ಕ್ರಿಕೆಟ್

ಸಿರಾಜ್, ಗಿಲ್ ಮಿಂಚಿನ ಆಟ; ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ರೋಚಕ ಗೆಲುವು

ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶುಭ್ ಮನ್ ಗಿಲ್ ಅವರ ಭರ್ಜರಿ ದ್ವಿಶತಕ ಮತ್ತು ಮೊಹಮ್ಮದ್ ಸಿರಾಜ್ ಅವರ ಅಮೋಘ ನಾಲ್ಕು ವಿಕೆಟ್ ಗಳ ನೆರವಿನಿಂದ ಭಾರತ 12 ರನ್ ಗಳಿಂದ ರೋಚಕ ಗೆಲುವು ಸಾಧಿಸಿದೆ.

ಸಿರಾಜ್, ಗಿಲ್ ಮಿಂಚಿನ ಆಟ; ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ರೋಚಕ ಗೆಲುವು
ಶುಭ್ ಮನ್ ಗಿಲ್
Published On :

ಹೈದರಾಬಾದ್: ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶುಭ್ ಮನ್ ಗಿಲ್ ಅವರ ಭರ್ಜರಿ ದ್ವಿಶತಕ ಮತ್ತು ಮೊಹಮ್ಮದ್ ಸಿರಾಜ್ ಅವರ ಅಮೋಘ ನಾಲ್ಕು ವಿಕೆಟ್ ಗಳ ನೆರವಿನಿಂದ ಭಾರತ 12 ರನ್ ಗಳಿಂದ ರೋಚಕ ಗೆಲುವು ಸಾಧಿಸಿದೆ.

ಇಂದು ಹೈದರಾಬಾದ್ ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಶುಭ್ ಮನ್ ಗಿಲ್(208 ರನ್) ದ್ವಿಶತಕದ ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 349 ರನ್ ಗಳಿಸಿ ನ್ಯೂಜಿಲೆಂಡ್ ಗೆಲ್ಲಲು 350 ರನ್ ಗಳ ಬೃಹತ್ ಗುರಿ ನೀಡಿತು.

ಬೃಹತ್ ಗುರಿ ಬೆನ್ನತ್ತಿದ ಪ್ರವಾಸಿ ತಂಡ, ಮೈಕಲ್ ಬ್ರೇಸ್ ವೆಲ್ ಅವರ ಭರ್ಜರಿ ಶತಕದ ಹೊರತಾಗಿಯೂ 49.2 ಓವರ್ ಗಳಲ್ಲಿ 337 ರನ್ ಗಳಿಗೆ ತನ್ನೆಲ್ಲ ವಿಕೆಟ್ ಗಳನ್ನು ಕಳೆದುಕೊಂಡು ಸೋಲಪ್ಪಿಕೊಂಡಿತು. ಇದರೊಂದಿಗೆ ಬ್ರೇಸ್ ವೆಲ್ ಅವರ ಹೋರಾಟ ವ್ಯರ್ಥವಾಯಿತು. ಬ್ರೇಸ್ ವೆಲ್ ಅವರು 78 ಎಸೆತಗಳಲ್ಲಿ 12 ಬೌಂಡರಿ ಹಾಗೂ 10 ಸಿಕ್ಸರ್ ಗಳ ನೆರವಿನಿಂದ 140 ರನ್ ಗಳಿಸಿದರು.

ಭಾರತದ ಪರ ಮೊಹ್ಮದ್ ಸಿರಾಜ್ ಅವರು 10 ಓವರ್ ಗಳಲ್ಲಿ 46 ರನ್ ನೀಡಿ ನಾಲ್ಕು ವಿಕೆಟ್ ಪಡೆದು ಮಿಂಚಿದರು. ಕುಲದೀಪ್ ಯಾದವ್ ಮತ್ತು ಶಾರ್ದೂಲ್ ಠಾಕೂರ್ ಅವರು ತಲಾ ಎರಡು ವಿಕೆಟ್ ಪಡೆದರು.

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ 34 ರನ್ ಗಳಿಸಿದರೆ, ರನ್ ಮೆಶಿನ್ ವಿರಾಟ್ ಕೊಹ್ಲಿ ಕೇವಲ 8 ರನ್ ಗಳಿಗೆ ಔಟಾಗಿ ನಿರಾಸೆ ಮೂಡಿಸಿದರು. ಹಾರ್ದಿಕ್ ಪಾಂಡ್ಯಾ 28 ಮತ್ತು ಸೂರ್ಯ ಕುಮಾರ್ ಯಾದವ್ 31 ರನ್ ಗಳಿಸಿ ಗಿಲ್ ಗೆ ಉತ್ತಮ ಸಾಥ್ ನೀಡಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಇಶಾನ್ ಕಿಶನ್ (5) ಅಂತಿಮ ಹಂತದಲ್ಲಿ ವಾಷಿಂಹಗ್ಟನ್ ಸುಂದರ್ (12), ಶಾರ್ದೂಲ್ ಠಾಕೂರ್ (3) ವಿಕೆಟ್ ಬೇಗನೆ ಬಿದ್ದಿದ್ದು ಭಾರತಕ್ಕೆ ಹಿನ್ನಡೆಯಾಯಿತು. ಇಲ್ಲವಾದಲ್ಲಿ ಭಾರತದ ಸ್ಕೋರ್ ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆ ಇತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.