ಕ್ರಿಕೆಟ್

IPL 2024: ಹೀಗಿರಲಿದೆ ಆರ್‌ಸಿಬಿ ತಂಡದ ಬಲಿಷ್ಠ ಪ್ಲೇಯಿಂಗ್ XI

ಅಭಿಮಾನಿಗಳು ಪ್ರತಿಬಾರಿಯು ಈಸಲ ಕಪ್ ನಮ್ದೆ ಅಂತ ಹೇಳೋದು ಸಾಮಾನ್ಯ ಆಗೋಗಿದೆ. ಆದ್ರೆ ಆರ್‌ಸಿಬಿ ಮಾತ್ರ ಈವರೆಗೂ ಕಪ್ ಗೆದ್ದೇ ಇಲ್ಲ. ಡಿಸೆಂಬರ್ 19ರಂದು ದುಬೈನಲ್ಲಿ ನಡೆದ ಹರಾಜಿನಲ್ಲಿ ಮುಂಬರುವ 2024ರ ಸೀಸನ್‌ಗಾಗಿ ಆರು ಹೊಸ ಮುಖಗಳನ್ನು ಆರ್‌ಸಿಬಿ ತನ್ನ ತಂಡಕ್ಕೆ ಸೇರಿಸಿಕೊಂಡಿದೆ.

IPL 2024: ಹೀಗಿರಲಿದೆ ಆರ್‌ಸಿಬಿ ತಂಡದ ಬಲಿಷ್ಠ ಪ್ಲೇಯಿಂಗ್ XI
ಆರ್‌ಸಿಬಿ ಆಟಗಾರರು 2024
Published On :

ಐಪಿಎಲ್ ತಂಡಗಳಲ್ಲಿ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಂದರೆ ಬಹುಶಃ ತಪ್ಪಾಗಲಾರದು. ಯಾವುದೇ ಐಪಿಎಲ್ ಆವೃತ್ತಿಯಾದರೂ ಅಭಿಮಾನಿಗಳು ಹುಚ್ಚೆದ್ದು ಬೆಂಬಲಿಸುವ ತಂಡ ಆರ್‌ಸಿಬಿ. ಆರ್‌ಸಿಬಿಗೆ ವಿರಾಟ್ ಕೊಹ್ಲಿ ಅವರ ತಾರಾ ಮೆರುಗು ಕೂಡ ಹೆಚ್ಚೆ. 

ಅಭಿಮಾನಿಗಳು ಪ್ರತಿಬಾರಿಯು ಈಸಲ ಕಪ್ ನಮ್ದೆ ಅಂತ ಹೇಳೋದು ಸಾಮಾನ್ಯ ಆಗೋಗಿದೆ. ಆದ್ರೆ ಆರ್‌ಸಿಬಿ ಮಾತ್ರ ಈವರೆಗೂ ಕಪ್ ಗೆದ್ದೇ ಇಲ್ಲ. ಆದರೆ, ಈ ಬಾರಿಯಾದರೂ ಆರ್‌ಸಿಬಿ ಕಪ್ ಗೆಲ್ಲುತ್ತಾ ಅನ್ನೋದನ್ನ ಕಾದು ನೋಡ್ಬೇಕಿದೆ. 

ಡಿಸೆಂಬರ್ 19ರಂದು ದುಬೈನಲ್ಲಿ ನಡೆದ ಹರಾಜಿನಲ್ಲಿ ಮುಂಬರುವ 2024ರ ಸೀಸನ್‌ಗಾಗಿ ಆರು ಹೊಸ ಮುಖಗಳನ್ನು ಆರ್‌ಸಿಬಿ ತನ್ನ ತಂಡಕ್ಕೆ ಸೇರಿಸಿಕೊಂಡಿದೆ.

ವೆಸ್ಟ್ ಇಂಡೀಸ್‌ನ ವೇಗದ ಬೌಲರ್ ಅಲ್ಜಾರಿ ಜೋಸೆಫ್ ಅವರನ್ನು 11.50 ಕೋಟಿ ರೂ.ಗೆ ಖರೀದಿಸಿದೆ. ಆರ್‌ಸಿಬಿಯ ಈ ನಿರ್ಧಾರ ಈಗಾಗಲೇ ಅನೇಕರಿಗೆ ಅಚ್ಚರಿಯನ್ನುಂಟು ಮಾಡಿದೆ. ಬಳಿಕ, ನ್ಯೂಜಿಲೆಂಡ್‌ನ ಲಾಕಿ ಫರ್ಗುಸನ್, ಭಾರತದ ಯಶ್ ದಯಾಳ್ ಮತ್ತು ಇಂಗ್ಲೆಂಡ್‌ನ ವೇಗದ ಬೌಲರ್ ಮತ್ತು ಆಲ್‌ರೌಂಡರ್ ಟಾಮ್ ಕರನ್ ಅವರನ್ನು ಸಹ ಈ ಬಾರಿ ತಂಡಕ್ಕೆ ಬರಮಾಡಿಕೊಂಡಿದೆ. 

ಆರ್‌ಸಿಬಿಯ ಸಂಭಾವ್ಯ ಪ್ಲೇಯಿಂಗ್ ಇಲೆವೆನ್

ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಮಹಿಪಾಲ್ ಲೊಮ್ರೋರ್, ಅಲ್ಜಾರಿ ಜೋಸೆಫ್, ಮೊಹಮ್ಮದ್ ಸಿರಾಜ್, ಕರ್ಣ್ ಶರ್ಮಾ/ಮಯಾಂಕ್ ದಾಗರ್, ಆಕಾಶ್ ದೀಪ್/ ಯಶ್ ದಯಾಳ್‌ರನ್ನು ಆಡಿಸಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಆರ್‌ಸಿಬಿ ತಂಡಲ್ಲಿ ಯಾರೆಲ್ಲಾ ಇದ್ದಾರೆ?

ವಿಕೆಟ್‌ ಕೀಪರ್‌ಗಳಾಗಿ: ಅನುಜ್ ರಾವತ್, ದಿನೇಶ್ ಕಾರ್ತಿಕ್ ಇದ್ದಾರೆ.

ಬ್ಯಾಟ್ಸ್‌ಮನ್‌ಗಳಾಗಿ: ಫಾಫ್ ಡು ಪ್ಲೆಸಿಸ್ (ದಕ್ಷಿಣ ಆಫ್ರಿಕಾ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಸುಯಾಂಶ್ ಪ್ರಭುದೇಸಾಯಿ, ಸೌರವ್ ಚೌಹಾಣ್ ಇದ್ದಾರೆ.

ಆಲ್ ರೌಂಡರ್‌ಗಳಾಗಿ: ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಮನೋಜ್ ಭಾಂಡಗೆ, ಟಾಮ್ ಕರನ್, ಸ್ವಪ್ನಿಲ್ ಸಿಂಗ್, ವಿಲ್ ಜಾಕ್ಸ್, ಕ್ಯಾಮರೂನ್ ಗ್ರೀನ್ ಇದ್ದಾರೆ.

ಬೌಲರ್‌ಗಳಾಗಿ: ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ಕರ್ಣ್ ಶರ್ಮಾ, ರಾಜನ್ ಕುಮಾರ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ಅಲ್ಜಾರಿ ಜೋಸೆಫ್, ಲಾಕಿ ಫರ್ಗುಸನ್, ಯಶ್ ದಯಾಲ್, ವಿಜಯ್‌ಕುಮಾರ್ ವೈಶಾಕ್, ಮಯಾಂಕ್ ದಾಗರ್ ಇದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.