ಟಿ20 ವಿಶ್ವಕಪ್; ಅಫ್ಘಾನಿಸ್ಥಾನದ ವಿರುದ್ಧ ಲಂಕಾಗೆ 6 ವಿಕೆಟ್ ಗಳ ಜಯ
ಟಿ20 ವಿಶ್ವಕಪ್ ಪಂದ್ಯದಲ್ಲಿ ಲಂಕಾ ತಂಡ ಅಫ್ಘಾನಿಸ್ಥಾನ ತಂಡವನ್ನು 6 ವಿಕೆಟ್ ಗಳ ಅಂತರದಿಂದ ಮಣಿಸಿದೆ.

ಪರ್ತ್: ಟಿ20 ವಿಶ್ವಕಪ್ ಪಂದ್ಯದಲ್ಲಿ ಲಂಕಾ ತಂಡ ಅಫ್ಘಾನಿಸ್ಥಾನ ತಂಡವನ್ನು 6 ವಿಕೆಟ್ ಗಳ ಅಂತರದಿಂದ ಮಣಿಸಿದೆ. ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಅಫ್ಘಾನಿಸ್ಥಾನ 8 ವಿಕೆಟ್ ಗಳ ನಷ್ಟಕ್ಕೆ 144 ರನ್ ಗಳಿಸಿತ್ತು, ಆರಂಭಿಕ ಆಟಗಾರರಾದ ರೆಹಮಾನುಲ್ಲಾ ಗುರ್ಬಜ್, ಉಸ್ಮಾನ್ ಘನಿ ಅನುಕ್ರಮವಾಗಿ 28-27 ರನ್ ಗಳನ್ನು ಗಳಿಸಿದ್ದರು.
ಲಂಕಾ 18.3 ಓವರ್ ಗಳಲ್ಲಿ ಟಾರ್ಗೆಟ್ ನ್ನು ತಲುಪಿದ್ದು, ಧನಂಜಯ ಡಿ ಸಿಲ್ವ 42 ಎಸೆತಗಳಲ್ಲಿ 66 ರನ್ ಗಳಿಸಿದ್ದು ತಂಡಕ್ಕೆ ಸುಲಭವಾಗಿ ಗುರಿ ತಲುಪಲು ಸಾಧ್ಯವಾಯಿತು.
ಲಂಕಾ ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ ವನಿಂದು ಹಸರಂಗ 13 ರನ್ ನೀಡಿ 3 ವಿಕೆಟ್ ಪಡೆದು ಅತ್ಯುತ್ತಮ ಬೌಲರ್ ಎನಿಸಿದರು. ಪೇಸರ್ ಲಹಿರು ಕುಮಾರ 30 ರನ್ ನೀಡಿ 2 ವಿಕೆಟ್ ಗಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


