ಇಂಗ್ಲೀಷ್ ಪ್ರೀಮಿಯರ್ ಲೀಗ್ ಗಿಂತ ಹೆಚ್ಚಿನ ಆದಾಯ ಐಪಿಎಲ್ ಗಳಿಸುತ್ತದೆ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ
ಖ್ಯಾತ ಕ್ರೀಡಾ ಲೀಗ್ ಇಂಗ್ಲೀಷ್ ಪ್ರೀಮಿಯರ್ ಲೀಗ್ ಗಿಂತ ಹೆಚ್ಚಿನ ಆದಾಯವನ್ನು ಭಾರತದ ಟಿ20 ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗಳಿಸುತ್ತದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದರು.

ಮುಂಬೈ: ಖ್ಯಾತ ಕ್ರೀಡಾ ಲೀಗ್ ಇಂಗ್ಲೀಷ್ ಪ್ರೀಮಿಯರ್ ಲೀಗ್ ಗಿಂತ ಹೆಚ್ಚಿನ ಆದಾಯವನ್ನು ಭಾರತದ ಟಿ20 ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗಳಿಸುತ್ತದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದರು.
ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಆಡುತ್ತಿದ್ದ ಕ್ರಿಕೆಟ್ ಆಟ ಈಗ ತುಂಬ ಬೆಳೆದಿದೆ. ಈ ಆಟವನ್ನು ಅಭಿಮಾನಿಗಳು, ದೇಶದ ಜನತೆಗಾಗಿ ಬಿಸಿಸಿಐ ನಡೆಸುತ್ತಿದೆ. ಈ ಕ್ರೀಡೆಯು ಇದೀಗ ಪ್ರಬಲವಾಗಿದೆ ಮತ್ತು ಮತ್ತಷ್ಟು ಬೆಳೆಯುತ್ತಿದೆ. ನಾನು ಇಷ್ಟಪಡುವ ಕ್ರೀಡೆಯು ತುಂಬಾ ಪ್ರಬಲವಾಗುತ್ತಿರುವುದು ನನಗೆ ಸಂತೋಷ ಮತ್ತು ಹೆಮ್ಮೆಯನ್ನು ನೀಡುತ್ತದೆ. ನನ್ನಂತಹ ಆಟಗಾರರು ಕೆಲವು ನೂರುಗಳನ್ನು ಗಳಿಸಿದ್ದರೆ, ಈಗ ಕೋಟಿಗಳನ್ನು ಗಳಿಸುವ ಸಾಮರ್ಥ್ಯ ಗಳಿಸಿಕೊಂಡು ಆಟವು ವಿಕಸನೆಗೊಳ್ಳುತ್ತಿದೆ ಎಂದು ಹೇಳಿದ್ದಾರೆ.
ನಾಯಕತ್ವದ ಕುರಿತಾಗಿ ಮಾತನಾಡಿದ ಗಂಗೂಲಿ, ನಾನು ಭಾರತ ತಂಡದ ನಾಯಕನಾಗಿದ್ದಾಗ ಸಚಿನ್, ಅಜರ್, ದ್ರಾವಿಡ್ ರಂತವರು ತಂಡದಲ್ಲಿದ್ದರು. ನಾನು ಅವರೊಂದಿಗೆ ಸ್ಪರ್ಧಿಸಲಿಲ್ಲ; ಬದಲಾಗಿ, ನಾನು ಅವರೊಂದಿಗೆ ನಾಯಕರಾಗಿ ಸಹಕರಿಸಿದೆ ಮತ್ತು ಜವಾಬ್ದಾರಿಯನ್ನು ಹಂಚಿಕೊಂಡಿದ್ದೇನೆ ಎಂದರು.
2022ರ ಐಪಿಎಲ್ ಕೂಟವು ಹಿಂದಿಗಿಂತಲೂ ದೊಡ್ಡದಾಗಿ ರೂಪಿಸಲಾಗಿತ್ತು. ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಈ ಬಾರಿ ಎರಡು ಹೊಸ ತಂಡಗಳಾಗಿ ಸೇರ್ಪಡೆಯಾಗಿದ್ದವು. ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಚಾಂಪಿಯನ್ ಆಗಿತ್ತು.
ಇದನ್ನೂ ಓದಿ: ಮೊದಲ ಟಿ20 ಪಂದ್ಯ: ಭಾರತದ ವಿರುದ್ಧ ದಕ್ಷಿಣ ಆಫ್ರಿಕಾಗೆ ಗೆಲುವು; ಮಿಂಚಿದ ಡೇವಿಡ್ ಮಿಲ್ಲರ್, ಡುಸ್ಸೆನ್
ಸೌರವ್ ಗಂಗೂಲಿ 113 ಟೆಸ್ಟ್ ಮತ್ತು 311 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಅವರು 2003 ರ ವಿಶ್ವಕಪ್ ಫೈನಲ್ ಗೆ ಭಾರತವನ್ನು ಮುನ್ನಡೆಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


