T20 ವಿಶ್ವಕಪ್: ಶಮಿ ಮಾರಕ ಬೌಲಿಂಗ್, ಕೊಹ್ಲಿ ಅದ್ಭುತ ಫೀಲ್ಡಿಂಗ್; ಅಭ್ಯಾಸ ಪಂದ್ಯದಲ್ಲಿ ಆಸಿಸ್ ಮಣಿಸಿದ ಭಾರತ
ಮಹಮದ್ ಶಮಿ ಮಾರಕ ಬೌಲಿಂಗ್ ಹಾಗೂ ವಿರಾಟ್ ಕೊಹ್ಲಿ ಅವರ ಅದ್ಭುತ ಫೀಲ್ಡಿಂಗ್ ನೆರವಿನಿಂದಾಗಿ ಜಯ ಕೈ ಬಿಟ್ಟು ಹೋಗಿದ್ದ ಪಂದ್ಯದಲ್ಲಿ ಭಾರತ ತಂಡ 6 ರನ್ ಗಳ ವಿಕೋಚಿತ ಗೆಲುವು ಸಾಧಿಸಿದೆ.

ಬ್ರಿಸ್ಪೇನ್: ಮಹಮದ್ ಶಮಿ ಮಾರಕ ಬೌಲಿಂಗ್ ಹಾಗೂ ವಿರಾಟ್ ಕೊಹ್ಲಿ ಅವರ ಅದ್ಭುತ ಫೀಲ್ಡಿಂಗ್ ನೆರವಿನಿಂದಾಗಿ ಜಯ ಕೈ ಬಿಟ್ಟು ಹೋಗಿದ್ದ ಪಂದ್ಯದಲ್ಲಿ ಭಾರತ ತಂಡ 6 ರನ್ ಗಳ ವಿಕೋಚಿತ ಗೆಲುವು ಸಾಧಿಸಿದೆ.
ಹೌದು.. ಪಂದ್ಯದ ಅಂತಿಮ ಹಂತದಲ್ಲಿ ವಿರಾಟ್ ಕೊಹ್ಲಿ ಅದ್ಭುತ ಫೀಲ್ಡಿಂಗ್ ಮತ್ತು ಮೊಹಮ್ಮದ್ ಶಮಿ ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನದಿಂದ ಆಸ್ಟ್ರೇಲಿಯಾ ವಿರುದ್ಧ ನಡೆದ T20 ವಿಶ್ವಕಪ್ ಕ್ರಿಕೆಟ್ ಅಭ್ಯಾಸ ಪಂದ್ಯದಲ್ಲಿ ಭಾರತ 6 ರನ್‌ಗಳ ರೋಚಕ ಜಯ ಸಾಧಿಸಿದೆ.
ಭಾರತ ನೀಡಿದ 187 ರನ್‌ಗಳ ಗುರಿಯನ್ನು ಬೆನ್ನು ಹತ್ತಿದ ಆಸ್ಟ್ರೇಲಿಯಾ ಅತ್ಯುತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್ ಗೆ ಆ್ಯರನ್ ಫಿಂಚ್ ಮತ್ತು ಮಿಚೆಲ್ ಮಾರ್ಷ್ ಜೋಡಿ 41ರನ್ ಜೊತೆಯಾಟ ನೀಡಿದರು. ಕೇವಲ 18 ಎಸೆತಗಳಲ್ಲಿ ಮಾರ್ಶ್ 2 ಸಿಕ್ಸರ್ ಹಾಗೂ 4 ಬೌಂಡರಿಗಳ ನೆರವಿನಿಂದ 35ರನ್ ಸಿಡಿಸಿ ಭಾರತಕ್ಕೆ ಮಾರಕವಾಗುವ ಸೂಚನೆ ನೀಡಿದ್ದರು. ಈ ಹಂತದಲ್ಲಿ ಭುವನೇಶ್ವರ್ ಕುಮಾರ್ ಅವರನ್ನು ಕ್ಲೀನ್ ಬೋಲ್ಡ್ ಮಾಡಿದರು. ಬಳಿಕ ಅಲ್ಲಿ ಆರಂಭವಾಗಿದ್ದೇ ಫಿಂಚ್ ಆರ್ಭಟ.. ಒಂದೆಡೆ ಭಾರತೀಯ ಬೌಲರ್ ಗಳು ಆಸಿಸ್ ದಾಂಡಿಗರ ವಿಕೆಟ್ ಉರುಳಿಸುತ್ತಿದ್ದರೆ ಮತ್ತೊಂದೆಡೆ ಫಿಂಚ್ ಮಾತ್ರ ಇದಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಬ್ಯಾಟ್ ಬೀಸುತ್ತಿದ್ದರು.
