ಕ್ರಿಕೆಟ್ ದಾಖಲೆ: ಅತೀ ಹೆಚ್ಚು ಏಕದಿನ ವೈಟ್ ವಾಶ್ ಗೆಲುವು ಸಾಧಿಸಿದ ತಂಡಗಳ ಪಟ್ಟಿ, ನಂಬರ್ 1 ಭಾರತ ಅಲ್ಲ!!
ವಿಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ಮತ್ತೊಂದು ವೈಟ್ ವಾಶ್ ಸರಣಿ ಗೆಲುವು ಸಾಧಿಸಿದ್ದು, ಈ ಗೆಲುವಿನ ಮೂಲಕ ತನ್ನ ಖಾತೆಯಲ್ಲಿನ ಕ್ಲೀನ್ ಸ್ವೀಪ್ ಸರಣಿ ಗೆಲುವಿನ ಸಂಖ್ಯೆಯನ್ನು 13ಕ್ಕೆ ಏರಿಕೆ ಮಾಡಿಕೊಂಡಿದೆ.

ದುಬೈ: ವಿಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ಮತ್ತೊಂದು ವೈಟ್ ವಾಶ್ ಸರಣಿ ಗೆಲುವು ಸಾಧಿಸಿದ್ದು, ಈ ಗೆಲುವಿನ ಮೂಲಕ ತನ್ನ ಖಾತೆಯಲ್ಲಿನ ಕ್ಲೀನ್ ಸ್ವೀಪ್ ಸರಣಿ ಗೆಲುವಿನ ಸಂಖ್ಯೆಯನ್ನು 13ಕ್ಕೆ ಏರಿಕೆ ಮಾಡಿಕೊಂಡಿದೆ.
ಹೌದು... ಭಾರತ ತಂಡ 3 ಮತ್ತು ಅದಕ್ಕಿಂತ ಹೆಚ್ಚು ಪಂದ್ಯಗಳಿರುವ ಏಕದಿನ ಸರಣಿಯಲ್ಲಿ ಮೊದಲ ಬಾರಿಗೆ 1982/83ರಲ್ಲಿ ಶ್ರೀಲಂಕಾ ವಿರುದ್ಧ ವೈಟ್ ವಾಶ್ ಸರಣಿ ಜಯ ಸಾಧಿಸಿತ್ತು. ಅಂದಿನಿಂದ ಇಂದಿನವರೆಗೂ ಭಾರತ 13 ಏಕದಿನ ಸರಣಿಗಳಲ್ಲಿ ವೈಟ್ ವಾಶ್ ಸಾಧನೆ ಮಾಡಿದೆ. ಅಂತೆಯೇ ಅತೀ ಹೆಚ್ಚು ವೈಟ್ ವಾಶ್ ಸರಣಿ ಜಯ ಸಾಧಿಸಿರುವ ತಂಡಗಳ ಪಟ್ಟಿಯಲ್ಲಿ ಭಾರತ 8ನೇ ಸ್ಥಾನದಲ್ಲಿದೆ.
ಉಳಿದಂತೆ ಅತೀ ಹೆಚ್ಚು ವೈಟ್ ವಾಶ್ ಸರಣಿ ಜಯ ಸಾಧಿಸಿರುವ ತಂಡ ದಾಖಲೆ ಇರುವುದು ಪಾಕಿಸ್ತಾನದ ಹೆಸರಲ್ಲಿ.. ಪಾಕಿಸ್ತಾನ ತಂಡ ಈ ವರೆಗೂ 21 ಬಾರಿ ವೈಟ್ ವಾಶ್ ಸರಣಿ ಜಯ ಸಾಧಿಸಿದೆ. ನಂತರದ ಸ್ಥಾನ ಅಂದರೆ 2ನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ ತಂಡವಿದ್ದು, ಹರಿಣಗಳ ತಂಡ ಒಟ್ಟು 20 ವೈಟ್ ವಾಶ್ ಸರಣಿ ಜಯ ಸಾಧಿಸಿದೆ. ಉಳಿದಂತೆ 3ನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ತಂಡ 18, 4ನೇ ಸ್ಥಾನದಲ್ಲಿರುವ ವೆಸ್ಟ್ ಇಂಡೀಸ್ ತಂಡ 17 ಬಾರಿ, ತಲಾ 16 ಬಾರಿ ವೈಟ್ ವಾಶ್ ಸರಣಿ ಜಯ ಸಾಧಿಸಿರುವ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಜಂಟಿ 5ನೇ ಸ್ಥಾನದಲ್ಲಿವೆ.
ಇದನ್ನೂ ಓದಿ: 3ನೇ ಏಕದಿನ ಪಂದ್ಯದಲ್ಲೂ ಭಾರತಕ್ಕೆ ಭರ್ಜರಿ ಗೆಲುವು, ವಿಂಡೀಸ್ ವಿರುದ್ಧ 3-0 ಅಂತರದಲ್ಲಿ ಸರಣಿ ಕ್ಲೀನ್ ಸ್ವೀಪ್
6ನೇ ಸ್ಥಾನದಲ್ಲಿ 15 ಬಾರಿ ವೈಟ್ ವಾಶ್ ಸರಣಿ ಜಯ ಸಾಧಿಸಿರುವ ಬಾಂಗ್ಲಾದೇಶವಿದ್ದು, 7ನೇ ಸ್ಥಾನದಲ್ಲಿ 14 ಬಾರಿ ವೈಟ್ ವಾಶ್ ಸರಣಿ ಜಯ ಸಾಧಿಸಿರುವ ಶ್ರೀಲಂಕಾ ತಂಡವಿದೆ. 8ನೇ ಸ್ಥಾನದಲ್ಲಿ 13 ಬಾರಿ ವೈಟ್ ವಾಶ್ ಸರಣಿ ಜಯ ಸಾಧಿಸಿರುವ ಭಾರತ ತಂಡವಿದ್ದು, 9ನೇ ಸ್ಥಾನದಲ್ಲಿರುವ ಜಿಂಬಾಂಬ್ವೆ ತಂಡ 5, 10ನೇ ಸ್ಥಾನದಲ್ಲಿರುವ ಅಫ್ಘಾನಿಸ್ತಾನ ತಂಡ 3 ಬಾರಿ ಮತ್ತು ಜಂಟಿ 11ನೇ ಸ್ಥಾನದಲ್ಲಿರುವ ಕೀನ್ಯಾ ಮತ್ತು ಐರ್ಲೆಂಡ್ ತಂಡಗಳು ತಲಾ 2 ಬಾರಿ ವೈಟ್ ವಾಶ್ ಸರಣಿ ಜಯ ಸಾಧಿಸಿವೆ.
Most Whitewash wins in ODI (3+ MATCHES)
| NO | Team | Whitewash WINS |
| 01 | Pakistan | 21 |
| 02 | South Africa | 20 |
| 03 | New Zealand | 18 |
| 04 | west indies | 17 |
| 05 | Australia & England | 16 |
| 06 | Bangladesh | 15 |
| 07 | Sri Lanka | 14 |
| 08 | India | 13 |
| 09 | Zimbabwe | 05 |
| 10 | Afghanistan | 03 |
| 11 | Kenya & Ireland | 02 |
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


