದು, ಪ್ರಮುಖವಾಗದಿ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವಿನ ಜಗಳ ಕ್ರಿಕೆಟ್ ಜಗತ್ತನ್ನೇ ಅಚ್ಚರಿಗೊಳಿಸಿದೆ.
ಹೌದು.. ಲಖನೌ ನ ಏಕನಾ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹಂಗಾಮಿ ನಾಯಕ ವಿರಾಟ್ ಕೊಹ್ಲಿ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡ ಮೆಂಟರ್ ಗೌತಮ್ ಗಂಭೀರ್ ನಡುವೆ ವಾಗ್ವಾದ ನಡೆದಿದೆ. ಈ ಪಂದ್ಯದಲ್ಲಿ ಆರ್ಸಿಬಿ 18 ರನ್ಗಳ ಜಯ ದಾಖಲಿಸಿತು. ಆ ಬಳಿಕ ನಡೆದ ಆಟಗಾರರ ನಡುವಿನ ಹಸ್ತಲಾಘವದ ವೇಳೆ ಕೊಹ್ಲಿ ಹಾಗೂ ಗಂಭೀರ್ ನಡುವೆ ಮಾತಿನ ಚಕಮಕಿ ನಡೆದಿದೆ.
ಪಂದ್ಯದ ಬಳಿಕ ಇಬ್ಬರು ಆಟಗಾರರು ಪರಸ್ಪರ ಬೈದಾಡಿಕೊಂಡಿದ್ದು, ಅಷ್ಟೇ ಅಲ್ಲದೆ ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಉಭಯ ತಂಡಗಳ ಆಟಗಾರರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಸಿಗೊಳಿಸಿದ್ದಾರೆ. ಆದರೆ ಇವರ ಜಗಳದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ವೈರಲ್ ಆಗಿದೆ.
ಇಷ್ಟಕ್ಕೂ ಮಾತಿನ ಚಕಮಕಿಗೆ ಕಾರಣವೇನು?
ಆರ್ ಸಿಬಿ ನೀಡಿದ್ದ ಸಾಧಾರಣ ಮೊತ್ತವನ್ನು ಬೆನ್ನಟ್ಟಲು ಲಕ್ನೋ ತಂಡ ಅಕ್ಷರಶಃ ತಿಣುಕಾಡಿತ್ತು. ಒಂದರೆ ಹಿಂದೆ ಒಂದರಂತೆ ವಿಕೆಟ್ ಗಳು ಉದುರುತ್ತಿದ್ದವು. ಈ ವೇಳೆ 9 ವಿಕೆಟ್ ಗೆ ಜೊತೆಯಾದ ಲಕ್ನೋ ತಂಡದ ನವೀನ್ ಉಲ್ ಹಕ್ ಹಾಗೂ ಅಮಿತ್ ಮಿಶ್ರಾ ರಕ್ಷಣಾತ್ಮಕ ಆಟದ ಮೊರೆ ಹೋಗಿದ್ದರು. ಈ ವೇಳೆ ಆರ್ ಸಿಬಿಯ ಮಹಮದ್ ಸಿರಾಜ್ ಬೌಲಿಂಗ್ ನಲ್ಲಿ ಮತ್ತೊಂದು ಬದಿಯಲ್ಲಿದ್ದ ನವೀನ್ ಉಲ್ ಹಕ್ ರನ್ ಓಡುವ ಪ್ರಯತ್ನ ಮಾಡಿದರು. ವೇಳೆ ಸಿರಾದ್ ನವೀನ್ ಉಲ್ ಹಕ್ ಕ್ರೀಸ್ ನಲ್ಲಿದ್ದರೂ ಕೂಡ ಚೆಂಡನ್ನು ವಿಕೆಟ್ ಮೇಲೆ ಎಸೆದು ಬೇಲ್ಸ್ ಏಗರಿಸಿದ್ದರು. ಇದರಿಂದ ನವೀನ್ ಉಲ್ ಹಕ್ ಸಿರಾಜ್ ರೊಂದಿಗೆ ಅಸಮಾಧಾನ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಆರ್ ಸಿಬಿಯ ವಿರಾಟ್ ಕೊಹ್ಲಿ ಮಧ್ಯ ಪ್ರವೇಶಿಸಿದಾಗ ನವೀನ್ ಉಲ್ ಹಕ್ ಅವರನ್ನು ಗುರಾಯಿಸಿದರು. ಈ ವೇಳೆ ವಿರಾಟ್ ಕೊಹ್ಲಿ ಹಾಗೂ ನವೀನ್ ಉಲ್ ಹಕ್ ನಡುವೆ ಮಾತಿನ ಚಕಮಕಿ ನಡೆದಿತ್ತು.
Here is the whole fight scenario
.#LSGvsRCB #viratkholi #gautamgambhir pic.twitter.com/Km3PAdFXIu
—
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


