ಕ್ರಿಕೆಟ್

ಐಪಿಎಲ್ 2023: ಸಿರಾಜ್ ಬೌಲಿಂಗ್ ದಾಳಿಗೆ ಪಂಜಾಬ್ ತತ್ತರ, ಆರ್ ಸಿಬಿಗೆ 24 ರನ್ ಗೆಲುವು 

ಮೊಹಾಲಿಯಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು-ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಆರ್ ಸಿಬಿ ಪಂಜಾಬ್ ತಂಡವನ್ನು 24 ರನ್ ಗಳ ಅಂತರದಿಂದ ಮಣಿಸಿದೆ.

ಐಪಿಎಲ್ 2023: ಸಿರಾಜ್ ಬೌಲಿಂಗ್ ದಾಳಿಗೆ ಪಂಜಾಬ್ ತತ್ತರ, ಆರ್ ಸಿಬಿಗೆ 24 ರನ್ ಗೆಲುವು 
ಆರ್ ಸಿಬಿ ಆಟಗಾರರ ಸಂಭ್ರಮಾಚರಣೆ
Published On :

ಮೊಹಾಲಿ: ಮೊಹಾಲಿಯಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು-ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಆರ್ ಸಿಬಿ ಪಂಜಾಬ್ ತಂಡವನ್ನು 24 ರನ್ ಗಳ ಅಂತರದಿಂದ ಮಣಿಸಿದೆ.
 
ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು. 

ಆರ್ ಸಿಬಿ ಪರ ಆರಂಭಿಕ ಆಟಗಾರರಾದ ಕೊಹ್ಲಿ (47 ಎಸೆತಗಳಲ್ಲಿ 59 ರನ್) ಡು ಪ್ಲೆಸಿಸ್ (56 ಎಸೆತಗಳಲ್ಲಿ 84 ರನ್) ತಂಡಕ್ಕೆ ಉತ್ತಮ ಆರಂಭ ನೀಡಿದರು. ನಂತರ ಕ್ರೀಸ್ ಗೆ ಬಂದ ಬ್ಯಾಟ್ಸ್ಮನ್ ಗಳು ವೇಗವಾಗಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಗೆ ನಡೆದರು. 

175 ರನ್ ಗಳ ಸಾಧಾರಣ ಮೊತ್ತದ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ತಂಡಕ್ಕೆ 2 ನೇ ಎಸೆತದಲ್ಲೇ ವಿಕೆಟ್ ಉರುಳಿಸಿ ಆರ್ ಸಿಬಿ ಬೌಲರ್ ಮೊಹಮ್ಮದ್ ಸಿರಾಜ್ ಒತ್ತಡ ಹೇರುವಲ್ಲಿ ಯಶಸ್ವಿಯಾದರು. 

ಪಂಜಾಬ್ ತಂಡದ ಪರ ಪ್ರಭ್ಸಿಮ್ರನ್ ಸಿಂಗ್ ( 30 ಎಸೆತಗಳಲ್ಲಿ 46 ರನ್) ತಂಡಕ್ಕೆ ಚೇತರಿಕೆ ನೀಡಲು ಯತ್ನಿಸಿದರು. ಆದರೆ ಉತ್ತಮ ಜೊತೆಯಾಟ ಲಭಿಸದೇ ಏಕಾಂಗಿ ಹೋರಾಟವಾಯಿತು. ಆರ್ ಸಿಬಿ ಬೌಲರ್ ಮೊಹಮ್ಮದ್ ಸಿರಾಜ್ ಪಂಜಾಬ್ ಬ್ಯಾಟ್ಸ್ಮನ್ ಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿ 21 ರನ್ ನೀಡಿ 4 ವಿಕೆಟ್ ಪಡೆದು ಅತ್ಯುತ್ತಮ ಬೌಲರ್ ಎನಿಸಿದರು.

ಪಂಜಾಬ್ ತಂಡದ ಬ್ಯಾಟ್ಸ್ಮನ್ ಗಳು ಆರ್ ಸಿಬಿ ಬೌಲರ್ ಗಳನ್ನು ಎದುರಿಸಲು ಸಾಧ್ಯವಾಗದೇ ವೇಗವಾಗಿ ವಿಕೆಟ್ ಒಪ್ಪಿಸಿದರು. ಪರಿಣಾಮ 18.2 ಓವರ್ ಗಳಲ್ಲಿಯೇ ಪಂಜಾಬ್ ತಂಡ 150 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು.   

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.