ಹಂಚಿಕೊಳ್ಳಲು ಕೆಲವು ರೋಚಕ ಸುದ್ದಿಗಳಿವೆ ಎಂದಿದ್ದ ಎಂಎಸ್ ಧೋನಿ, ಅಭಿಮಾನಿಗಳ ಕಾತರಕ್ಕೆ ತಣ್ಣೀರು
ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವ ವಹಿಸಿಕೊಂಡಿರುವ ಎಂಎಸ್ ಧೋನಿ ಭಾನುವಾರ ಘೋಷಣೆಯೊಂದನ್ನು ಮಾಡುವ ಮೂಲಕ ಲೇವಡಿಗೆ ಒಳಗಾಗಿದ್ದಾರೆ. ಇದು ಹೊಸ ಓರಿಯೊ ಪ್ರಚಾರ BringBack2011 ಆಗಿದೆ.

ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವ ವಹಿಸಿಕೊಂಡಿರುವ ಎಂಎಸ್ ಧೋನಿ ಭಾನುವಾರ ಘೋಷಣೆಯೊಂದನ್ನು ಮಾಡುವ ಮೂಲಕ ಲೇವಡಿಗೆ ಒಳಗಾಗಿದ್ದಾರೆ. ಇದು ಹೊಸ ಓರಿಯೊ ಪ್ರಚಾರ BringBack2011 ಆಗಿದೆ. ಕೂಲ್ ಕ್ಯಾಪ್ಟನ್ ಎಂದೇ ಹೆಸರಾಗಿದ್ದ ಧೋನಿ, ನಿವೃತ್ತಿ ಘೋಷಿಸಬಹುದು ಎಂದು ಅಭಿಮಾನಿಗಳು ಉಸಿರು ಬಿಗಿಹಿಡಿದು ಕಾಯುತ್ತಿದ್ದರು. ಆದರೆ, ಇದು ಕೇವಲ ಮಾರ್ಕೆಟಿಂಗ್ ಗಿಮಿಕ್ ಆಗಿದ್ದರಿಂದ ಅಭಿಮಾನಿಗಳು ನಿರಾಳರಾಗಿದ್ದಾರೆ.
ಎಂಎಸ್ ಧೋನಿ ಶನಿವಾರ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಸೆಪ್ಟೆಂಬರ್ 25 ರಂದು ಹಂಚಿಕೊಳ್ಳಲು ಕೆಲವು ರೋಚಕ ಸುದ್ದಿಗಳಿವೆ. ಹೀಗಾಗಿ ಲೈವ್ ಬರುವುದಾಗಿ ಪೋಸ್ಟ್ ಮಾಡಿದ್ದರು. ಎಂಎಸ್ ಧೋನಿ ಅವರ ಈ ದಿಢೀರ್ ಘೋಷಣೆ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿತ್ತು.
ಇದಾದ ನಂತರ, 41 ವರ್ಷದ ಅನುಭವಿ ಕ್ರಿಕೆಟ್‌ನ ಎಲ್ಲಾ ಪ್ರಕಾರಗಳಿಂದ ನಿವೃತ್ತರಾಗುತ್ತಾರೆ ಎಂದು ಅಭಿಮಾನಿಗಳು ಊಹಿಸಿದ್ದರು. ಆದರೆ, ಧೋನಿ ಓರಿಯೊ ಬಿಸ್ಕಟ್ ಅನ್ನು ಬಿಡುಗಡೆ ಮಾಡಿದರು. ಈ ಬಗ್ಗೆ ವಿಡಿಯೋ ಮೂಲಕ ಮಾಹಿತಿ ನೀಡಿದ್ದಾರೆ.
ಧೋನಿ 2020ರ ಆಗಸ್ಟ್‌ನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಇದಾದ ನಂತರವೂ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡುವುದನ್ನು ಮುಂದುವರೆಸಿದರು.ಈ ಪ್ರಕಟಣೆಯ ನಂತರ, ಅವರ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟರೆ, ಟ್ವಿಟರ್‌ನಲ್ಲಿ ಮೀಮ್ಸ್‌ಗಳಿಗೆ ಆಹಾರವಾಯಿತು. ಇಲ್ಲಿವೆ ನೋಡಿ ಕೆಲವು ಟ್ವೀಟ್‌ಗಳು..
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


