ಸತತ 10 ODI ಪಂದ್ಯಗಳ ಗೆಲುವು: ನಾಯಕತ್ವದಲ್ಲಿ MS ಧೋನಿ ದಾಖಲೆ ಹಿಂದಿಕ್ಕಿದ ಕೆಎಲ್ ರಾಹುಲ್!
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿರುವ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾವನ್ನು ಸೋಲಿಸಿದ ನಂತರ KL ರಾಹುಲ್ ಅವರು ನಾಯಕತ್ವದ ದಾಖಲೆಯಲ್ಲಿ ಮಾಜಿ ನಾಯಕ ಎಂಎಸ್ ಧೋನಿಯನ್ನು ಹಿಂದಿಕ್ಕಿದ್ದಾರೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿರುವ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾವನ್ನು ಸೋಲಿಸಿದ ನಂತರ KL ರಾಹುಲ್ ಅವರು ನಾಯಕತ್ವದ ದಾಖಲೆಯಲ್ಲಿ ಮಾಜಿ ನಾಯಕ ಎಂಎಸ್ ಧೋನಿಯನ್ನು ಹಿಂದಿಕ್ಕಿದ್ದಾರೆ.
ಜೋಹಾನ್ಸ್‌ಬರ್ಗ್‌ನ ನ್ಯೂ ವಾಂಡರರ್ಸ್ ಸ್ಟೇಡಿಯಂನಲ್ಲಿ ಇಂದು ನಡೆದ ಆರಂಭಿಕ ಏಕದಿನ ಪಂದ್ಯದಲ್ಲಿ ಹಂಗಾಮಿ ಏಕದಿನ ನಾಯಕ ರಾಹುಲ್ ನಾಯಕತ್ವದ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು 8 ವಿಕೆಟ್‌ಗಳಿಂದ ಮಣಿಸಿ ಮೆನ್ ಇನ್ ಬ್ಲೂ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ದಕ್ಷಿಣ ಆಫ್ರಿಕಾ ಪ್ರವಾಸದ ಏಕದಿನ ಸರಣಿಯಲ್ಲಿ ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ರಾಹುಲ್‌ಗೆ ಏಕದಿನ ನಾಯಕತ್ವವನ್ನು ಹಸ್ತಾಂತರಿಸಲಾಗಿತ್ತು. ಈ ಪಂದ್ಯದಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು 2 ವಿಕೆಟ್ ಗಳಿಂದ ಮಣಿಸಿದ್ದು, ನಾಯಕತ್ವದ ದೊಡ್ಡ ದಾಖಲೆಯಲ್ಲಿ ರಾಹುಲ್ ಶ್ರೇಷ್ಠ ಐಕಾನ್ ಎಂಎಸ್ ಧೋನಿ ಅವರನ್ನು ಹಿಂದಿಕ್ಕಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸತತವಾಗಿ ಅತಿ ಹೆಚ್ಚು ಗೆಲುವು ಸಾಧಿಸಿದ ಭಾರತೀಯ ನಾಯಕರ ಪಟ್ಟಿಯಲ್ಲಿ ರಾಹುಲ್ ಮಾಜಿ ವಿಶ್ವಕಪ್ ವಿಜೇತ ನಾಯಕ ಎಂಎಸ್ ಧೋನಿ ಅವರನ್ನು ಹಿಂದಿಕ್ಕಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ODI ಗೆಲುವು ಎಲ್ಲಾ ಸ್ವರೂಪಗಳಲ್ಲಿ ರಾಹುಲ್ ಅವರ ಸತತ 10ನೇ ಜಯವಾಗಿದೆ. ಇದು ಈಗ ಮಾಜಿ ನಾಯಕ ಧೋನಿಗಿಂತಲೂ ಹೆಚ್ಚು. ಕನ್ನಡಿಗ ಕೆಎಲ್ ರಾಹುಲ್ 2022/23ರಲ್ಲಿ ಕೊನೆಯ 10 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಜೇಯರಾಗಿದ್ದಾರೆ. ಆದರೆ ಧೋನಿ 2013ರಲ್ಲಿ ಭಾರತವನ್ನು 9 ಪಂದ್ಯಗಳ ಅಜೇಯ ಓಟವನ್ನು ಮುನ್ನಡೆಸಿದ್ದರು.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತೀಯ ನಾಯಕರಿಂದ ಸತತ ಅತಿ ಹೆಚ್ಚು ಗೆಲುವುಗಳು:
* ರೋಹಿತ್ ಶರ್ಮಾ - 19 ಪಂದ್ಯಗಳು (2019/22)
* ರೋಹಿತ್ ಶರ್ಮಾ - 12 ಪಂದ್ಯಗಳು (2018)
* ವಿರಾಟ್ ಕೊಹ್ಲಿ - 12 ಪಂದ್ಯಗಳು (2017)
* ರೋಹಿತ್ ಶರ್ಮಾ - 10 ಪಂದ್ಯಗಳು (2023)
* ಕೆಎಲ್ ರಾಹುಲ್ – 10 ಪಂದ್ಯಗಳು (2022/23)*
* ಎಂಎಸ್ ಧೋನಿ - 9 ಗೆಲುವುಗಳು (2013)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


