ಕ್ರಿಕೆಟ್

ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್, ಮೊದಲ ಇನ್ನಿಂಗ್ಸ್: 421 ರನ್ ಗೆ ಭಾರತ ಡಿಕ್ಲೇರ್, 271 ರನ್ ಮುನ್ನಡೆ

ಡೊಮಿನಿಕಾದಲ್ಲಿ ಶುಕ್ರವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ನ ಮೂರನೇ ದಿನದಾಟದ ಅಂತ್ಯಕ್ಕೆ ಭಾರತ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ ಐದು ವಿಕೆಟ್‌ ನಷ್ಟಕ್ಕೆ 421 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ಭಾರತ ತಂಡ ಒಟ್ಟಾರೆ 271 ರನ್‌ಗಳ ಮುನ್ನಡೆ ಸಾಧಿಸಿದೆ.

ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್, ಮೊದಲ ಇನ್ನಿಂಗ್ಸ್: 421 ರನ್ ಗೆ ಭಾರತ ಡಿಕ್ಲೇರ್, 271 ರನ್ ಮುನ್ನಡೆ
ವಿರಾಟ್ ಕೊಹ್ಲಿ
Published On :

ಡೊಮಿನಿಕಾ: ಡೊಮಿನಿಕಾದಲ್ಲಿ ಶುಕ್ರವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ನ ಮೂರನೇ ದಿನದಾಟದ ಅಂತ್ಯಕ್ಕೆ ಭಾರತ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ ಐದು ವಿಕೆಟ್‌ ನಷ್ಟಕ್ಕೆ 421 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ಭಾರತ ತಂಡ ಒಟ್ಟಾರೆ 271 ರನ್‌ಗಳ ಮುನ್ನಡೆ ಸಾಧಿಸಿದೆ. 

ನಿನ್ನೆ 2 ವಿಕೆಟ್ ನಷ್ಟಕ್ಕೆ 312 ರನ್ ಗಳಿಸಿದ ಭಾರತ ಇಂದು ಆಟವನ್ನು ಪುನರ್ ಆರಂಭಿಸಿದಾಗ ಯಶಸ್ವಿ ಜೈಸಾಲ್ವ್ 387 ಬಾಲ್ ಗಳಲ್ಲಿ 171 ರನ್ ಗಳಿಸಿ ಔಟಾದರೆ, ಕೊಹ್ಲಿ 76 ರನ್ ಗಳಿಗೆ ಫೆವಿಲಿಯನ್ ಹಾದಿ ಹಿಡಿದರು. ಪಂದ್ಯ ಡಿಕ್ಲೇರ್ ಆಗುವ ವೇಳೆ ರವೀಂದ್ರ ಜಡೇಜಾ ಹಾಗೂ ಅಶ್ವಿನ್ ಕ್ರೀಸ್ ನಲ್ಲಿದ್ದರು. 

ಯಶಸ್ವಿ ಜೈಸ್ವಾಲ್ ಚೊಚ್ಚಲ ಪಂದ್ಯದಲ್ಲಿ 150 ರನ್ ಗಳಿಸಿದ ಮೂರನೇ ಭಾರತೀಯ ಎನಿಸಿಕೊಂಡರು. ಆದರೆ ವಿರಾಟ್ ಕೊಹ್ಲಿ ಅರ್ಧ ಶತಕಕ್ಕಾಗಿ ಶ್ರಮಿಸಬೇಕಾಯಿತು. ಗುರುವಾರ ಚೊಚ್ಚಲ ಪಂದ್ಯದಲ್ಲಿ ಶತಕ ಬಾರಿಸಿದ ಜೈಸ್ವಾಲ್ ದ್ವಿಶತಕ ಗಳಿಸುವ  ನಿರೀಕ್ಷೆಯಿತ್ತು. ಆದರೆ ಆ ನಿರೀಕ್ಷೆಯನ್ನು ಅಲ್ಜಾರಿ ಜೋಸೆಫ್‌ ಕಸಿದುಕೊಂಡರು.ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್ ನಲ್ಲಿ 150 ರನ್ ಗಳಿಗೆ ಆಲೌಟ್ ಆಗಿತ್ತು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.