3ನೇ ಟಿ20: ಲಂಕಾ ಬೌಲರ್ಗಳನ್ನು ಬೆಂಡೆತ್ತಿದ ಸೂರ್ಯಕುಮಾರ್, ದಾಖಲೆಯ ಸ್ಫೋಟಕ ಶತಕ
ಶ್ರೀಲಂಕಾ ವಿರುದ್ಧದ ಮೂರನೇ ಹಾಗೂ ನಿರ್ಣಾಯಕ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಸ್ಫೋಟಕ ಬ್ಯಾಟಿಂಗ್ ಮಾಡಿದ್ದು ದಾಖಲೆಯ ಶತಕ ಸಿಡಿಸಿದ್ದಾರೆ.

ರಾಜ್ಕೋಟ್(ರಾಜಸ್ಥಾನ): ಶ್ರೀಲಂಕಾ ವಿರುದ್ಧದ ಮೂರನೇ ಹಾಗೂ ನಿರ್ಣಾಯಕ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಸ್ಫೋಟಕ ಬ್ಯಾಟಿಂಗ್ ಮಾಡಿದ್ದು ದಾಖಲೆಯ ಶತಕ ಸಿಡಿಸಿದ್ದಾರೆ.
ರಾಜ್ಕೋಟ್ ನಲ್ಲಿ ನಡೆಯುತ್ತಿರುವ ಮೂರನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ಪರ ಯುವಕ ಕ್ರಿಕೆಟಿಗರು ಅಬ್ಬರಿಸಿದರು. ಲಂಕಾ ಬೌಲರ್ ಗಳ ಮೇಲೆ ದಂಡೆತ್ತಿ ಹೋದ ಸೂರ್ಯಕುಮಾರ್ ಯಾದವ್ 45 ಎಸೆತಗಳಲ್ಲಿ 100 ರನ್ ಬಾರಿಸುವ ಮೂಲಕ ಮೂರನೇ ಟಿ20 ಶತಕ ಬಾರಿಸಿದ್ದಾರೆ.
ಸೂರ್ಯಕುಮಾರ್ ಯಾದವ್ 51 ಎಸೆತಗಳಲ್ಲಿ ಅಜೇಯ 112 ರನ್ ಬಾರಿಸಿದ್ದಾರೆ. ಇನ್ನು ಭಾರತದ ಪರ ಟಿ20ಯಲ್ಲಿ ಅತೀ ಹೆಚ್ಚು ಶತಕ ಸಿಡಿಸಿದ ಎರಡನೇ ಆಟಗಾರ ಎಂಬ ಖ್ಯಾತಿಗೆ ಸೂರ್ಯಕುಮಾರ್ ಯಾದವ್ ಭಾಜನರಾಗಿದ್ದಾರೆ. ರೋಹಿತ್ ಶರ್ಮಾ ಭಾರತ ಪರ 4 ಶತಕ ಸಿಡಿಸಿದ್ದು ಅಗ್ರಸ್ಥಾನದಲ್ಲಿದ್ದಾರೆ.
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ಪರ ಅತ್ಯಾಧಿಕ ರನ್ ಸಿಡಿಸಿ ಬ್ಯಾಟರ್ ಗಳು
* 122*(61): ವಿರಾಟ್ ಕೊಹ್ಲಿ ವಿರುದ್ಧ ಅಫ್ಜಿಂಗ್ - ದುಬೈ 2022
* 118(43): ರೋಹಿತ್ ಶರ್ಮಾ vs ಶ್ರೀಲಂಕಾ - ಇಂದೋರ್ 2017
* 117(55): ಸೂರ್ಯಕುಮಾರ್ ಯಾದವ್ ವಿರುದ್ಧ ಇಂಗ್ಲೆಂಡ್ - ನಾಟಿಂಗ್ಹ್ಯಾಮ್ 2022
* 111*(51): ಸೂರ್ಯಕುಮಾರ್ ಯಾದವ್ ವಿರುದ್ಧ - ಮೌಂಟ್ ಮೌಂಗನುಯಿ 2022
* 111*(61): ರೋಹಿತ್ ಶರ್ಮಾ ವಿರುದ್ಧ ವೆಸ್ಟ್ ಇಂಡೀಸ್ - ಲಖನೌ 2018
*112*(51): ಸೂರ್ಯಕುಮಾರ್ ಯಾದವ್ ವಿರುದ್ಧ ಶ್ರೀಲಂಕಾ- ರಾಜ್ಕೋಟ್ 2022
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


