ಕ್ರಿಕೆಟ್

ಪಂದ್ಯದ ಕಾಮೆಂಟರಿ ವೇಳೆ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು!

ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ತೀವ್ರ ಅಸ್ವಸ್ಥಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಂದ್ಯದ ಕಾಮೆಂಟರಿ ವೇಳೆ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು!
ರಿಕಿ ಪಾಂಟಿಂಗ್
Published On :

ಪರ್ತ್: ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ತೀವ್ರ ಅಸ್ವಸ್ಥಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಪರ್ತ್ ನಲ್ಲಿ ನಡೆಯುತ್ತಿದ್ದು ಈ ವೇಳೆ ಕಾಮೆಂಟರಿ ಮಾಡುತ್ತಿದ್ದ ರಿಕಿ ಪಾಂಟಿಂಗ್ ಎದೆನೋವು ಕಾಣಿಸಿಕೊಂಡಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಮಾಧ್ಯಮ ವರದಿಗಳ ಪ್ರಕಾರ, ಪಾಂಟಿಂಗ್ ಅವರ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ. ಅವರು ಸ್ವತಃ ತಮ್ಮ ಸಹೋದ್ಯೋಗಿಗಳಿಗೆ ಅನಾರೋಗ್ಯದ ಬಗ್ಗೆ ಹೇಳಿದ್ದರು. ಕೆಲವು ರೋಗಲಕ್ಷಣಗಳ ಬಗ್ಗೆ ಚಿಂತಿತರಾದ ನಂತರ, ಅವರು ಪರೀಕ್ಷಿಸಲು ನಿರ್ಧರಿಸಿದರು.

ಪರ್ತ್‌ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ಟೆಸ್ಟ್‌ನ ನಾಲ್ಕನೇ ದಿನದಂದು ಪಾಂಟಿಂಗ್ ಕಾಮೆಂಟರಿಗಾಗಿ ಲಭ್ಯರಾಗುತ್ತಾರೆಯೇ ಎಂಬುದನ್ನು ಚಾನೆಲ್ ಸೆವೆನ್ ಇನ್ನೂ ಖಚಿತಪಡಿಸಿಲ್ಲ. ಪಾಂಟಿಂಗ್ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಕೂಡ ಆಗಿದ್ದಾರೆ.

ಈ ವರ್ಷ ಆಸ್ಟ್ರೇಲಿಯಾದ ಶ್ರೇಷ್ಠ ಸ್ಪಿನ್ನರ್ ಶೇನ್ ವಾರ್ನ್ ಥಾಯ್ಲೆಂಡ್‌ನಲ್ಲಿ ಹೃದಯಾಘಾತದಿಂದ ನಿಧನರಾದ ಕಾರಣ ಪಾಂಟಿಂಗ್ ಅವರ ಆರೋಗ್ಯದ ಹಠಾತ್ ಕ್ಷೀಣತೆ ಕೂಡ ಆತಂಕಕ್ಕೆ ಕಾಣವಾಗಿತ್ತು. ಪಾಂಟಿಂಗ್ ಅವರು ಈ ವಿಷಯದಲ್ಲಿ ಯಾವುದೇ ನಿರ್ಲಕ್ಷ್ಯವನ್ನು ತೆಗೆದುಕೊಳ್ಳಲು ಬಯಸಲಿಲ್ಲ. ಆಸ್ಪತ್ರೆಗೆ ಹೋಗಲು ನಿರ್ಧರಿಸಿದರು. ಪಾಂಟಿಂಗ್ ಅವರನ್ನು ಆಸ್ಟ್ರೇಲಿಯಾದ ಅತ್ಯುತ್ತಮ ನಾಯಕರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಅವರ ನಾಯಕತ್ವದಲ್ಲಿ, ಆಸ್ಟ್ರೇಲಿಯಾ ತಂಡ ODIಗಳಲ್ಲಿ ಎರಡು ಬಾರಿ (2003, 2007) ವಿಶ್ವ ಚಾಂಪಿಯನ್ ಆಯಿತು.

ಪಾಂಟಿಂಗ್ ವೃತ್ತಿಜೀವನ
ಪಾಂಟಿಂಗ್ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ 168 ಟೆಸ್ಟ್, 375 ಏಕದಿನ ಮತ್ತು 17 ಟಿ20 ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ 13,378 ರನ್, ಏಕದಿನದಲ್ಲಿ 13,704 ರನ್ ಮತ್ತು ಟಿ20ಯಲ್ಲಿ 401 ರನ್ ಬಾರಿಸಿದ್ದಾರೆ. ಪಾಂಟಿಂಗ್ ಟೆಸ್ಟ್‌ನಲ್ಲಿ 41 ಶತಕಗಳು ಮತ್ತು 62 ಅರ್ಧ ಶತಕಗಳನ್ನು ಹೊಂದಿದ್ದಾರೆ, ODIಗಳಲ್ಲಿ 30 ಶತಕಗಳು ಮತ್ತು 82 ಅರ್ಧ ಶತಕಗಳು ಮತ್ತು T20 ಗಳಲ್ಲಿ ಎರಡು ಅರ್ಧ ಶತಕಗಳನ್ನು ಹೊಂದಿದ್ದಾರೆ. ಇದಲ್ಲದೇ ಪಾಂಟಿಂಗ್ ಟೆಸ್ಟ್‌ನಲ್ಲಿ ಐದು ಮತ್ತು ಏಕದಿನದಲ್ಲಿ ಮೂರು ವಿಕೆಟ್‌ಗಳನ್ನು ಕಬಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.