ಭಾರತ vs ದ.ಆಫ್ರಿಕಾ: ದಾಖಲೆ ಬರೆದ ರೋಹಿತ್-ರಾಹುಲ್ ಜೋಡಿ
ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ ತಂಡದ ಪರ ಭರ್ಜರಿ ಬ್ಯಾಟಿಂಗ್ ಮಾಡಿರುವ ರೋಹಿತ್ ಶರ್ಮಾ-ಕೆಎಲ್ ರಾಹುಲ್ ಜೋಡಿ ದಾಖಲೆ ನಿರ್ಮಿಸಿದೆ.

ಗುವಾಹತಿ: ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ ತಂಡದ ಪರ ಭರ್ಜರಿ ಬ್ಯಾಟಿಂಗ್ ಮಾಡಿರುವ ರೋಹಿತ್ ಶರ್ಮಾ-ಕೆಎಲ್ ರಾಹುಲ್ ಜೋಡಿ ದಾಖಲೆ ನಿರ್ಮಿಸಿದೆ.
ಗುವಾಹತಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂ ನಡೆಯುತ್ತಿರುವ 2ನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ತಂಡ ಅಕ್ಷರಶಃ ರನ್ ಗಳ ಸುರಿಮಳೆ ಗೈದಿದೆ. ನಿಗಧಿತ 20 ಓವರ್ ಗಳಲ್ಲಿ ಕೇವಲ 3 ವಿಕೆಟ್ ನಷ್ಟಕ್ಕೆ ಬರೊಬ್ಬರಿ 237 ರನ್ ಗಳ ಬೃಹತ್ ಗುರಿ ನೀಡಿದೆ. ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಜೋಡಿ ಮೊದಲ ವಿಕೆಟ್ ಗೆ 96 ರನ್ ಗಳ ಅಮೋಘ ಜೊತೆಯಾಟ ನೀಡಿ ಭಾರತಕ್ಕೆ ಭರ್ಜರಿ ಆರಂಭ ನೀಡಿತು.
ಕೆಎಲ್ ರಾಹುಲ್ ಕೇವಲ 26 ಎಸೆತೆಗಳಲ್ಲಿ 4 ಸಿಕ್ಸರ್ ಮತ್ತು 5 ಬೌಂಡರಿ ಸಮೇತ 76 ರನ್ ಸಿಡಿಸಿದರೆ, 37 ಎಸೆತಗಳನ್ನು ಎದುರಿಸಿ 1 ಸಿಕ್ಸರ್ ಮತ್ತು 7 ಬೌಂಡರಿ ಸಹಿತ ರೋಹಿತ್ ಶರ್ಮಾ 43 ರನ್ ಪೇರಿಸಿದರು. ಆ ಮೂಲಕ ಅಮೋಘ 96 ರನ್ ಗಳ ಜೊತೆಯಾಟ ನೀಡಿತು. ಆ ಮೂಲಕ ತಮ್ಮ ಜೊತೆಯಾಟದ 15ನೇ 50ಕ್ಕೂ ಅಧಿಕ ರನ್ ಗಳ ಜೊತೆಯಾಟವಾಡಿತು.
ಇದು ಅಂತಾಷ್ಟ್ರೀಯ ಟಿ20 ಮಾದರಿಯಲ್ಲಿ ಜೋಡಿಯೊಂದರಿಂದ ದಾಖಲಾದ ಅತೀ ಹೆಚ್ಚಿನ 50ಕ್ಕೂ ಅಧಿಕ ರನ್ ಗಳ ಜೊತೆಯಾಟವಾಗಿದೆ. ಈ ಹಿಂದೆ ಇದೇ ಜೋಡಿ ಪಾಕಿಸ್ತಾನದ ಬಾಬರ್ ಅಜಮ್ ಮತ್ತು ಮಹಮದ್ ರಿಜ್ವಾನ್ ಜೋಡಿ ಕಲೆಹಾಕಿದ್ದ 14 ಬಾರಿ 50ಕ್ಕೂ ಹೆಚ್ಚು ರನ್ ಗಳ ಜೊತೆಯಾಟದ ದಾಖಲೆಯನ್ನು ಸರಿಗಟ್ಟಿತ್ತು. ಈ ಬಾರಿ ಅದನ್ನು ಹಿಂದಿಕ್ಕಿದೆ.
Most 50+ partnerships in T20Is
15 Rohit Sharma - KL Rahul *
14 Babar Azam - Mohd Rizwan
13 P Stirling - K O'Brien
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


