ಭಾರತ vs ಇಂಗ್ಲೆಂಡ್: 150 ವಿಕೆಟ್ ಸಾಧನೆ, ಮಹಮದ್ ಶಮಿ ದಾಖಲೆ
ಭಾರತ-ಇಂಗ್ಲೆಂಡ್ ನಡುವಿನ ಮೊದಲನೇ ಏಕದಿನ ಪಂದ್ಯದಲ್ಲಿ ಭಾರತ ಎದುರಾಳಿ ತಂಡದ ವಿರುದ್ಧ ಭರ್ಜರಿ 10 ರನ್ ಗಳ ಜಯಗಳಿಸಿದೆ.

ಲಂಡನ್: ಭಾರತ-ಇಂಗ್ಲೆಂಡ್ ನಡುವಿನ ಮೊದಲನೇ ಏಕದಿನ ಪಂದ್ಯದಲ್ಲಿ ಭಾರತ ಎದುರಾಳಿ ತಂಡದ ವಿರುದ್ಧ ಭರ್ಜರಿ 10 ರನ್ ಗಳ ಜಯಗಳಿಸಿದೆ.
ಈ ಪಂದ್ಯದಲ್ಲಿ ಭಾರತದ ಬೌಲಿಂಗ್ ಲೈನ್ ಅತ್ಯುತ್ತಮವಾಗಿತ್ತು. ಭಾರತದ ಪರ ಬೌಲರ್ ಮೊಹಮ್ಮದ್ ಶಮಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಮೊಹಮ್ಮದ್ ಶಮಿ ಕ್ರಿಕೆಟ್ ಜಗತ್ತಿನಲ್ಲಿ ಅತ್ಯುತ್ತಮ ವೇಗಿಯಾಗಿದ್ದು, ಇದು ಲಂಡನ್ ನಲ್ಲಿ ನಡೆದ ಭಾರತ- ಇಂಗ್ಲೆಂಡ್ ಪಂದ್ಯದಲ್ಲಿ ಮತ್ತೊಮ್ಮೆ ಸಾಬೀತಾಗಿದೆ
ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ ಭಾರತದ ಬೌಲರ್ ಗಳ ಆರ್ಭಟಕ್ಕೆ ಇಂಗ್ಲೇಂಡ್ ಬ್ಯಾಟ್ಸ್ಮನ್ ಗಳು ತತ್ತರಿಸಿದರು.
31 ರನ್ ಗಳನ್ನು ನೀಡಿ 3 ವಿಕೆಟ್ ಗಳಿಸಿದ ಮೊಹಮದ್ ಶಮಿ, ಈ ಪಂದ್ಯದ ಮೂಲಕ ಒಟ್ಟು 150 ವಿಕೆಟ್ ಗಳನ್ನು ಗಳಿಸಿದ್ದು, ಅತ್ಯಂತ ಕಡಿಮೆ ಅವಧಿಯಲ್ಲಿ 150 ವಿಕೆಟ್ ಗಳಿಸಿದ ದಾಖಲೆ ಬರೆದಿದ್ದಾರೆ ಹಾಗೂ ಅಜಿತ್ ಅಗರ್ಕರ್ ಅವರ ಹಳೆಯ ದಾಖಲೆಯೊಂದನ್ನು ಮುರಿದಿದ್ದಾರೆ. ಅತ್ಯಂತ ವೇಗವಾಗಿ 150 ವಿಕೆಟ್ ಪಡೆದ ಮೂರನೇ ಭಾರತೀಯ ಜಹೀರ್ ಖಾನ್ ಅವರಾಗಿದ್ದಾರೆ.
ಏಕದಿನ ಫಾರ್ಮೆಟ್ ನಲ್ಲಿ ವೇಗವಾಗಿ 150 ವಿಕೆಟ್ ಪಡೆದ ಭಾರತೀಯ ಬೌಲರ್ ಗಳು
ಮೊಹಮ್ಮದ್ ಶಮಿ-80 ಪಂದ್ಯಗಳು
ಅಜಿತ್ ಅಗರ್ಕರ್-97 ಪಂದ್ಯಗಳು
ಜಹೀರ್ ಖಾನ್-103 ಪಂದ್ಯಗಳು
ಕ್ರಿಕೆಟ್ ಜಗತ್ತಿನಲ್ಲಿ ಈ ಮೈಲಿಗಲ್ಲನ್ನು ವೇಗವಾಗಿ ತಲುಪಿದ ಮೂರನೇ ಅತ್ಯಂತ ವೇಗಿ ಆಟಗಾರ ಎಂಬ ಖ್ಯಾತಿಗೂ ಮೊಹಮ್ಮದ್ ಶಮಿ ಭಾಜನರಾಗಿದ್ದಾರೆ. ಹಾಗೂ ಈ ಸ್ಥಾನವನ್ನು ಅಫ್ಘಾನಿಸ್ಥಾನದ ಲೆಗ್ ಸ್ಪಿನ್ನರ್ ರಶೀದ್ ಖಾನ್ ಅವರೊಂದಿಗೆ ಹಂಚಿಕೊಂಡಿದ್ದಾರೆ. ರಶೀದ್ ಖಾನ್ 80 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