54 ಎಸೆತಗಳನ್ನು ಎದುರಿಸಿದ ಫಿಂಚ್ 76 ರನ್ ಗಳಿ ಮಾರಕವಾಗಿದ್ದರು. ಈ ಹಂತದಲ್ಲಿ ಹರ್ಷಲ್ ಪಟೇಲ್ ಬೌಲಿಂಗ್ ನಲ್ಲಿ ಔಟ್ ಆಗಿ ಪೆವಿಲಿಯನ್ ಸೇರಿಕೊಂಡರು. ಮಿಚೆಲ್ ಮಾರ್ಷ್ 35 ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ 23 ರನ್ ಗಳಿಸಿ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದರು. ಒಂದು ಹಂತದಲ್ಲಿ ಆಸಿಸ್ ಪಡೆ 18 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿ ಸುಭದ್ರ ಸ್ಥಿತಿಯಲ್ಲಿತ್ತು. ಆದರೆ ಕೊನೆಯಲ್ಲಿ ಡೇವಿಡ್ ರನೌಟ್ ಮತ್ತು ಪ್ಯಾಟ್ ಕಮ್ಮಿನ್ಸ್ ಅವರ ಕ್ಯಾಚನ್ನು ಕೊಹ್ಲಿ ಪಡೆದು ಪಂದ್ಯಕ್ಕೆ ರೋಚಕ ತಿರುವು ಕೊಟ್ಟರು. 9 ರನ್‌ಗಳ ಅಂತರದಲ್ಲಿ 6 ವಿಕೆಟ್ ಕಳೆದುಕೊಂಡಿದ್ದರಿಂದ ಭಾರತ ಪಂದ್ಯವನ್ನು ಗೆದ್ದುಕೊಂಡಿತು.
ಆಸ್ಟ್ರೇಲಿಯಾಗೆ ಕೊನೆಯ 12 ಎಸೆತಗಳಲ್ಲಿ ಗೆಲುವಿಗೆ 16 ರನ್ ಬೇಕಾಗಿತ್ತು. ಹರ್ಷಲ್ ಪಟೇಲ್ ಎಸೆದ 18 ಓವರ್‌ನ ಮೊದಲ ಎಸೆತದಲ್ಲೇ ಆರನ್ ಫಿಂಚ್ ಬೌಲ್ಡ್ ಆದರು. ಮರು ಎಸೆತದಲ್ಲೇ ಟೀಮ್ ಡೇವಿಡ್ ರನೌಟ್ ಆಗಿ ಹೊರ ನಡೆದರು. ಮೂರನೇ ಎಸೆತದಲ್ಲಿ ಒಂದು ರನ್ ಬಂತು. 4 ಎಸೆತದಲ್ಲಿ ಒಂಟಿ ರನ್, 5ನೇ ಎಸೆತದಲ್ಲಿ 2 ರನ್ ಬಂತು. ಕೊನೆಯ ಎಸೆತದಲ್ಲೂ 1 ರನ್ ಗಳಿಸಿಕೊಂಡ ಆಸ್ಟ್ರೇಲಿಯಾಗೆ ಕೊನೆಯ ಓವರ್‌ನಲ್ಲಿ ಗೆಲುವಿಗೆ 11 ರನ್ ಬೇಕಾಗಿತ್ತು. ಶಮಿ ಎಸೆದ ಕೊನೆಯ ಓವರ್‌ನ ಮೊದಲೆರಡು ಎಸೆತದಲ್ಲಿ ತಲಾ ಎರಡೆರಡು ರನ್ ಪ್ರಾಪ್ತಿಯಾಯಿತು. ಮೂರನೇ ಎಸೆತದಲ್ಲಿ ಕೊಹ್ಲಿ ಬೌಂಡರಿ ಲೈನ್‌ನಲ್ಲಿ ಒಂಟಿ ಕೈಯಲ್ಲಿ ಹಿಡಿದ ಕ್ಯಾಚ್‍ಗೆ ಕಮಿನ್ಸ್ ವಿಕೆಟ್ ಕಳೆದುಕೊಂಡರು. ಮರು ಎಸೆದಲ್ಲಿ ಆಸ್ಟನ್ ಅಗರ್ ರನೌಟ್ ಆಗಿ ಹೊರನಡೆದರು. ಮರು ಎಸೆದಲ್ಲೂ ಶಮಿ ಬೌಲಿಂಗ್‍ನಲ್ಲಿ ಮಿಂಚಿ ಜೋಸ್ ಇಂಗ್ಲಿಸ್‍ನ್ನು ಬೌಲ್ಡ್ ಮಾಡಿದರು. ಕೊನೆಯ ಎಸೆತದಲ್ಲಿ ಆಸ್ಟ್ರೇಲಿಯಾ ಗೆಲುವಿಗೆ 7 ರನ್ ಬೇಕಾಗಿತ್ತು. ಕೊನೆಯ ಎಸೆತದಲ್ಲಿ ರಿಚರ್ಡ್ಸ್‌ನ್ ಬೌಲ್ಡ್ ಆಗುವ ಮೂಲಕ ರೋಚಕ ಪಂದ್ಯ ಅಂತ್ಯವಾಯಿತು. ಭಾರತ 6 ರನ್‍ಗಳ ಜಯದೊಂದಿಗೆ ಸಂಭ್ರಮಿಸಿತು.
ಮೂರು ವಿಕೆಟ್ ಕಿತ್ತು ಶಮಿ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಅಲ್ಲದೆ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದರು. ಈ ಪೈಕಿ ಇನ್ನಿಂಗ್ಸ್‌ನ ಕೊನೆಯ ನಾಲ್ಕು ಎಸೆತಗಳಲ್ಲಿ ರನೌಟ್ ಸೇರಿದಂತೆ ಸತತ ನಾಲ್ಕು ವಿಕೆಟ್‌ಗಳು ಪತನಗೊಂಡಿದ್ದವು. ಶಮಿ ಹೊರತುಪಡಿಸಿ ಭುವನೇಶ್ವರ್ ಕುಮಾರ್ ಎರಡು ವಿಕೆಟ್ ಕಬಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


