ಐಸಿಸಿಯ ವರ್ಷದ ತಂಡ-2022 ರಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಪಂತ್
ಐಸಿಸಿ ಟೆಸ್ಟ್ ವಿಭಾಗದ ವರ್ಷದ ತಂಡ-2022 ನ್ನು ಘೋಷಿಸಿದ್ದು, ಡಿಸೆಂಬರ್ ನಲ್ಲಿ ಕಾರು ಅಪಘಾತದಲ್ಲಿ ಗಾಯಗೊಂಡ ವಿಕೆಟ್ ಕೀಪರ್- ರಿಷಭ್ ಪಂತ್ ಐಸಿಸಿ ಪುರುಷರ ಟೆಸ್ಟ್-2022 ರ ತಂಡದಲ್ಲಿ ಹೆಸರು ಹೊಂದಿರುವ ಏಕೈಕ ಭಾರತೀಯರಾಗಿದ್ದಾರೆ.

ನವದೆಹಲಿ: ಐಸಿಸಿ ಟೆಸ್ಟ್ ವಿಭಾಗದ ವರ್ಷದ ತಂಡ-2022 ನ್ನು ಘೋಷಿಸಿದ್ದು, ಡಿಸೆಂಬರ್ ನಲ್ಲಿ ಕಾರು ಅಪಘಾತದಲ್ಲಿ ಗಾಯಗೊಂಡ ವಿಕೆಟ್ ಕೀಪರ್- ರಿಷಭ್ ಪಂತ್ ಐಸಿಸಿ ಪುರುಷರ ಟೆಸ್ಟ್-2022 ರ ತಂಡದಲ್ಲಿ ಹೆಸರು ಹೊಂದಿರುವ ಏಕೈಕ ಭಾರತೀಯರಾಗಿದ್ದಾರೆ.
ಕಳೆದ ವರ್ಷ ರಿಷಭ್ ಪಂತ್ ಅತ್ಯುತ್ತಮವಾದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು 12 ಇನ್ನಿಂಗ್ಸ್ ನಲ್ಲಿ 680 ರನ್ ಗಳಿಸಿದ್ದ ಪಂತ್, ಶೇ.61.81 ರಷ್ಟು ಸರಾಸರಿ ಹೊಂದಿದ್ದು, 90.90 ಸ್ಟ್ರೈಕ್ ರೇಟ್ ಹೊಂದಿದ್ದಾರೆ. 2 ಶತಕ ದಾಖಲಿಸಿದ್ದರು. 2022 ರಲ್ಲಿ ಟೆಸ್ಟ್ ಪಂದ್ಯಗಳಲ್ಲಿ ರಿಷಭ್ ಪಂತ್ 21 ಸಿಕ್ಸ್ ಗಳಿಸಿದ್ದರು. 23 ಕ್ಯಾಚ್ ಗಳನ್ನು ಹೊಂದಿದ್ದರು.
ಇದನ್ನೂ ಓದಿ: ಐಸಿಸಿ ವರ್ಷದ ಅತ್ಯುತ್ತಮ ಟಿ20 ತಂಡದಲ್ಲಿ ಭಾರತದ ಮೂವರು ಕ್ರಿಕೆಟಿಗರಿಗೆ ಸ್ಥಾನ!
ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಅವರನ್ನು ಈ ತಂಡಕ್ಕೆ ನಾಯಕರನ್ನಾಗಿ ಐಸಿಸಿ ಹೆಸರಿಸಿದೆ. ಐಸಿಸಿ ಟೆಸ್ಟ್ XI ನಲ್ಲಿ ನಾಲ್ವರು ಆಸ್ಟ್ರೇಲಿಯಾ ತಂಡದ ಕ್ರೀಡಾಪಟುಗಳಿದ್ದರೆ, ದಕ್ಷಿಣ ಆಫ್ರಿಕಾದ ದೈತ್ಯ ಕಾಗಿಸೋ ರಬಡ ಆಂಡ್ರ್ಯುಸನ್ ಸಹ ಇದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


